ಮಂಗಳೂರು: ತಿರುವನಂತಪುರ ರೈಲ್ವೇ ವಿಭಾಗದ ಕೊಚ್ಚುವೇಲಿ ಯಾರ್ಡ್ ಕಾಮಗಾರಿಯ ಹಿನ್ನೆಲೆಯಲ್ಲಿ ಇಂದೋರ್-ಕೊಚ್ಚುವೇಲಿ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗುವುದು.
Advertisement
ಇಂದೋರ್‌ನಿಂದ ಡಿ. 6ರಂದು ರಾತ್ರಿ 9.40ಕ್ಕೆ ಹೊರಡುವ ನಂ. 20932 ರೈಲು ಮಂಗಳೂರು ಜಂಕ್ಷನ್ ಹಾಗೂ ಕೊಚ್ಚುವೇಲಿ ಮಧ್ಯೆ ಆಂಶಿಕವಾಗಿ ರದ್ದಾಗಿರುತ್ತದೆ. ಕೊಚ್ಚುವೇಲಿಯಿಂದ ಇಂದೋರ್‌ಗೆ ಡಿ. 9ರಂದು ಬೆಳಗ್ಗೆ 11.10ಕ್ಕೆ ಹೊರಡಲಿರುವ ನಂ. 20931 ರೈಲು ಕೊಚ್ಚುವೇಲಿ ಹಾಗೂ ಮಂಗಳೂರು ಮಧ್ಯೆ ರದ್ದಾಗಲಿದೆ. ಬದಲಿಗೆ ಅದು ಮಂಗಳೂರು ಜಂಕ್ಷನ್‌ನಿಂದ ರಾತ್ರಿ 10 ಗಂಟೆಗೆ ಹೊರಡಲಿದೆ ಎಂದು ಇಲಾಖೆಯ ಪ್ರಕಟನೆ ತಿಳಿಸಿದೆ.