Advertisement

ಸ್ಟ್ರಾಂಗ್‌ ರೂಂಗೆ ವಿವಿಪ್ಯಾಟ್‌ ಸಹಿತ ಮತಯಂತ್ರಗಳ ರವಾನೆ

08:10 PM Apr 25, 2019 | Team Udayavani |

ಕಾಸರಗೋಡು: ಕಾಸರಗೋಡು ಲೋಕಸಭೆ ಚುನಾವಣೆಗಾಗಿ ಬಳಸಿದ ವಿವಿಪ್ಯಾಟ್‌ ಸಹಿತ ಮತಯಂತ್ರ ಗಳನ್ನು ಬುಧವಾರ ಪಡನ್ನಕ್ಕಾಡ್‌ ನೆಹರೂ ಕಲಾ-ವಿಜ್ಞಾನ ಕಾಲೇಜಿನ ಸ್ಟ್ರಾಂಗ್‌ ರೂಂಗೆ ತಲುಪಿಸಲಾಗಿದೆ.

Advertisement

7 ವಿಧಾನಸಭೆ ಕ್ಷೇತ್ರಗಳ ಮತಯಂತ್ರಗಳನ್ನು ಸ್ಟ್ರಾಂಗ್‌ ರೂಂ ನಲ್ಲಿ ಇರಿಸಲಾಗಿದೆ. ಕಾಸರಗೋಡು ಸರಕಾರಿ ಕಾಲೇಜಿನಲ್ಲಿ, ಪಡನ್ನಕ್ಕಾಡ್‌ ನೆಹರೂ ಕಲಾ-ವಿಜ್ಞಾನ ಕಾಲೇಜುಗಳ ಸ್ವೀಕಾರ ಕೇಂದ್ರಗಳ ಮೂಲಕ ವೋಟಿಂಗ್‌ ಸಾಮಗ್ರಿಗಳನ್ನು ಸ್ಟ್ರಾಂಗ್‌ ರೂಂಗೆ ವರ್ಗಾಯಿಸಲಾಗಿದೆ.

ಕಾಸರಗೋಡು ಸರಕಾರಿ ಕಾಲೇಜಿನಿಂದ ಮತಗಟ್ಟೆ ಕರ್ತವ್ಯ ಸಿಬಂದಿಯಿಂದ ಪಡೆಯಲಾದ ಸಾಮಗ್ರಿಗಳನ್ನು ಬಿಗಿ ಪೊಲೀಸ್‌ ಭದ್ರತೆಯೊಂದಿಗೆ ಪಡನ್ನಕ್ಕಾಡಿಗೆ ತರಲಾಗಿತ್ತು. ಜಿಲ್ಲಾ ಚುನಾ ವಣೆ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು, ಜಿಲ್ಲಾ ನಿರೀಕ್ಷಕ ಎಸ್‌. ಗಣೇಶ್‌, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ವಿ.ಪಿ. ಅಬ್ದು ರಹಮಾನ್‌, 7 ವಿಧಾನ ಸಭೆ ಉಪಚುನಾವಣೆ ಅಧಿಕಾರಿಗಳಾದ ಉಪಜಿಲ್ಲಾಧಿಕಾರಿ ಅರುಣ್‌ ಕೆ. ವಿಜಯನ್‌, ಎಲ್‌.ಆರ್‌.ಸಹಾಯಕ ಜಿಲ್ಲಾಧಿಕಾರಿ ಎಸ್‌.ಎಲ್‌. ಸಜಿ ಕುಮಾರ್‌, ಎಲ್‌.ಆರ್‌. ಸಹಾಯಕ ಜಿಲ್ಲಾಧಿ ಕಾರಿ ಪಿ.ಆರ್‌.ರಾಧಿಕಾ, ಕಣ್ಣೂರು ಎಲ್‌.ಆರ್‌. ಸಹಾ ಯಕ ಜಿಲ್ಲಾಧಿಕಾರಿ ರಶೀದ್‌ ಮುದುಕಂಡಿ, ಎಲ್ಲ ಅಭ್ಯರ್ಥಿಗಳ ಪ್ರತಿನಿಧಿಗಳು ಮೊದಲಾದವರ ಸಮಕ್ಷಮದಲ್ಲಿ ಮತಯಂತ್ರ ಗಳನ್ನು ಸೀಲ್‌ ನಡೆಸಿ ಸ್ಟಾÅಂಗ್‌ ರೂಂ ನಲ್ಲಿ ಇರಿಸಲಾಗಿದೆ.

ತ್ರಿಸ್ತರ ಸುರಕ್ಷೆ ವ್ಯವಸ್ಥೆಯಲ್ಲಿ ಸ್ಟ್ರಾಂಗ್‌ ರೂಂ ಸಿದ್ಧಪಡಿಸಲಾಗಿದೆ. ಕೇಂದ್ರ ಸೇನೆ, ರಾಜ್ಯ ಪೊಲೀಸ್‌, ಕಾರ್ಯಕಾರಿ ನ್ಯಾಯಮೂರ್ತಿ ಸೇರಿದಂತೆ ತ್ರಿಸ್ತರ ಸುರಕ್ಷೆ ವ್ಯವಸ್ಥೆಯಿದೆ. ಮತಗಣನೆಯ ದಿನವಾದ ಮೇ 23ರಂದು ಮಾತ್ರ ಸ್ಟ್ರಾಂಗ್‌ ರೂಂ ತೆರೆಯಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next