Advertisement

ರೈಲ್ವೆ ಮೊರೆ ಹೋದ ಜನತೆ

04:45 PM Apr 10, 2021 | Team Udayavani |

ಗದಗ: 6ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಮತ್ತಿತರೆ ಬೇಡಿಕೆಗಳಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಠಾವಧಿ ಮುಷ್ಕರಶುಕ್ರವಾರ ಮೂರನೇ ದಿನಕ್ಕೆ ಮುಂದುವರಿಯಿತು.

Advertisement

ಸಾರಿಗೆ ಬಸ್‌ ಸಮಸ್ಯೆಯಿಂದಾಗಿ ಅನೇಕರು ರೈಲ್ವೆ ಪ್ರಯಾಣಕ್ಕೆ ಮೊರೆಹೋದರು. ಈ ನಡುವೆ ಮಧ್ಯಾಹ್ನದಬಳಿಕ ಸಾರಿಗೆ ಸಂಸ್ಥೆಯ ನಾಲ್ಕು ಬಸ್‌ಗಳುಹುಬ್ಬಳ್ಳಿಗೆ ಕಾರ್ಯಾಚರಣೆ ಆರಂಭಿಸಿದವು. ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಸಕಾಲಕ್ಕೆ ಬಸ್‌ ಇಲ್ಲದೇ ಪ್ರಯಾಣಿಕರಪರದಾಟ ಮುಂದುವರಿದಿದೆ. ಮುಷ್ಕರ ಆರಂಭಗೊಂಡು ಮೂರು ದಿನ ಕಳೆದರೂಬಸ್‌ ಸೇವೆ ಪುನಾರಂಭಗೊಳ್ಳದ್ದರಿಂದ ಕೆಲವರು ರೈಲ್ವೆ ಪ್ರಯಾಣಕ್ಕೆ ಮೊರೆ ಹೋದರು. ಹುಬ್ಬಳ್ಳಿ, ಧಾರವಾಡ,ಬೆಳಗಾವಿಗೆ ತೆರಳುವವರು ಹಾಗೂಹುಬ್ಬಳ್ಳಿಯಿಂದ ಬೇರೆ ರೈಲುಗಳ ಸಂಪರ್ಕ ದೊರೆಯುವ ವಿಶ್ವಾಸದಿಂದ ಅನೇಕರು ರೈಲ್ವೆ ಪ್ರಯಾಣಕ್ಕೆ ಮಣೆ ಹಾಕಿದರು.

ಕೊಪ್ಪಳ, ಹೊಸಪೇಟೆ, ಗಂಗಾವತಿಮಾರ್ಗವಾಗಿ ಚಲಿಸುವ ರೈಲಿನಲ್ಲಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ರೈಲ್ವೆಪ್ರಯಾಣಕ್ಕಾಗಿ ಕೆಲವರು ಮುಂಗಡವಾಗಿಸೀಟು ಕಾಯ್ದಿರಿಸಿದರೆ, ಇನ್ನೂ ಕೆಲವರು,ರೈಲುಗಳಿಗೆ ಕೌಂಟರ್‌ನಲ್ಲೇ ಸಾಮಾನ್ಯದರ್ಜೆ ಟಿಕೆಟ್‌ ಪಡೆದು ಪ್ರಯಾಣಬೆಳೆಸಿದರು. ಹೀಗಾಗಿ, ಶುಕ್ರವಾರ ನಗರದ ರೈಲ್ವೆ ನಿಲ್ದಾಣದಲ್ಲಿ ಜನಜಂಗುಳಿ ಹೆಚ್ಚಿತ್ತು.

ಸಾರಿಗೆ-ಖಾಸಗಿ ಚಾಲಕರ ವಾಗ್ವಾದ: ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ಖಾಸಗಿ ವಾಹನಗಳು ಬಸ್‌ ನಿಲ್ದಾಣಗಳಿಂದ ಸಂಚಾರಆರಂಭಿಸುತ್ತಿವೆ. ಮುಷ್ಕರದ ಮಧ್ಯೆಯೂಶುಕ್ರವಾರ ಮಧ್ಯಾಹ್ನದ ಬಳಿಕ ಒಂದಾದಬಳಿಕ ಮತ್ತೂಂದರಂತೆ ನಾಲ್ಕು ಬಸ್‌ಗಳು ಪಂ|ಪುಟ್ಟರಾಜಕವಿ ಗವಾಯಿ ಬಸ್‌ನಿಲ್ದಾಣಕ್ಕೆ ಆಗಮಿಸಿದ್ದು, ಹುಬ್ಬಳ್ಳಿ ಫ್ಲಾಟ್‌ ಫಾರ್ಮ್ನಲ್ಲಿ ನಿಂತಿದ್ದವು. ಇದರಿಂದಬೇಸರಗೊಂಡ ಖಾಸಗಿ ವಾಹನಗಳಮಾಲಿಕರು, ಒಮ್ಮೆ ಮುಷ್ಕರ ಎನ್ನುತ್ತೀರಿಮತ್ತೆ ಬಸ್‌ ತಂದೀರಿ. ನಮ್ಮ ವ್ಯಾಪಾರಕ್ಕೆಒಡೆತ ಬೀಳುತ್ತದೆ. ಒಂದು ನಿಲುವುಸ್ಪಷ್ಟಪಡಿಸಬೇಕು ಎಂದು ಸಾರಿಗೆ ಬಸ್‌ಮಾಲಿಕರೊಂದಿಗೆ ವಾಗ್ವಾದ ನಡೆಸಿದರು.

ಈ ವೇಳೆ ಮಾತಿನ ಚಕಮಕಿ ತಾರಕಕ್ಕೇರಿ, ಖಾಸಗಿ ವಾಹನಗಳ ಮಾಲೀಕರು, ತಮ್ಮವಾಹನಗಳೊಂದಿಗೆ ಬಸ್‌ ನಿಲ್ದಾಣದಿಂದಜಾಗ ಖಾಲಿ ಮಾಡಿದರು. ಈ ಬಗ್ಗೆಸುದ್ದಿ ತಿಳಿಯುತ್ತಿದ್ದಂತೆ ಸಾರಿಗೆ ಅಧಿಕಾರಿ ಬಾಲಚಂದ್ರ ಸ್ಥಳಕ್ಕೆ ಆಗಮಿಸಿ ವಿವಾದವನ್ನು ಶಮನಗೊಳಿಸಿದರು.

Advertisement

ಆದರೆ, ಪುಟ್ಟರಾಜಕವಿ ಗವಾಯಿಗಳ ಬಸ್‌ ನಿಲ್ದಾಣ ಮತ್ತು ಕೇಂದ್ರ ಬಸ್‌ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಳೆದೆರಡು ದಿನಗಳಿಂತ ಕಡಿಮೆಯಾಗಿತ್ತು.ನೆರೆದಿದ್ದ ಬೆರಳೆಣಿಕೆಷ್ಟು ಪ್ರಯಾಣಿಕರನ್ನುಅತ್ತ ಕೊರೆದೊಯ್ಯಲಾಗದೇ, ಇತ್ತ ಬಿಟ್ಟು ಹೋಗದ ಪರಿಸ್ಥಿತಿಯಿಂದ ಖಾಸಗಿ ವಾಹನಗಳ ಮಾಲಿಕರು ಪರದಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next