ಬೆಂಗಳೂರು: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ಏಳು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ.
Advertisement
ಎನ್. ಶಶಿಕುಮಾರ್(ಡಿಐಜಿ, ರೈಲ್ವೇ ಇಲಾಖೆ), ಕುಲದೀಪ್ ಕುಮಾರ್ ಜೈನ್(ಮಂಗಳೂರು ಪೊಲೀಸ್ ಆಯುಕ್ತ), ಎಸ್ಪಿ ಡಿ. ಕಿಶೋರ್ ಬಾಬು (ಗುಪ್ತಚರ), ಡಾ| ಕೋನಾ ವಂಶಿ ಕೃಷ್ಣ (ಎಸ್ಪಿ, ನಿಸ್ತಂತು, ಬೆಂಗಳೂರು), ಮೊಹಮ್ಮದ್ ಸುಜೀತಾ (ಡಿಸಿಪಿ, ದಕ್ಷಿಣ ಸಂಚಾರ ವಿಭಾಗ), ಅರುಣಾಂಶು ಗಿರಿ (ಡಿಸಿಪಿ, ಸಿಎಆರ್, ಬೆಂಗಳೂರು), ವಿ. ಯಶೋದಾ (ಎಸ್ಪಿ, ಕೊಪ್ಪಳ) ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ.