Advertisement

ಕ್ವಾರಂಟೈನ್‌ ಹೊಟೇಲ್‌ ಮಾಲಕರಿಗೆ ತರಬೇತಿ

10:17 PM May 21, 2020 | Sriram |

ಕುಂದಾಪುರ: ಕ್ವಾರಂಟೈನ್‌ನಲ್ಲಿ ಇರಬೇಕಾದವರನ್ನು ಇರಿಸಿಕೊಂಡು ಸೇವೆ ನೀಡಲು ಒಪ್ಪಿದ ಹೊಟೇಲ್‌ ಮಾಲಕರು ಸಿಬಂದಿಯ ಕುರಿತು ಜಾಗರೂಕರಾಗಿರಬೇಕು. ಜತೆಗೆ ಕ್ವಾರಂಟೈನ್‌ನಲ್ಲಿರುವವರ ಕಾಳಜಿ, ತ್ಯಾಜ್ಯ ವಿಲೇ, ಸಂಪರ್ಕ ಕುರಿತು ಸ್ಪಷ್ಟ ಮಾಹಿತಿ ಪಡೆದಿರಬೇಕು ಎಂದು ಆರೋಗ್ಯ ಇಲಾಖೆ ಜಿಲ್ಲಾ ಸಲಹೆಗಾರ ಗುರುರಾಜ್‌ ಹೇಳಿದ್ದಾರೆ.ಅವರು ಬುಧವಾರ ಇಲ್ಲಿನ ತಾ.ಪಂ.ನಲ್ಲಿ ಹೊಟೇಲ್‌ ಮಾಲಕರಿಗೆ ಕೋವಿಡ್ ಮಾಹಿತಿ, ಕ್ವಾರಂಟೈನ್‌ ತರಬೇತಿ ನೀಡಿದರು.

Advertisement

ಕ್ವಾರಂಟೈನ್‌ನಲ್ಲಿ ಇರುವವರು ಉಪಯೋಗಿಸಿ ಎಸೆದ ವಸ್ತುಗಳನ್ನು ಪ್ರತ್ಯೇಕವಾಗಿ ತೆಗೆದಿರಿಸಿ ನಿರ್ವಹಣೆ ಮಾಡಬೇಕಾಗುತ್ತದೆ. ಇದನ್ನು ಆಸ್ಪತ್ರೆಗಳ ತ್ಯಾಜ್ಯ ಕೊಂಡೊಯ್ಯುವ ಸಂಸ್ಥೆ ವಿಲೇ ಮಾಡಲಿದೆ. ಕ್ವಾರಂಟೈನ್‌ನಲ್ಲಿ ಇರುವವರ ಸಂಪರ್ಕ ಮಾಡುವವರು, ಆಹಾರ ನೀಡುವವರು,ಸ್ವಚ್ಛತಾ ಸೇವಕರು ಎಲ್ಲ ಸುರಕ್ಷಾ ವಿಧಾನ ಅಳವಡಿಸಿಕೊಳ್ಳಲೇಬೇಕು. ಹಾಗೆ ಪಾಲ್ಗೊಂಡ ನಂತರ ಮನೆಗೆ ಹೋದಾಗಲೂ ಬಟ್ಟೆಬರೆ ಪ್ರತ್ಯೇಕ ಇಟ್ಟು, ಸ್ನಾನ ಮಾಡಿಯೇ ವ್ಯಕ್ತಿಗಳ ಸಂಪರ್ಕ ಮಾಡಬೇಕು. ಮಾಹಿತಿಗಾಗಿ ಆರೋಗ್ಯ ಕೇಂದ್ರ, ಪಂಚಾಯತ್‌, ಸ್ಥಳೀಯಾಡಳಿತ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದರು. ಪುರಸಭೆ ಪರಿಸರ ಎಂಜಿನಿಯರ್‌ ರಾಘವೇಂದ್ರ, ಸೋಂಕು ಹರಡುವ ಕಾರಣ ಮುನ್ನೆಚ್ಚರಿಕೆ ಅಗತ್ಯ. ಸ್ವಚ್ಛತಾ ಸೇವಕರಿಗೆ ಆತ್ಮವಿಶ್ವಾಸ ತುಂಬಿಸುವ ಅಗತ್ಯವಿದೆ. ಹೋಟೆಲ್‌ನಲ್ಲಿ ಇರುವವರಿಗೆ ಹೊರಗಡೆಯಿಂದ ಊಟ ನೀಡುವುದಾದರೆ ಪಾರ್ಸೆಲ್‌ ನೀಡಲು ಮಾತ್ರ ಅವಕಾಶ. ಮರುಬಳಕೆಯ ಪಾತ್ರೆ ಇತ್ಯಾದಿಗಳಲ್ಲಿ ಅವಕಾಶ ಇಲ್ಲ. ಹಾಗೊಂದು ವೇಳೆ ಪ್ರಯತ್ನಿಸಿದರೆ, ಹೊಟೇಲ್‌ ಬಿಟ್ಟು ಊರು ತಿರುಗಿದರೆ ಅಂತಹವರ ಮೇಲೆ ಕೇಸು ದಾಖಲಿಸಲು ಅವಕಾಶ ಇದೆ ಎಂದರು.

ತಹಶೀಲ್ದಾರ್‌ ತಿಪ್ಪೇಸ್ವಾಮಿ ಕ್ವಾರಂಟೈನ್‌ ಕೇಂದ್ರಗಳಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ವಿವರ ನೀಡಿದರು. ವಿವಿಧೆಡೆಯ ಹೋಟೆಲ್‌ ಮಾಲಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next