Advertisement

Bengaluru: ಹೊರ ರಾಜ್ಯದಿಂದ ಮಾಂಸ ಸಾಗಣೆ; ವ್ಯಾಪಾರಿಗಳಿಗೆ ಪೊಲೀಸ್‌ ನೋಟಿಸ್‌

11:09 AM Jul 30, 2024 | Team Udayavani |

ಬೆಂಗಳೂರು: ರಾಜಸ್ಥಾನದಿಂದ ರೈಲಿನಲ್ಲಿ ನಗರಕ್ಕೆ ಮಾಂಸ ಸಾಗಣೆ ಪ್ರಕರಣ ಸಂಬಂಧ ಅಬ್ದುಲ್‌ ರಜಾಕ್‌ ಮತ್ತು ರಾಜಸ್ಥಾನ ಹಾಗೂ ನಗರದ ಮಾಂಸ ವ್ಯಾಪಾರಿಗಳಿಗೆ ಕಾಟನ್‌ ಪೇಟೆ ಪೊಲೀಸರು ಸೋಮವಾರ ನೋಟಿಸ್‌ ನೀಡಿದ್ದಾರೆ.

Advertisement

ರಾಜಸ್ಥಾನದಿಂದ ನಗರಕ್ಕೆ ರೈಲಿನಲ್ಲಿ ಮಾಂಸ ಪಾರ್ಸೆಲ್‌ ಕಳುಹಿಸಿದವರು ಹಾಗೂ ಆ ಮಾಂಸವನ್ನು ನಗರಕ್ಕೆ ತರಿಸಿ ಕೊಂಡ ಮಾಂಸದ ವ್ಯಾಪಾರಿ ಬಗ್ಗೆ ರೈಲ್ವೆ ಇಲಾಖೆ ಮಾಹಿತಿ ನೀಡಿತ್ತು. ಜತೆಗೆ ನಗರದ ಮಾಂಸದ ವ್ಯಾಪಾರಿಗಳ ಪರವಾಗಿ ರೈಲ್ವೆ ನಿಲ್ದಾಣದಲ್ಲಿ ಹಿಂದೂ ಕಾರ್ಯಕರ್ತರ ಜತೆ ವಾಗ್ವಾದ ನಡೆಸಿದ ಅಬ್ದುಲ್‌ ರಜಾಕ್‌ಗೂ ನೋಟಿಸ್‌ ಕೊಡಲಾಗುತ್ತದೆ. ರಾಜಸ್ಥಾನದ ವ್ಯಕ್ತಿಯನ್ನು ಈಗಾಗಲೇ ಫೋನ್‌ ಮೂಲಕ ಸಂಪರ್ಕಿಸಲಾಗಿದ್ದು, ಮೌಖೀಕವಾಗಿ ವಿಚಾರಣೆ ಹಾಜರಾ ಗುವಂತೆ ಸೂಚಿಸಲಾಗಿದೆ.

ಜತೆಗೆ ಮಂಗಳವಾರ ಆತನ ಮನೆ ವಿಳಾಸ ಮತ್ತು ವಾಟ್ಸ್‌ಆ್ಯಪ್‌ ಮೂಲಕ ನೋಟಿಸ್‌ ಕಳುಹಿಸಲಾಗುತ್ತದೆ. ಇನ್ನು ಸಾವಿರಾರು ಕೆ.ಜಿ.ಗಟ್ಟಲೇ ಮಾಂಸ ಒಬ್ಬ ವ್ಯಾಪಾರಿಯ ಹೆಸರಿಗೆ ಬಂದಿದ್ದು, ಆತ ನಗರದಲ್ಲಿ ಬೇರೆ ಯಾರಿಗೆ ವಿತರಣೆ ಮಾಡುತ್ತಿದ್ದ ಎಂಬ ಮಾಹಿತಿ ಪಡೆದುಕೊಂಡು ಅವರಿಗೂ ನೋಟಿಸ್‌ ನೀಡಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಕರಣದ ಹಿನ್ನೆಲೆ: ಜುಲೈ 26 ರಾಜಸ್ಥಾನದಿಂದ ನಗರದ ಕೆಎಸ್‌ಆರ್‌ ರೈಲು ನಿಲ್ದಾಣಕ್ಕೆ 90 ಬಾಕ್ಸ್‌ಗಳಲ್ಲಿ ಸುಮಾರು 4,500 ಕೆ.ಜಿ.ಮಾಂಸ ಪಾರ್ಸೆಲ್‌ ಬಂದಿತ್ತು. ಈ ಮಾಂಸ ನಾಯಿ ಮಾಂಸ. ಕಳಪೆ ಗುಣಮಟ್ಟದ ಮಾಂಸ. ತಿನ್ನಲು ಯೋಗ್ಯವಲ್ಲದ ಮಾಂಸ ಎಂದು ರಾಷ್ಟ್ರ ರಕ್ಷಣೆ ಪಡೆ ಸಂಘಟನೆ ಮುಖಂಡ ಪುನೀತ್‌ ಕೆರೆಹಳ್ಳಿ ಹಾಗೂ ಸಹಚರರು ಆರೋಪಿಸಿದ್ದರು. ಮಾಂಸವಿದ್ದ ಬಾಕ್ಸ್‌ಗಳನ್ನು ತೆರೆದು ಪರಿಶೀಲಿಸುವಂತೆ ರೈಲು ನಿಲ್ದಾಣದಲ್ಲಿ ಗಲಾಟೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next