ಸಾಮಾನ್ಯವಾಗಿ ಪ್ರಾಣಿಗಳನ್ನು ಬಹಳಷ್ಟು ಪ್ರೀತಿಸುವ ಪ್ರಾಣಿಪ್ರಿಯರನ್ನು ನೋಡಿರುತ್ತೀರಿ. ಆದರೆ, ಪ್ರಾಣಿಪ್ರಿಯರಲ್ಲೇ ಮತ್ತೊಂದು ವಿಧದ ಜನರಿದ್ದಾರೆ.
ತಾವೇ ಸ್ವತಃ ಪ್ರಾಣಿಗಳು ಎಂದು ಭಾವಿಸುವ, ಅವುಗಳಂತೆಯೇ ಕಾಣಿಸಿಕೊಳ್ಳಲು ಬಯಸುವವರು! ಅಂಥವರನ್ನು “ಥೇರಿಯನ್ಸ್’ ಎಂದು ಕರೆಯುತ್ತಾರೆ.
ಇಂಥದ್ದೇ ಒಬ್ಬ ಥೇರಿಯನ್ ಈಗ ತಾನು ಡ್ರ್ಯಾಗನ್‌ನಂತೆ ಕಾಣಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ತನ್ನ ಕಿವಿಗಳು ಹಾಗೂ ಮೂಗಿನ ಹೊಳ್ಳೆಗಳನ್ನೇ ತೆಗೆಸಿಹಾಕಿದ್ದಾರೆ. ಅಷ್ಟೇ ಅಲ್ಲ, ಹಸಿರು ಬಣ್ಣದ ಕಣ್ಣಿನ ಲೆನ್ಸ್ ಹಾಕಿಕೊಂಡು, ಮೈ ತುಂಬಾ ಟ್ಯಾಟೂ, ತಲೆ ಮೇಲೆ ಕೊಂಬುಗಳನ್ನ ಹೊಂದಿರುವ ಈಕೆ ತಿಯಾಮತ್ ಇವಾ ಮೆಡುಸಾ. ಅಮೆರಿಕದ ಮೆಡುಸಾ ಲೈಂಗಿಕ ಅಲ್ಪಸಂಖ್ಯಾತಗಳಾಗಿದ್ದು, ಡ್ರ್ಯಾಗನ್‌ನಂತೆ ಮಾರ್ಪಾಡಾಗಲು ನಡೆಸುತ್ತಿರುವ ಸಿದ್ಧತೆಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವುಗಳು ಈಗ ವೈರಲ್ ಆಗಿವೆ.