Advertisement

ರೈಲಿನಲ್ಲಿ ಮತ್ತೆ ಹಿರಿಯ ನಾಗರಿಕರಿಗೆ ರಿಯಾಯಿತಿ?

10:45 PM Jul 27, 2022 | Team Udayavani |

ನವದೆಹಲಿ: ರೈಲ್ವೆಯಲ್ಲಿ ಕೊರೊನಾ ಸಾಂಕ್ರಾಮಿಕಕ್ಕೂ ಮೊದಲು ಹಿರಿಯ ನಾಯಕರಿಗೆ ಟಿಕೆಟ್‌ ದರದಲ್ಲಿ ನೀಡಲಾಗುತ್ತಿದ್ದ ರಿಯಾಯಿತಿಯನ್ನು ಪುನರಾರಂಭಿಸಲು ಇಲಾಖೆಯು ಚಿಂತನೆ ನಡೆಸುತ್ತಿದೆ.

Advertisement

ಆದರೆ ಈ ಬಾರಿ ಎಸಿ ಅಲ್ಲದ ರೈಲುಗಳ ಸ್ಲೀಪರ್ ಮತ್ತು ಜನರಲ್‌ ಟಿಕೆಟ್‌ಗಳಿಗೆ ಮಾತ್ರವೇ ರಿಯಾಯಿತಿ ನೀಡಲು ಚಿಂತನೆ ನಡೆಸಲಾಗಿದೆ. ಹಾಗೆಯೇ ರಿಯಾಯಿತಿಗೆ ಅರ್ಹರ ವಯಸ್ಸನ್ನು 70 ವರ್ಷಕ್ಕೆ ಪರಿಷ್ಕರಿಸುವುದಾಗಿಯೂ ಹೇಳಲಾಗಿದೆ.

ಈ ಹಿಂದೆ 58 ವರ್ಷ ಮೇಲ್ಪಟ್ಟ ಮಹಿಳೆಯರು ಹಾಗೂ 60 ವರ್ಷ ಮೇಲ್ಪಟ್ಟ ಪುರುಷರಿಗೆ ರಿಯಾಯಿತಿ ಕೊಡಲಾಗುತ್ತಿತ್ತು. ಮಹಿಳೆಯರಿಗೆ ಶೇ.50 ಹಾಗೂ ಪುರುಷರಿಗೆ ಶೇ.40 ರಿಯಾಯಿತಿ ನೀಡಲಾಗುತ್ತಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next