Advertisement

ಉಪ್ಪಿನಂಗಡಿ: ಚಲಿಸುತ್ತಿದ್ದ ಬಸ್ಸಿನಡಿ ಬಿದ್ದು ತಾಯಿ ಮಗು ಸ್ಥಳದಲ್ಲೇ ಸಾವು

12:35 PM Oct 12, 2021 | Team Udayavani |

ಉಪ್ಪಿನಂಗಡಿ:  ಚಲಿಸುತ್ತಿದ್ದ ಬಸ್ಸಿನಡಿ ಬಿದ್ದು ತಾಯಿ ಮಗು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ  ಉಪ್ಪಿನಂಗಡಿ ಬಸ್ ನಿಲ್ಧಾಣದಲ್ಲಿ ಮಂಗಳವಾರ ನಡೆದಿದೆ.

Advertisement

ಬೆಳ್ತಂಗಡಿ ತಾಲೂಕಿ ಶಿರ್ಲಾಲು ನಿವಾಸಿ ಸಾಹಿದಾ (25)  ಮತ್ತು ಅವರ ಪುತ್ರ ಅಂದಾಜು 1 ವರ್ಷದ ಮಗು ಸಾಹಿಲ್ ಮೃತ ದುರ್ಧೈವಿಗಳು ಎಂದು ತಿಳಿದು ಬಂದಿದೆ.

ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ತಾಯಿ ಮಗು ರಸ್ತೆ ದಾಟುತ್ತಿದ್ದಾಗ ದಿಢೀರನೇ ನುಗ್ಗಿದ್ದ ಕೆಎಸ್ ಆರ್ ಟಿಸಿ ಬಸ್ ಇಬ್ಬರ ಮೇಲೆ ರಭಸವಾಗಿ ಚಲಿಸಿದೆ. ಪರಿಣಾಮ ತಾಯಿ ಮಗ ಇಬ್ಬರು ಬಸ್ಸಿನಡಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿ ಬಸ್ಸಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next