Advertisement

ತ್ರಾಸಿ: 94ಸಿ ಹಕ್ಕುಪತ್ರ ವಿತರಣೆ

12:30 AM Feb 05, 2019 | Team Udayavani |

ಕುಂದಾಪುರ:  ಕಚೇರಿ ಕಚೇರಿಗಳಿಗೆ ಜನಸಾಮಾನ್ಯರು ಅಲೆದಾಟ ಮಾಡದಂತೆ ಪಾರದರ್ಶಕ ಆಡಳಿತ ನೀಡುತ್ತ ಜನರ ಬಳಿಗೇ ಧಾವಿಸುತ್ತಿರುವ ಸರಕಾರ ನಮ್ಮದು. ಜಾತಿ, ಪಕ್ಷ ಭೇದ ಮಾಡದೇ ಜನರಿಗೆ ಮೂಲ ಆದ್ಯತೆಯಾದ ವಾಸ್ತವ್ಯ ಜಾಗದ ಹಕ್ಕುಪತ್ರ ನೀಡಲಾಗುತ್ತಿದೆ. ಸರಕಾರದ ವಸತಿ ಯೋಜನೆಗಳನ್ನು ಬಳಸಿಕೊಂಡು ಮನೆ ಕಟ್ಟಿಕೊಳ್ಳಿ ಎಂದು ಉಸ್ತುವಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ| ಜಯಮಾಲಾ ಹೇಳಿದರು.

Advertisement

ಸೋಮವಾರ ತ್ರಾಸಿ ಅಣ್ಣಪ್ಪ ಸಭಾ ಭವನದಲ್ಲಿ ವಂಡ್ಸೆ ಹೋಬಳಿ ಹಾಗೂ ಬೈಂದೂರು ತಾಲೂಕಿನ ಫ‌ಲಾನುಭವಿಗಳಿಗೆ 94ಸಿ ಹಕ್ಕುಪತ್ರ ವಿತರಿಸಿ ಅವರು ಮಾತ ನಾಡಿದರು.ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಜಿ.ಪಂ. ಸದಸ್ಯರಾದ ಶೋಭಾ ಜಿ. ಪುತ್ರನ್‌, ರೋಹಿತ್‌ ಕುಮಾರ್‌ ಶೆಟ್ಟಿ, ಬಾಬು ಹೆಗ್ಡೆ, ಗೌರಿ ದೇವಾಡಿಗ, ಸುರೇಶ್‌ ಬಟ್ವಾಡಿ, ಜ್ಯೋತಿ ಎಂ., ತಾ.ಪಂ. ಅಧ್ಯಕ್ಷೆ ಶ್ಯಾಮಲಾ ಕುಂದರ್‌, ಸ್ಥಾಯೀ ಸಮಿತಿ ಅಧ್ಯಕ್ಷ ನಾರಾಯಣ ಕೆ. ಗುಜ್ಜಾಡಿ, ಸದಸ್ಯರಾದ ಕರಣ್‌ ಪೂಜಾರಿ, ಪುಷ್ಪರಾಜ ಶೆಟ್ಟಿ, ಬಾಬು ದೇವಾಡಿಗ, ವಾಸುದೇವ ಪೈ, ರಾಜು ದೇವಾಡಿಗ, ಕಾರ್ಯನಿರ್ವಹಣಾಧಿಕಾರಿ ಕಿರಣ್‌ ಪೆಡೆ°àಕರ್‌ ಉಪಸ್ಥಿತರಿದ್ದರು.

ಕುಂದಾಪುರ ತಹಶೀಲ್ದಾರ್‌ ತಿಪ್ಪೇಸ್ವಾಮಿ ಸ್ವಾಗತಿಸಿ, ಬೈಂದೂರು ಶಿಕ್ಷಣಾಧಿಕಾರಿ ಒ.ಆರ್‌. ಪ್ರಕಾಶ್‌ ಅವರು ಪ್ರಸ್ತಾವಿಸಿದರು. ಸದಾನಂದ ಬೈಂದೂರು ನಿರ್ವಹಿಸಿದರು.ವಂಡ್ಸೆ ಹೋಬಳಿಯ 208, ಬೈಂದೂರು ತಾಲೂಕಿನ 51 ಒಟ್ಟು 259 ಫ‌ಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. 29 ವಿಧವಾ ಮಾಸಾಶನ, 49 ಮಂದಿಗೆ ಸಂಧ್ಯಾ ಸುರಕ್ಷಾ ಮತ್ತು ಇಂದಿರಾಗಾಂಧಿ ವೃದ್ಧಾಪ್ಯ ವೇತನ ಮಾಸಾಶನ, ಒಟ್ಟು 80 ಮಂದಿಗೆ ಪಿಂಚಣಿ ಆದೇಶವನ್ನು ವಿತರಿಸಲಾಯಿತು. 

ಅಧಿಕಾರಿಗಳಿಗೆ ಸೂಚನೆ
ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಜಾತ್ಯತೀತ, ಪಕ್ಷಾತೀತವಾಗಿ ಅರ್ಹರಿಗೆ ಪ್ರಾಮಾಣಿಕವಾಗಿ 94ಸಿ ಹಕ್ಕುಪತ್ರ ನೀಡಬೇಕೆಂದು ಅಧಿಕಾರಿ ಗಳಿಗೆ ಸೂಚಿಸಿದ್ದೇನೆ. ಸಮಾಜದ ಎಲ್ಲ ವರ್ಗ ದವರಿಗೆ ಶಾಸಕನಾಗಿ ಸ್ಪಂದಿಸುತ್ತಿದ್ದೇನೆ. ಅಧಿಕಾರಿಗಳು ಕೂಡ ಇದೇ ರೀತಿ ಸರಕಾರದ ಸವಲತ್ತು ಅರ್ಹರಿಗೆ ತಲುಪಿಸಬೇಕು ಎಂದರು.

ಸಚಿವೆ ಡಾ| ಜಯಮಾಲಾ ಸಮಾರಂಭ ಉದ್ಘಾಟಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next