Advertisement

ಟೇಕ್ ಆಫ್ ಗೆ ಸಿದ್ಧವಾಗುತ್ತಿದೆ ಫ್ಲೈಯಿಂಗ್ ಕಾರ್…! ಇನ್ಮೇಲೆ ಪ್ರಯಾಣ ಮತ್ತಷ್ಟು ಸುಖಮಯ…

10:31 AM Feb 17, 2021 | Team Udayavani |

ನವ ದೆಹಲಿ : ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಮತ್ತು ವಿಜ್ಞಾನ ದಿನನಿತ್ಯ ಮೇಲ್ಮುಖ ಬೆಳವಣಿಗೆಯನ್ನು ಕಾಣುತ್ತಿದೆ. ಅಷ್ಟಲ್ಲದೇ ಇಡೀ ವಿಶ್ವ ತಂತ್ರಜ್ಞಾನಕ್ಕೆ ಒಳಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸ ಅನ್ವೇಷಣೆಯೊಂದು ಪರಿಚಯವಾಗುತ್ತಿದೆ

Advertisement

ಹೌದು, ಅಮೇರಿಕಾದ ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರೇಶನ್ ಪ್ಲೈಯಿಂಗ್ ಕಾರನ್ನು ಅನುಮೋದಿಸಿದೆ. ಸದ್ಯದಲ್ಲೇ ಇದು ಬಿಡುಗಡೆಯಾಗಲಿದ್ದು, ಫ್ಲೈಯಿಂಗ್ ಕಾರ್ ನತ್ತ ಇಡೀ ವಿಶ್ವ ಮುಖ ಮಾಡಿ ನಿಂತಿದೆ.

ಓದಿ : ರಾಬರ್ಟ್‌ ಟ್ರೇಲರ್‌ ಗೆ ಮಾಸ್‌ ಫಿದಾ: ಮತ್ತಷ್ಟು ಹೆಚ್ಚಾಯ್ತು ದರ್ಶನ್‌ ಚಿತ್ರದ ನಿರೀಕ್ಷೆ !

100 ಎಮ್ ಪಿ ಎಚ್ ವೇಗದಲ್ಲಿ 10000 ಅಡಿಗಳಷ್ಟು ಎತ್ತರಕ್ಕೆ ಹಾರಬಲ್ಲ ಟೆರ್ರಾಫುಜಿಯಾ ಟ್ರಾನ್ಸಿಶನ್, ಫೆಡರಲ್ ಏಜೆನ್ಸಿಯಿಂದ ವಿಶೇಷ ಲೈಟ್-ಸ್ಪೋರ್ಟ್ ಏರ್‌ ಕ್ರಾಫ್ಟ್, ವಾಯು ಯೋಗ್ಯತೆ(airworthiness) ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ. ಇದು ಮುಖ್ಯವಾಗಿ ಟೇಕ್‌ ಆಫ್‌ ಗೆ  ಗ್ರೀನ್ ಸಿಗ್ನಲ್ ನ್ನು ನೀಡಿದೆ.

ಟ್ರಾನ್ಸಿಶನ್ ನಲ್ಲಿ ಚಾಲಕ, ಒಂದು ನಿಮಿಷದೊಳಗೆ ಪ್ಲೈಯಿಂಗ್ ಮೋಡ್ ಗೆ ಬದಲಾಯಿಸಿಕೊಳ್ಳಲು ಸಾಧ್ಯವಾಗುವಂತಹ ಸೌಲಭ್ಯವನ್ನು ಹೊಂದಿದ್ದು, ಟ್ರಾಫಿಕ್ ಸಮಸ್ಯೆಯನ್ನು ಹೋಗಲಾಡಿಸಲು ಈ ತಂತ್ರಜ್ಞಾನ ಯೋಗ್ಯವಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನು ಲ್ಯಾಂಡ್ ಮಾಡಲು ವಿಶೇಷ ನಿಲ್ದಾಣಗಳೇನು ಬೇಕಾಗಿಲ್ಲ, ರಸ್ತೆಯಲ್ಲೇ ಯಾವುದೇ ಸಮಯದಲ್ಲೂ ಬೇಕಾದರೂ ನಿಲ್ಲಿಸಬಹುದಾಗಿದೆ.

Advertisement

ಓದಿ : ಜಪಾನ್, ಬ್ರೆಜಿಲ್, ಭಾರತದಲ್ಲಿ ಟ್ವಿಟ್ಟರ್ ಪರಿಚಯಿಸಿದೆ ‘ವಾಯ್ಸ್ ಫೀಚರ್’: ವಿಶೇಷತೆಗಳೇನು?

