Advertisement

ಹೋಬರ್ಟ್‌ ಟೆಸ್ಟ್‌ : ಹೆಡ್‌ ಸೆಂಚುರಿ; ಚೇತರಿಸಿದ ಆಸೀಸ್‌

10:42 PM Jan 14, 2022 | Team Udayavani |

ಹೋಬರ್ಟ್‌: ಕೊರೊನಾದಿಂದ ಚೇತರಿಸಿಕೊಂಡ ಟ್ರಾವಿಸ್ ಹೆಡ್‌ ಶತಕವೊಂದನ್ನು ದಾಖಲಿಸಿ ಆ್ಯಶಸ್‌ ಸರಣಿಯ ಹೋಬರ್ಟ್‌ ಟೆಸ್ಟ್‌ ಪಂದ್ಯದ ಮೊದಲ ದಿನ ಆಸ್ಟ್ರೇಲಿಯವನ್ನು ತಲೆಯೆತ್ತಿ ನಿಲ್ಲುವಂತೆ ಮಾಡಿದ್ದಾರೆ.

Advertisement

12 ರನ್ನಿಗೆ 3 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಟದಲ್ಲಿದ್ದ ಆಸೀಸ್‌, 6 ವಿಕೆಟಿಗೆ 241 ರನ್‌ ಗಳಿಸುವಲ್ಲಿ ಯಶಸ್ವಿಯಾಗಿದೆ. ಮಳೆಯಿಂದಾಗಿ ಮೊದಲ ದಿನದಾಟದಲ್ಲಿ 59.3 ಓವರ್‌ ಆಟವಷ್ಟೇ ಸಾಗಿತ್ತು.

ಇದನ್ನೂ ಓದಿ:ಬಿಪಿನ್ ರಾವತ್ ಹೆಲಿಕಾಪ್ಟರ್‌ ದುರಂತಕ್ಕೆ ಪ್ರತಿಕೂಲ ಹವಾಮಾನವೇ ಕಾರಣ!

ಹೆಡ್‌ 101 ರನ್‌ ಬಾರಿಸಿ ಇಂಗ್ಲೆಂಡ್‌ ಬೌಲರ್‌ಗಳ ಮೆರೆದಾಟಕ್ಕೆ ತಣ್ಣೀರೆರಚಿದರು. 113 ಎಸೆತಗಳ ಈ ರಂಜನೀಯ ಆಟದಲ್ಲಿ 12 ಬೌಂಡರಿ ಒಳಗೊಂಡಿತ್ತು. ಇದು ಹೆಡ್‌ ಅವರ 4ನೇ ಟೆಸ್ಟ್‌ ಸೆಂಚುರಿ.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-6 ವಿಕೆಟಿಗೆ 221 (ಹೆಡ್‌ 101, ಗ್ರೀನ್‌ 74, ಲಬುಶೇನ್‌ 44, ರಾಬಿನ್ಸನ್‌ 24ಕ್ಕೆ 2).

Advertisement
Advertisement

Udayavani is now on Telegram. Click here to join our channel and stay updated with the latest news.

Next