Advertisement

Madhya Pradesh: ಟ್ರೈನಿ ಸೇನಾ ಅಧಿಕಾರಿಗಳನ್ನು ಬೆದರಿಸಿ ದರೋಡೆ, ಸ್ನೇಹಿತೆ ಮೇಲೆ ಅತ್ಯಾಚಾರ

12:24 PM Sep 12, 2024 | Team Udayavani |

ಭೋಪಾಲ್: ಇಬ್ಬರು ಟ್ರೈನಿ ಸೇನಾ ಅಧಿಕಾರಿಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಅವರಲ್ಲಿದ್ದ ನಗನಗದು ದರೋಡೆ ಮಾಡಿ ಬಳಿಕ ಅವರ ಸ್ನೇಹಿತೆಯ ಮೇಲೆ ಬಂದೂಕು ತೋರಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಭಯಾನಕ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಮಂಗಳವಾರ ನಡೆದಿದೆ.

Advertisement

ಘಟನೆಗೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದು, ಇಬ್ಬರ ಮೇಲೂ ಈ ಹಿಂದೆ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆ ಮಂಗಳವಾರ (ಸೆ.10) ಸಂಜೆ ನಡೆದಿದ್ದು ದಾಳಿಕೋರರು ದರೋಡೆ ಮಾಡುವ ಉದ್ದೇಶದಿಂದ ವಿಹಾರಕ್ಕೆ ಹೊರಟಿದ್ದ ಗುಂಪಿನ ಮೇಲೆ ದಾಳಿ ನಡೆಸಿರುವುದು ಪೊಲೀಸರ ತನಿಖೆಯಿಂದ ಕಂಡುಬಂದಿದೆ.

ಇಂದೋರ್‌ನ ಮೋ ಆರ್ಮಿ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿರುವ ಇಬ್ಬರು ಟ್ರೈನಿ ಅಧಿಕಾರಿಗಳು ಮಧ್ಯಾಹ್ನದ ವೇಳೆ ತರಬೇತಿ ಕೇಂದ್ರದ ಬಳಿ ಇರುವ ಪಾರ್ಕ್ ಗೆ ಇಬ್ಬರು ಮಹಿಳಾ ಸ್ನೇಹಿತರ ಜೊತೆ ತೆರಳಿದ್ದಾರೆ. ಈ ವೇಳೆ ಪಾರ್ಕ್ ನಲ್ಲಿದ್ದ ಎಂಟು ಮಂದಿ ದುಷ್ಕರ್ಮಿಗಳ ತಂಡ ಮಹಿಳಾ ಅಧಿಕಾರಿಗಳನ್ನು ತಡೆದು ಹಲ್ಲೆ ನಡೆಸಿದ್ದಾರೆ ಬಳಿಕ ತಮ್ಮ ಬಳಿ ಇರುವ ಬಂಧೂಕು ತೋರಿಸಿ ಅವರ ಬಳಿಯಿದ್ದ ನಗನಗದು ದೋಚಿದ್ದಾರೆ ಇದಾದ ಬಳಿಕ ದಾಳಿಕೋರರು ಒಬ್ಬ ಅಧಿಕಾರಿ ಮತ್ತು ಮಹಿಳೆಯನ್ನು ಒತ್ತೆಯಾಳಾಗಿ ಇರಿಸಿ ಹತ್ತು ಲಕ್ಷ ತರುವಂತೆ ಇನ್ನೊಬ್ಬ ಅಧಿಕಾರಿ ಮತ್ತು ಮಹಿಳೆಯನ್ನು ಕಳುಹಿಸಿದ್ದಾರೆ, ಭಯಭೀತರಾದ ಇಬ್ಬರೂ ತರಬೇತಿ ಶಿಬಿರಕ್ಕೆ ಬಂದು ತನ್ನ ಕಮಾಂಡಿಂಗ್ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ ಕೂಡಲೇ ಎಚ್ಚೆತ್ತ ಅಧಿಕಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಮಾಹಿತಿ ತಿಳಿದ ಪೊಲೀಸರು ತಮ್ಮ ತಂಡದೊಂದಿಗೆ ಪಾರ್ಕ್ ಗೆ ತೆರಳಿದ್ದಾರೆ ಆದರೆ ಅಷ್ಟೋತ್ತಿಗಾಗಲೇ ದುಷ್ಕರ್ಮಿಗಳ ತಂಡ ಸ್ಥಳದಿಂದ ಕಾಲ್ಕಿತ್ತಿದೆ. ಈ ನಡುವೆ ಒತ್ತೆಯಾಳಾಗಿದ್ದ ಮಹಿಳೆಯ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಲಾಗಿದೆ.

Advertisement

ಘಟನೆಯಿಂದ ಇಬ್ಬರು ಅಧಿಕಾರಿಗಳಿಗೆ ಗಾಯಗಳಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರಯೆಸಗಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಅಧಿಕಾರಿ ಲೋಕೇಂದ್ರ ಸಿಂಗ್ ಹಿರೋರ್ ಮಾಹಿತಿ ನೀಡಿದ್ದಾರೆ.

ಲೂಟಿ, ಡಕಾಯಿತಿ, ಅತ್ಯಾಚಾರ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ (ಬಿಎನ್‌ಎಸ್) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಹಿತಿಕಾ ವಾಸಲ್ ಹೇಳಿದ್ದಾರೆ,

ತಲೆ ಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: iPhone series: ಹೊಸ ಐಫೋನ್ 16 ಸರಣಿ- ಇದರಲ್ಲಿ ಏನೇನು ವೈಶಿಷ್ಟ್ಯಗಳಿವೆ ?

Advertisement

Udayavani is now on Telegram. Click here to join our channel and stay updated with the latest news.

Next