ಹುಬ್ಬಳ್ಳಿ: ರೈಲ್ವೆ ಇಲಾಖೆ ನಗರದ ರೈಲ್ವೆ ಯಾರ್ಡ್‌ನ ನವೀಕರಣದ ಎನ್‌ಐ ಕಾಮಗಾರಿ ಮುಂದೂಡಲ್ಪಟ್ಟ ನಿಮಿತ್ತ ಕೆಲ ರೈಲುಗಳ ಸೇವೆ ಪುನರ್ ಆರಂಭಿಸಲಾಗಿದೆ. ಹುಬ್ಬಳ್ಳಿ-ಹೈದರಾಬಾದ್ ಎಕ್ಸ್‌ಪ್ರೆಸ್ (07319) ಮತ್ತು ಹೈದರಾಬಾದ್-ಹುಬ್ಬಳ್ಳಿ (07320) ಹಾಗೂ ಮೈಸೂರು- ಧಾರವಾಡ-ಮೈಸೂರು ಎಕ್ಸ್‌ಪ್ರೆಸ್ (07301/07302) ಹಾಗೂ ಬೆಂಗಳೂರು-ಗಾಂಧಿಧಾಮ ಎಕ್ಸ್‌ಪ್ರೆಸ್ (06506) ಮತ್ತು ಗಾಂಧಿಧಾಮ-ಬೆಂಗಳೂರು ಎಕ್ಸ್ ಪ್ರಸ್ (06505) ಹಾಗೂ ಜೋಧಪುರ-ಬೆಂಗಳೂರು ಎಕ್ಸ್‌ಪ್ರೆಸ್ (06507) ಮತ್ತು ಬೆಂಗಳೂರು-ಜೋಧಪುರ (06508) ಹಾಗೂ ಅಜೆ¾àರ-ಮೈಸೂರು ಎಕ್ಸ್‌ಪ್ರೆಸ್ (06209) ಮತ್ತು ಮೈಸೂರು-ಅಜೆ¾àರ (06210) ಹಾಗೂ ವಿಜಯವಾಡ-ಹುಬ್ಬಳ್ಳಿ-ವಿಜಯವಾಡ ಎಕ್ಸ್ ಪ್ರಸ್ (07225/07226)ಹಾಗೂ ಯಶವಂತಪುರ-
ವಾಸ್ಕೋ ಡಾ ಗಾಮಾ-ಯಶವಂತಪುರ ಎಕ್ಸ್‌ಪ್ರೆಸ್ (07339/07340) ಹಾಗೂ ಹುಬ್ಬಳ್ಳಿ-ವಾರಣಾಸಿ ಎಕ್ಸ್‌ಪ್ರಸ್ (07323) ಮತ್ತು ವಾರಣಾಸಿ-ಹುಬ್ಬಳ್ಳಿ (07324) ಹಾಗೂ ಹುಬ್ಬಳ್ಳಿ-ಲೋಕಮಾನ್ಯ ತಿಲಕ-ಹುಬ್ಬಳ್ಳಿ ಎಕ್ಸ್‌ಪ್ರೆಸ್ (07317/07318) ಹಾಗೂ ಎಚ್.
ನಿಜಾಮುದ್ದಿನ್-ಯಶವಂತಪುರ ಎಕ್ಸ್‌ಪ್ರೆಸ್ (02630) ಮತ್ತು ಯಶವಂತಪುರ-ನಿಜಾಮುದ್ದಿನ್ (02629) ರೈಲುಗಳು ಅವುಗಳ ವೇಳಾಪಟ್ಟಿಯಂತೆ ಸಂಚರಿಸಲಿವೆ.
ಇದನ್ನೂ ಓದಿ:ಸಾರಿಗೆ ನೌಕರರಿಗೆ ಅರ್ಧದಷ್ಟೇ ವೇತನ : ತರಬೇತಿ ಅವಧಿ ಸಿಬ್ಬಂದಿಗೆ 4 ಸಾವಿರಕ್ಕೂ ಕಡಿಮೆ ಸಂಬಳ
ರೈಲುಗಳ ಸೇವೆ ರದ್ದು: ಜ. 28ರ ವರೆಗೆ ಧಾರವಾಡ – ಸೊಲ್ಲಾಪುರ – ಧಾರವಾಡ ಪ್ಯಾಸೆಂಜರ್ (07322/07321) ಹಾಗೂ ಹುಬ್ಬಳ್ಳಿ-ಸೊಲ್ಲಾಪುರ-ಹುಬ್ಬಳ್ಳಿ ಪ್ಯಾಸೆಂಜರ್ (07332/07331) ರೈಲುಗಳ ಸೇವೆ ರದ್ದಾಗಿರುತ್ತದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.