Advertisement

Delhi: ರಾಮಲೀಲಾ ಪ್ರದರ್ಶನದ ವೇಳೆ ಕುಸಿದು ಬಿದ್ದು ರಾಮನ ಪಾತ್ರಧಾರಿ ಮೃತ್ಯು

02:22 PM Oct 06, 2024 | Team Udayavani |

ದೆಹಲಿ: ರಾಮಲೀಲಾ ಕಾರ್ಯಕ್ರಮದ ವೇಳೆ ಭಗವಾನ್ ರಾಮನ ಪಾತ್ರವನ್ನು ಹಾಕಿದ್ದ ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ(ಅ.5ರಂದು) ನಡೆದಿದೆ.

Advertisement

ದೆಹಲಿಯ ಶಹದಾರದಲ್ಲಿರುವ ಜೈ ಶ್ರೀರಾಮಲೀಲಾ ವಿಶ್ವಕರ್ಮ ನಗರದಲ್ಲಿ ನಡೆದ  ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಸುಶೀಲ್ ಕೌಶಿಕ್ (45) ಎಂದು ಗುರುತಿಸಲಾಗಿದ್ದು,ಇವರು ಪ್ರಾಪರ್ಟಿ ಡೀಲರ್ ಆಗಿದ್ದರು.

ರಾಮಲೀಲಾ ಕಾರ್ಯಕ್ರಮದಲ್ಲಿ ಇವರು ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದರು. ಈ ವೇಳೆ ವೇದಿಕೆಯಲ್ಲಿ ಪಾತ್ರವನ್ನು ನಿಭಾಯಿಸುತ್ತಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆ ವೇದಿಕೆಯ ಬದಿಗೆ ಹೋಗಿದ್ದಾರೆ. ಬದಿಗೆ ಸರಿಯುತ್ತಿದ್ದಂತೆ ಅವರು ಅಲ್ಲೇ ಕುಸಿದು ಬಿದ್ದಿದ್ದಾರೆ.

ಇದಾದ ಬಳಿಕ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಆದಾಗಲೇ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

Advertisement

ಇದೇ ವರ್ಷದ ಜನವರಿಯಲ್ಲಿ, ಹರಿಯಾಣದ ಭಿವಾನಿಯ ರಾಮಲೀಲಾ ಕಾರ್ಯಕ್ರಮದಲ್ಲಿ ಹನುಮಾನ್ ಪಾತ್ರಧಾರಿ  ಪ್ರದರ್ಶನದ ಮಧ್ಯದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದರು. ಅಕ್ಟೋಬರ್ 2022 ರಂದು ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯಲ್ಲಿ ರಾವಣನ ಪಾತ್ರವನ್ನು ನಿರ್ವಹಿಸುತ್ತಿದ್ದ ನಟರೊಬ್ಬರು ವೇದಿಕೆಯ ಮೇಲೆ ಕುಸಿದು ಬಿದ್ದು ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next