Advertisement

ಹಳಿಯಲ್ಲಿದ್ದ ವ್ಯಕ್ತಿಯನ್ನು ಬದುಕಿಸಿದ ರೈಲು ಚಾಲಕ! ವಿಡಿಯೋ ವೈರಲ್‌

11:06 AM Jan 04, 2022 | Team Udayavani |

ಮುಂಬೈ: ಮುಂಬೈನ ಶಿವ್‌ಡಿ ರೈಲು ನಿಲ್ದಾಣದ ಸಮೀಪ ಹಳಿಗೆ ತೆರಳಿ ಮಲಗಿದ್ದ ವ್ಯಕ್ತಿಯನ್ನು ನೋಡಿ ರೈಲು ಚಾಲಕ ತುರ್ತು ಬ್ರೇಕ್‌ ಹಾಕಿ, ಬದುಕಿಸಿದ್ದಾನೆ.

Advertisement

ಕೂಡಲೇ ಅದನ್ನು ಗಮನಿಸಿದ ನಿಲ್ದಾಣದಲ್ಲಿದ್ದ ರೈಲ್ವೇ ಪೊಲೀಸರು ಮತ್ತು ರೈಲ್ವೆ ಸಿಬ್ಬಂದಿ ವ್ಯಕ್ತಿಯನ್ನು ಎಬ್ಬಿಸಿದ್ದಾರೆ.

ಈ ವಿಡಿಯೋವನ್ನು ಟ್ವೀಟ್‌ ಮಾಡಿರುವ ರೈಲ್ವೆ ಸಚಿವಾಲಯ ಚಾಲಕನ ಸಮಯಪ್ರಜ್ಞೆ ಮತ್ತು ಅಧಿಕಾರಿಗಳು ತುರ್ತಾಗಿ ಸ್ಪಂದಿಸಿದ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಜತೆಗೆ ಸಾರ್ವಜನಿಕರಿಗೆ ಕೂಡ ಇಂಥ ದುಃಸ್ಸಾಹಸ ಕೈಗೊಳ್ಳದಂತೆ ಮನವಿ ಮಾಡಿದೆ. ಭಾನುವಾರ ಬೆಳಗ್ಗೆ 11.45ಕ್ಕೆ ಈ ಘಟನೆ ನಡೆದಿದೆ. ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ ರೈಲ್ವೆ ಸಿಬ್ಬಂದಿಯ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ವಿಡಿಯೋ ವೈರಲ್‌ ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next