ಬೀದರ್: ಗೂಡ್ಸ್ ವಾಹನಕ್ಕೆ ಎಕ್ಸ್ ಪ್ರೆಸ್ ರೈಲು ಢಿಕ್ಕಿ ಹೊಡೆದ ಘಟನೆ ಮಂಗಳವಾರ ಸಾಯಂಕಾಲ ತಾಲೂಕಿನ ಸಿದ್ದೇಶ್ವರ ಕ್ರಾಸ್ ಹತ್ತಿರ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಬೀದರ ಕಡೆಯಿಂದ ಭಾಲ್ಕಿಗೆ ಪ್ರಯಾಣಿಕರ ರೈಲು ಆಗಮನ ಹಿನ್ನೆಲೆ ರೈಲ್ವೆ ಸಿಬ್ಬಂದಿ ಗೇಟ್ ಹಾಕಿದ್ದು, ಅಷ್ಟರಲ್ಲಿ ವೇಗವಾಗಿ ಬಂದ ಗೂಡ್ಸ್ ಟ್ರಕ್ ಗೇಟ್ ಮುರಿದು ಒಳಗೆ ನುಗ್ಗಿದೆ. ಎರಡನೇ ಗೇಟ್ ಹತ್ತಿರ ಗೂಡ್ಸ್ ವಾಹನ ನಿಂತಿದೆ. ಅಷ್ಟರಲ್ಲಿ ಎಕ್ಸಪ್ರೆಸ್ ರೈಲು ಬರುತಿತ್ತು. ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತನಾಗಿ ಕೆಂಪು ನಿಶಾನೆ ತೋರಿಸಿದ. ಇದನ್ನು ಗಮನಿಸಿದ ರೈಲ್ವೆ ಚಾಲಕ ರೈಲಿನ ವೇಗ ತಗ್ಗಿಸುತ್ತಾ ಬಂದಿದ್ದು, ಗೇಟ್ ಸಮೀಪ ಬಂದು ವಾಹನಕ್ಕೆ ಢಿಕ್ಕಿ ಹೊಡೆದಿದೆ. ಅಷ್ಟರಲ್ಲಿ ಟ್ರಕ್ ಚಾಲಕ ಹೊರಗೆ ಓಡಿ ಹೋಗಿದ್ದು, ಜೀವಹಾನಿ ತಪ್ಪಿದೆ.
ಇದನ್ನೂ ಓದಿ:ಮಹಾ ಚುನಾವಣೆಯತ್ತ ಚಿತ್ತ: ಶಿಂಧೆ ಬಣದ 13, ಬಿಜೆಪಿಯ 25 ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ
Related Articles
ಚಾಲಕನ್ನು ವಶಕ್ಕೆ ಪಡೆದಿರುವ ರೈಲ್ವೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.