ಒಂದಲ್ಲ ಎರಡಲ್ಲ ಬರೋಬ್ಬರಿ ಒಂಬತ್ತು ಗಂಟೆ ವಿಳಂಬವಾಗಿ ಬಂದ ರೈಲಿಗೆ ನಿಲ್ದಾಣದಲ್ಲಿ ಯಾವ ರೀತಿ ಪ್ರತಿಕ್ರಿಯೆ ಸಿಕ್ಕಿದೆ ಎಂಬುದರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತುರ್ತು ಕಾರಣದಿಂದ ಪ್ರಯಾಣಿಕರ ರೈಲೊಂದು ಬರೋಬ್ಬರಿ ಒಂಬತ್ತು ಗಂಟೆ ತಡವಾಗಿ ರೈಲು ನಿಲ್ದಾಣಕ್ಕೆ ಆಗಮಿಸಿದೆ ಈ ವೇಳೆ ಅಲ್ಲಿದ್ದ ಪ್ರಯಾಣಿಕರು ಕೋಪಗೊಂಡರೂ ಅದನ್ನು ಇನ್ನೊಂದು ರೀತಿಯಲ್ಲಿ ತೋರಿಸಿಕೊಂಡಿದ್ದಾರೆ ಅದರಂತೆ ರೈಲು ಪ್ಲಾಟ್ ಫಾರಂ ಪ್ರವೇಶಿಸುತ್ತಿದ್ದಂತೆ ಪ್ರಯಾಣಿಕರು ಚಪ್ಪಾಳೆ ತಟ್ಟಿ, ಸಿಳ್ಳೆ ಹೊಡೆದು ಕುಣಿದು ಸಂತೋಷದಿಂದ ಬರಮಾಡಿಕೊಂಡಿದ್ದಾರೆ, ಇದರ ವಿಡಿಯೋ ಹಾರ್ದಿಕ್ ಬೋಂತು ಎಂಬ ವ್ಯಕ್ತಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ತಡವಾಗಿ ಬಂದ ರೈಲಿಗೆ ಪ್ರಯಾಣಿಕರು ಯಾವ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಎಂಬ ಬರಹದೊಂದಿಗೆ ವಿಡಿಯೋ ಹಂಚಿಕೊಂಡಿದ್ದು ಭಾರಿ ವೈರಲ್ ಆಗಿದೆ.
ನೂರಾರು ಮಂದಿ ರೈಲ್ವೆ ನಿಲ್ದಾಣದಲ್ಲಿ ರೈಲಿಗಾಗಿ ಕಾದು ನಿಂತಿರುವ ಚಿತ್ರಣ ವಿಡಿಯೋದಲ್ಲಿ ಕಾಣಬಹುದು ಪ್ಲಾಟ್ ಫಾರಂ ಒಂದು ಮೂಲೆಯಲ್ಲಿ ರೈಲಿನ ಹಾರ್ನ್ ಸದ್ದು ಕೇಳಿದೆ ಆದರೆ ರೈಲು ಕಾಣುತ್ತಿಲ್ಲ, ಇತ್ತ ರೈಲ್ವೆ ಅಧಿಕಾರಿಗಳು ರೈಲು ಆಗಮಿಸುವ ಸೂಚನೆ ನೀಡಿದ್ದಾರೆ ಕೊನೆಗೂ ರೈಲಿನ ಬೆಳಕು ಕಾಣುತ್ತಿದ್ದಂತೆ ಪ್ರಯಾಣಿಕರು ಚಪ್ಪಾಳೆ ಬಡಿದು ಅಂತೂ ರೈಲು ಕೊನೆಗೂ ಬಂತಲ್ಲ ಎಂಬ ಸಂಭ್ರಮದಿಂದ ಕುಣಿದು, ರೈಲಿಗೆ ತಲೆಬಾಗಿ ಸ್ವಾಗತಿಸಿದ್ದಾರೆ.
ಈ ವಿಡಿಯೋ ನೋಡಿದ ಕೆಲವರು ಹಾಸ್ಯಾಸ್ಪದವಾಗಿ ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಭಾರತದಲ್ಲಿ ಇದು ಸಾಮಾನ್ಯ ಎಂದು ಬರೆದುಕೊಂಡಿದ್ದಾರೆ.