Advertisement
ಖಾತೆ ತೆರೆದ ಒವೈಸಿ ಪಕ್ಷಅಸಾದುದ್ದೀನ್ ಒವೈಸಿಯ ಎಐಎಂಐಎಂ ಪಕ್ಷ ಬಿಹಾರದ ವಿಧಾನಸಭೆ ಉಪ ಚುನಾವಣೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ತನ್ನ ಖಾತೆ ತೆರೆದಿದೆ. ಈ ಮೂಲಕ ಹಿಂದಿ ಹಾರ್ಟ್‌ಲ್ಯಾಂಡ್‌ನಲ್ಲೂ ಪಕ್ಷ ನೆಲೆಯೂರುವ ಲಕ್ಷಣಗಳು ಗೋಚರಿಸಿದೆ. ಕೃಷ್ಣಗಂಜ್ ಕ್ಷೇತ್ರದ ಎಐಎಂಐಎಂ ಅಭ್ಯರ್ಥಿ ಖಮ್ರುಲ್ ಹೋಡಾ 19,889 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸ್ವೀಟಿ ಸಿಂಗ್ ವಿರುದ್ಧ ಗೆದ್ದಿದ್ದಾರೆ. ಬಿಹಾರದಲ್ಲಿ ಆಡಳಿತಾರೂಢ ಜೆಡಿಯುಗೆ ಹಿನ್ನಡೆಯಾಗಿದ್ದು, ನಾಲ್ಕರ ಪೈಕಿ ಒಂದರಲ್ಲಷ್ಟೇ ಜಯ ಗಳಿಸಿದೆ. ಆರ್‌ಜೆಡಿ ಎರಡರಲ್ಲಿ ಗೆದ್ದಿದೆ.
ಗುಜರಾತ್‌ನ 6 ಅಸೆಂಬ್ಲಿ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 3 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ವಿಶೇಷವೆಂದರೆ, ಹಿಂದುಳಿದ ವರ್ಗಗಳ ನಾಯಕ ಮತ್ತು ಬಿಜೆಪಿ ಅಭ್ಯರ್ಥಿ ಅಲ್ಪೇಶ್ ಠಾಕೂರ್ ಗುಜರಾತ್ ಉಪಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ರಾಧಾನ್ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಲ್ಪೇಶ್, ಕಾಂಗ್ರೆಸ್ ಅಭ್ಯರ್ಥಿ ರಘುಬಾಯ್ ದೇಸಾಯ್ ವಿರುದ್ಧ 3,500 ಮತಗಳ ಅಂತರದಿಂದ ಸೋತಿದ್ದಾರೆ. ಕಾಂಗ್ರೆಸ್ ಶಾಸಕರಾಗಿದ್ದ ಅಲ್ಪೇಶ್ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಉತ್ತರಪ್ರದೇಶದಲ್ಲಿ ಎಸ್‌ಪಿಗೆ ಲಾಭ
ಉ.ಪ್ರದೇಶದ 11 ಕ್ಷೇತ್ರಗಳ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಲಾಭ ವಾಗಿದೆ. 11ರ ಪೈಕಿ ಎನ್‌ಡಿಎಗೆ 8ರಲ್ಲಿ ಜಯ ಸಿಕ್ಕರೆ, ಎಸ್‌ಪಿ 3 ಸ್ಥಾನಗಳನ್ನು ತನ್ನದಾಗಿ ಸಿಕೊಂಡಿದೆ. ಬಿಎಸ್‌ಪಿ ಮತ್ತು ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ.
Related Articles
3, ಎಲ್‌ಡಿಎಫ್ಗೆ 2
ಕೇರಳದಲ್ಲಿನ ಆಡಳಿತಾರೂಢ ಎಲ್‌ಡಿಎಫ್ಗೆ ಐದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಹಿನ್ನಡೆ ಉಂಟಾಗಿದೆ. ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆದ್ದರೆ, ಸಿಪಿಎಂ ನೇತೃತ್ವದ ಎಲ್‌ಡಿಎಫ್ 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಶೂನ್ಯ ಸಂಪಾದಿಸಿದೆ. ಬಹುನಿರೀಕ್ಷಿತ ಮಂಜೇಶ್ವರದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಭ್ಯರ್ಥಿ ಎಂ.ಸಿ.ಕರೀಮುದ್ದೀನ್ 7,923 ಮತಗಳ ಅಂತರದಿಂದ ಗೆದ್ದಿದ್ದಾರೆ. ಅವರಿಗೆ 65,407 ಮತಗಳು ಬಂದಿದ್ದರೆ, ಬಿಜೆಪಿ ಅಭ್ಯರ್ಥಿ ಕುಂಟಾರು ರವೀಶ ತಂತ್ರಿ ಅವರಿಗೆ 57,484 ಮತಗಳು, ಸಿಪಿಎಂ ಅಭ್ಯರ್ಥಿ ಶಂಕರ ರೈ ಅವರಿಗೆ 38,233 ಮತಗಳು ಸಿಕ್ಕಿವೆ. ವಟ್ಟಿಯೂರುಕಾವು ಕ್ಷೇತ್ರದಲ್ಲಿ ಎಲ್‌ಡಿಎಫ್ನ ವಿ.ಕೆ.ಪ್ರಶಾಂತ್ ಕಾಂಗ್ರೆಸ್ ಅಭ್ಯರ್ಥಿ ಕೆ.ಮೋಹನ್ ಕುಮಾರ್ ವಿರುದ್ಧ 14,465 ಮತಗಳ ಅಂತರದಿಂದ ಗೆದ್ದಿದ್ದಾರೆ. ಕೊನ್ನಿ ಕ್ಷೇತ್ರದಿಂದ ಎಲ್‌ಡಿಎಫ್ನ ಕೆ.ಯು.ಜೆನೀಶ್ ಕುಮಾರ್ 9,953 ಮತಗಳಿಂದ ಗೆದ್ದಿದ್ದಾರೆ. ಅರೂರ್‌ನಲ್ಲಿ ಶನಿಮೋಳ್ ಉಸ್ಮಾನ್ 69,356 ಮತ ಪಡೆದು ಜಯಸಾಧಿಸಿದ್ದಾರೆ. ಕಾಂಗ್ರೆಸ್‌ನ ಟಿ.ಜೆ.ವಿನೋದ್ ಎರ್ನಾಕುಳಂನಲ್ಲಿ 37,891 ಮತಗಳನ್ನು ಪಡೆದು ಗೆದ್ದಿದ್ದಾರೆ. ಈ ಜಯದಿಂದ ಕೇರಳ ವಿಧಾನಸಭೆಯಲ್ಲಿ ಎಲ್‌ಡಿಎಫ್ ಸ್ಥಾನಗಳ ಸಂಖ್ಯೆ 93, ಯುಡಿಎಫ್ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಒಟ್ಟು ಸದಸ್ಯ ಬಲ 140.
Advertisement