ಮೆಲ್ಬರ್ನ್: ಈ ಬಾರಿ ಐಪಿಎಲ್ ನಡೆದರೂ ಅದರಲ್ಲಿ ಆಸ್ಟ್ರೇಲಿಯದ ಕ್ರಿಕೆಟಿಗರು ಪಾಲ್ಗೊಳ್ಳುವ ಸಾಧ್ಯತೆ ಇಲ್ಲ. ಇದಕ್ಕೆ ಕಾರಣ, ಆಸ್ಟ್ರೇಲಿಯ ಸರಕಾರ ರೂಪಿಸಿದ ಕಟ್ಟುನಿಟ್ಟಿನ ಹಾಗೂ ಅಭೂತಪೂರ್ವ ಪ್ರಯಾಣ ನಿಯಮ.
“ನೀವು ಐಪಿಎಲ್‌ಗಾಗಿ ಭಾರತಕ್ಕೆ ಪ್ರಯಾಣಿಸುವುದಾದರೆ ವೃತ್ತಿಪರ ಸುರಕ್ಷಾ ಸಲಹೆ ಪಡೆದುಕೊಳ್ಳಬೇಕು. ನಿಮ್ಮ ಪ್ರಯಾಣದ ಹಾಗೂ ರಕ್ಷಣೆಯ ಜವಾಬ್ದಾರಿ ನಿಮ್ಮದೇ. ಏನೇ ಆದರೂ ಆಸ್ಟ್ರೇಲಿಯ ಸರಕಾರದಿಂದ ನಿಮಗೆ ನೆರವು ಲಭಿಸದು’ ಎಂಬುದಾಗಿ ಆಸ್ಟ್ರೇಲಿಯ ಸರಕಾರ ಈ ನಿಯಮದಲ್ಲಿ ಸೂಚಿಸಿದೆ.
ಆಸ್ಟ್ರೇಲಿಯ ಕ್ರಿಕೆಟಿಗರು ಈ ಬಾರಿಯೂ ಐಪಿಎಲ್ ಆಕರ್ಷಣೆ ಆಗಬೇಕಿತ್ತು.
ಅವರ ವೇಗಿ ಪ್ಯಾಟ್ ಕಮಿನ್ಸ್ 15.5 ಕೋ.ರೂ.ಗಳ ದಾಖಲೆ ಮೊತ್ತಕ್ಕೆ ಕೆಕೆಆರ್ ಪಾಲಾಗಿದ್ದಾರೆ. ಗ್ಲೆನ್ ಮ್ಯಾಕ್ಸ್ ವೆಲ್ ಕೂಡ ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಈಗ ಆಸೀಸ್ ಪ್ರಯಾಣ ನಿಯಮದಿಂದ ಇವರ್ಯಾರೂ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇಲ್ಲ.