ಬೆಂಗಳೂರು: ಸಾರಿಗೆ ನೌಕರರ ವೇತನ ಹೆಚ್ಚಳ ಪ್ರಸ್ತಾವವನ್ನು ಚುನಾವಣ ನೀತಿಸಂಹಿತೆ ಜಾರಿಗೆ ಮುಂಚಿತ ವಾಗಿಯೇ ಇತ್ಯರ್ಥಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
Advertisement
ಸಾರಿಗೆ ಸಚಿವ ಶ್ರೀರಾಮುಲು ನೇತೃತ್ವದ ಸಭೆಯಲ್ಲಿ ವಿಚಾರ ಪ್ರಸ್ತಾವವಾಗಿದ್ದು ಸಿಎಂ ಬೊಮ್ಮಾಯಿ ಜತೆ ಚರ್ಚಿಸಿ ನಿಲುವು ಪ್ರಕಟಿಸುವ ಭರವಸೆ ನೀಡಲಾಗಿದೆ.
ನೌಕರರು ಶೇ. 25ರಷ್ಟು ಹೆಚ್ಚಳಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಸರಕಾರ ಗರಿಷ್ಠ ಶೇ. 10ರಷ್ಟು ವೇತನ ಹೆಚ್ಚಿಸುವ ಮುನ್ಸೂಚನೆ ನೀಡಿದೆ.