Advertisement

ಕೃಷಿ ಉತ್ಪನ್ನ ಸಾಗಿಸಲು ದ್ವಿಚಕ್ರ ವಾಹನಕ್ಕೆ ಟ್ರೈಲರ್‌ : ಎಲ್ಲರ ಗಮನ ಸೆಳೆದ ವಿನೂತನ ಪ್ರಯೋಗ

02:59 PM Jan 24, 2021 | Team Udayavani |

ಭಾರತೀನಗರ: ಟ್ರ್ಯಾಕ್ಟರ್‌-ಟಿಲ್ಲರ್‌ ಸೇರಿದಂತೆ ಇತರೆ ವಾಹನಗಳಲ್ಲಿ ಟ್ರೈಲರನ್ನು ಕಾಣಬಹುದಾಗಿದೆ. ಆದರೆ, ಇಲ್ಲೊಬ್ಬ ರೈತ ತನ್ನ ದ್ವಿಚಕ್ರ ವಾಹನಕ್ಕೆ ಟ್ರೈಲರ್‌ ಅಳವಡಿಸಿಕೊಂಡು ಕೃಷಿ ಉತ್ಪನ್ನ ಸಾಗಿಸುವ ವಿನೂತನ ಪ್ರಯೋಗ ಎಲ್ಲರ ಗಮನ ಸೆಳೆದಿದೆ.
ಅಣ್ಣೂರು ಗ್ರಾಮದ ಪಟೇಲ್‌ ಬೋರೇಗೌಡ ಎಂಬುವರೇ ದ್ವಿಚಕ್ರ ವಾಹನಕ್ಕೆ ಟ್ರೈಲರ್‌ ಅಳವಡಿಸಿ ಕೊಂಡು ಸುಮಾರು 400ರಿಂದ 500 ಕೆ.ಜಿ. ಕೃಷಿ ಉತ್ಪನ್ನ ಸಾಗಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.

Advertisement

ಕೃಷಿ ಉತ್ಪನ್ನ ಸಾಗಟ: ಕೃಷಿ ಉತ್ಪನ್ನ ಸಾಗಿಸಲು ಎತ್ತಿನಗಾಡಿ, ಸಣ್ಣ ಪುrಟ ವಾಹನ, ದ್ವಿಚಕ್ರ ವಾಹನದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಳಸಲಾಗುತ್ತಿತ್ತು. ಇದರಿಂದ ತೊಂದರೆಗಳು ಕಂಡುಬರುತ್ತಿದ್ದವು. ಇದನ್ನು ಗಮನಿಸುತ್ತಿದ್ದ ಪಟೇಲ್‌ ಬೋರೇಗೌಡ, ಮದ್ದೂರು ತಾಲೂಕು ಅರೆಚಾಕನಹಳ್ಳಿ ಗ್ರಾಮದ ಸುಂದರೇಶ್‌ ಅವರು ಇದೇ ರೀತಿ ಬೈಕ್‌ಗೆ ಅಳವಡಿಸುವ ಟ್ರೈಲರನ್ನು 3×4 ತಯಾರಿಸಿ ಕೃಷಿ ಉತ್ಪನ್ನ ಸಾಗಿಸುತ್ತಿದ್ದರು. ಈ ವಿನೂತನ ಪ್ರಯೋಗವನ್ನು ನೋಡಿದ ಬೋರೇಗೌಡ, ತಾನೇ ವರ್ಕ್‌ಷಾಪ್‌ನಲ್ಲಿ 4×6 ಅಡಿ ಅಳತೆ ಟ್ರೈಲರನ್ನು ಸಿದ್ಧಪಡಿಸಿ, ತಮ್ಮ ಕೃಷಿ ಉತ್ಪನ್ನ ಸಾಗಿಸುವ ವ್ಯವಸ್ಥೆ ಮಾಡಿದರು. ನಂತರದ ದಿನಗಳಲ್ಲಿ ಬೇರೆ ಬೇರೆ ರೈತರ ಕೃಷಿ ಉತ್ಪನ್ನ ಸಾಗಿಸಲು ತೊಡಗಿದರು.

ಇದನ್ನೂ ಓದಿ:ಆಲೂರು : ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ ಬೈಕ್‌ ಸವಾರ ಪಾರು

ನಿತ್ಯ ಸುಮಾರು 1 ಸಾವಿರ ಸಂಪಾದನೆ: ಇದೀಗ ಎಳನೀರು ಸೇರಿದಂತೆ ಇತರೆ ವಸ್ತುಗಳನ್ನು ಸಾಗಿಸಿ, ನಿತ್ಯ ಸುಮಾರು 1 ಸಾವಿರ ಸಂಪಾದನೆ ಮಾಡುತ್ತಿದ್ದಾರೆ. ಕೃಷಿ ಚಟುವಟಿಕೆಗಾಗಿ ಕೂಲಿ ಕಾರ್ಮಿಕರನ್ನೂ ಸಾಗಿಸುವಲ್ಲಿ ಇದು ನೆರವಾಗಿದೆ. ಬೈಕ್‌ಗೆ ಟ್ರೈಲರನ್ನು ಜೋಡಿಸಿದ್ದು, ಇದರಲ್ಲಿ ಸಾಕಷ್ಟು ಸಾಧನೆ ಮಾಡುವ ಕೆಲಸವನ್ನು ನಿತ್ಯವೂ ಮಾಡುತ್ತಿದ್ದಾರೆ. ಕೃಷಿ ಉತ್ಪನ್ನ ಸಾಗಿಸುತ್ತಿದ್ದಾರೆ. ಒಂದು ಆಟೋ ಮಾಡುವ ಕೆಲಸವನ್ನು ಬೈಕ್‌ ಮತ್ತು ಟ್ರೈಲರ್‌ ಸಹಾಯದಿಂದ ಮಾಡುತ್ತಿದ್ದೇವೆ ಎಂದು
ಬೋರೇಗೌಡ ತಿಳಿಸಿದ್ದಾರೆ.

– ಅಣ್ಣೂರು ಸತೀಶ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next