ಈ ಪ್ಲೈಯಿಂಗ್ ಕಾರು 27-ಅಡಿ ರೆಕ್ಕೆಗಳನ್ನು ಹೊಂದಿದ್ದು, ಅದು ಸಣ್ಣ ಗಾತ್ರಕ್ಕೆ ಮಡಚಿಕೊಳ್ಳುತ್ತದೆ. ಪ್ಲೇನ್ ಎಂಜಿನ್ ಪ್ರೀಮಿಯಂ ಗ್ಯಾಸೋಲಿನ್ ಅಥವಾ 100 ಎಲ್ ಎಲ್ ಏರೋಪ್ಲೇನ್ ಇಂಧನದಲ್ಲಿ ಚಲಿಸಬಲ್ಲದು, ಆದರೆ ಕಾರನ್ನು ಹೈಬ್ರಿಡ್-ಎಲೆಕ್ಟ್ರಿಕ್ ಮೋಟರ್ ನ ಸಹಾಯದಿಂದ ಚಲಾಯಿಸಬೇಕಾಗುತ್ತದೆ. ವಾಹನದ ಪ್ರಮಾಣಿತ ಲಕ್ಷಣಗಳು ನಾಲ್ಕು ಚಕ್ರಗಳ ಹೈಡ್ರಾಲಿಕ್ ಡಿಸ್ಕ್ ಬ್ರೇಕ್, ಕಟ್ಟುನಿಟ್ಟಾದ ಕಾರ್ಬನ್ ಫೈಬರ್ ಸುರಕ್ಷತಾ ಪಂಜರ ಮತ್ತು ಏರ್ಫ್ರೇಮ್ ಧುಮುಕುಕೊಡೆ. ಇದು ಸರಿಸುಮಾರು 1,300 ಪೌಂಡ್ (590 ಕೆಜಿ) ತೂಕದಿಂದ ಕೂಡಿದೆ.

ಪ್ರಸ್ತುತ,  ಈ ಫ್ಲೈಯಿಂಗ್ ಕಾರನ್ನು ಪೈಲಟ್‌ ಗಳು ಮತ್ತು ಫ್ಲೈಟ್ ಸ್ಕೂಲ್ ಗಳಿಗೆ ಮಾತ್ರ ಅನುಮತಿಯನ್ನು ನೀಡಲಾಗಿದೆ., ಆದರೂ ಅದರ ಕಾರಿನ ಘಟಕಗಳು ‘ಸ್ಟ್ರೀಟ್ ಲೀಗಲ್’ ಆಗಲು ಇನ್ನೊಂದು ವರ್ಷ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ. ಚೀನಾದ ಒಡೆತನದ ಟೆರ್ರಾಫುಜಿಯಾ ‘roadable aircraft’ವೊಂದನ್ನು ಮಾಡುವ ಗುರಿ ತಲುಪುವ ಬಗ್ಗೆ ಆಶಾವಾದವನ್ನು ಹೊಂದಿದೆ. ಮತ್ತು ಎರಡು ಆಸನಗಳನ್ನು ಹೊಂದಿರುವ ಹೈಬ್ರಿಡ್ ಏರ್ ವೆಹಿಕಲ್ (ಫ್ಲೈಯಿಂಗ್ ಕಾರ್)‌ ಎಲ್ಲಾ ಅನುಮೋದನೆಗಳನ್ನು 2022 ರೊಳಗಾಗಿ ಪೂರ್ಣಗೊಳಿಸುವ ಭರವಸೆ ಇದೆ.

ಗಮನಾರ್ಹವಾಗಿ, ಇದನ್ನು ಸ್ಪಿನ್‌ ಗಾಗಿ ತೆಗೆದುಕೊಳ್ಳಲು ಆಸಕ್ತಿ ಹೊಂದಿರುವವರಿಗೆ ಚಾಲಕ ಪರವಾನಗಿ ಮತ್ತು ಕ್ರೀಡಾ ಪೈಲಟ್‌ ನ ಪ್ರಮಾಣಪತ್ರ ಎರಡೂ ಅಗತ್ಯವಿರುತ್ತದೆ.

ಓದಿ : ಜಾಹೀರಾತು ವೆಚ್ಚ ಹೆಚ್ಚಳ ನಿರೀಕ್ಷೆ

 

Advertisement

Udayavani is now on Telegram. Click here to join our channel and stay updated with the latest news.

Next