Advertisement

ಬಲ್ಕ್ ಎಸ್ ಎಮ್ ಎಸ್ ಗಳಿಗೆ ನೂತನ ನೀತಿ : ಮಾರ್ಚ್ 31ರೊಳಗೆ ನಿಯಮ ಪಾಲಿಸಲು ಸೂಚನೆ

11:11 AM Mar 30, 2021 | Team Udayavani |

ನವ ದೆಹಲಿ :  ಬ್ಯಾಂಕ್ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಹಕರಿಗೆ ಬರುವ ಬ್ಯಾಂಕಿನ ಎಸ್ ಎಂ ಎಸ್ ಗಳಿಗೆ TRAI(Telecom Regulatory Authority of India) ತನ್ನ ನಿಯಮಗಳನ್ನು ಬಿಗಿಗೊಳಿಸಿದೆ. ವ್ಯಾವಹಾರಿಕ ಅಥವಾ ವ್ಯಾಪಾರ ಸಂಸ್ಥೆಗಳನ್ನು ಒಳಗೊಂಡು ಎಲ್ಲಾ ಬ್ಯಾಂಕುಗಳು ಇದಕ್ಕೆ ಅನ್ವಯಿಸಿದ ಎಲ್ಲಾ ದೂರುಗಳನ್ನು ಈ ತಿಂಗಳೊಳಗೆ ಅಂದರೆ, ಮಾರ್ಚ್ 31 ರೊಳಗೆ ನೀಡಬೇಕು ಎಂದು ತಿಳಿಸಿದೆ. ಒಂದು ವೇಳೆ ಈ ನಿಯಮಗಳನ್ನು  ಪೂರೈಸದಿದ್ದಲ್ಲಿ ಏಪ್ರಿಲ್ 1 ರಿಂದ ಗ್ರಾಹಕರ ನಡುವಿನ ಸಂವಹನ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದೆ.

Advertisement

ಓದಿ : ‘ಬೇಡರ ವೇಷ’ ಯಾವ ಕಾರಣಕ್ಕಾಗಿ ಶುರುವಾಯಿತು ಗೊತ್ತಾ? ಇಲ್ಲಿದೆ ರೋಚಕ ಸತ್ಯ!

ಮೇಲಿಂದ ಮೇಲೆ ಎಚ್ಚರಿಕೆ ನೀಡಿದರೂ ಕೂಡ ಹಲವು  ಸಂಸ್ಥೆಗಳು ನಿಯಮ ಪಾಲಿಸಿಲ್ಲ ಎಂದು ಟ್ರೈ ಮಾಹಿತಿ ನೀಡುವುದರೊಂದಿಗೆ, ನಿಯಮ ಪಾಲಿಸದ 40 ಪ್ರಮುಖ ವ್ಯಾಪಾರಿ ಸಂಘಟನೆಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.  TRAI ಬಿಡುಗಡೆಗೊಳಿಸಿದ ಈ ಪಟ್ಟಿಯಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್, ಐಸಿಐಸಿ ಬ್ಯಾಂಕ್, ಎಸ್ ಬಿ ಐ ಬ್ಯಾಂಕ್ ಕೂಡ ಒಳಗೊಂಡಿವೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಸೆಬಿ (SEBI) ಕೂಡ ಗ್ರಾಹಕರಿಗೆ ಸೇವೆ ಒದಗಿಸಲು  TRAI ಜಾರಿಗೊಳಿಸಿರುವ ಬಲ್ಕ್ ಎಸ್ ಎಮ್ ಎಸ್ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ನಿಶ್ಚಿತಗೊಳಿಸಲು ಈ ಸಂಘಟನೆಗಳಿಗೆ ಸೂಚಿಸಿದೆ. ಅನುಚಿತ ವಾಣಿಜ್ಯಾತ್ಮಕ ಎಸ್ ಎಸ್ ಮ್ ಎಸ್ ಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ TRAI ಈ ನಿಯಮವನ್ನು ಬಿಗಿಗೊಳಿಸಿದೆ  ಎಂದು ಸೇಬಿ ಮಾಹಿತಿ ನೀಡಿದೆ.

ಇನ್ನು, TRAIನ ಟೆಲಿಕಾಂ ವಾಣಿಜ್ಯ ಸಂವಹನಗಳ ಗ್ರಾಹಕ ಆದ್ಯತೆಯ ನಿಯಮಗಳು, 2018 ಅನ್ನು ಉಲ್ಲೇಖಿಸಿರುವ ಸೇಬಿ, ನಿಬಂಧನೆಗಳನ್ನು ಪಾಲಿಸದಿರುವುದು ಹೂಡಿಕೆದಾರರಿಗೆ ಸಂದೇಶಗಳ ಕಳುಹಿಸುವಲ್ಲಿ ಅಥವಾ ಪೂರೈಸುವಲ್ಲಿ ವ್ಯತ್ಯಯ ಆಗಬಹುದು ಎಂದು ಕೂಡ ತಿಳಿಸಿದೆ.

Advertisement

TRAI ಜಾರಿಗೊಳಿಸಿರುವ ನೂತನ ಎಸ್ ಎಮ್ ಎಸ್ ನಿಯಮಗಳ ಹಿನ್ನೆಲೆ ಈ ಸಮಸ್ಯೆ ಎದುರಾಗಿತ್ತು.  ಇದರಿಂದ ಇ-ಕಾಮರ್ಸ್ ಕಂಪನಿಗಳು ಹಾಗೂ ಬ್ಯಾಂಕ್ ವತಿಯಿಂದ ಗ್ರಾಹಕರಿಗೆ ಓಟಿಪಿ ವಿಳಂಬವಾಗುತ್ತಿತ್ತು. ಈ ಹಿನ್ನೆಲೆ ದೊಡ್ಡ ಪ್ರಮಾಣದಲ್ಲಿ ವಹಿವಾಟುಗಳು ನಡೆದಿರುವುದನ್ನು ಕೂಡ ಗಮನಿಸಬಹುದಾಗಿದೆ.

ಓದಿ : ಸಸ್ಪೆನ್ಸ್‌-ಥ್ರಿಲ್ಲರ್‌ ‘ಮೋಕ್ಷ’: ಟ್ರೇಲರ್‌ ನಲ್ಲಿ ಹೊಸಬರ ಪ್ರಯತ್ನ

Advertisement

Udayavani is now on Telegram. Click here to join our channel and stay updated with the latest news.

Next