ಶಿವಮೊಗ್ಗ: ಬೈಕ್ ಮತ್ತು ಟಿಪ್ಪರ್ ಲಾರಿ ನಡುವಿನ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸಾವಿಗೀಡಾದ ಘಟನೆ ಹೊಸನಗರದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜು ಮುಂಭಾಗ ಬುಧವಾರ (ನ.30 ರಂದು) ನಡೆದಿದೆ.
ಘಟನೆ ಹಿನ್ನೆಲೆ: ಮಗಳನ್ನು ಕಾಲೇಜಿಗೆ ದಾಖಲು ಬಸ್ಸಿನಲ್ಲಿ ಹೋಗುವ ಎಂದು ಅಣ್ಣಪ್ಪ ಹೋಗಿದ್ದಾರೆ. ಆದರೆ ಬಸ್ ತಡವಾದ ಕಾರಣ ಬೈಕ್ ನಲ್ಲೇ ಹೊರಟು ವಾಪಾಸ್ ಬರುವಾಗ ವೇಗವಾಗಿ ಬಂದ ಟಿಪ್ಪರ್ ಲಾರಿ ಹಿಂಬದಿಯಿಂದ ಬೈಕ್ ಗೆ ಢಿಕ್ಕಿ ಹೊಡೆದು ಸವಾರನನ್ನು ಎಳೆದುಕೊಂಡೇ ಹೋಗಿದೆ. ಪರಿಣಾಮ ತಲೆಗೆ ಗಂಭೀರ ಗಾಯಗೊಂಡ ಅಣ್ಣಪ್ಪ ಅವರನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ಅಣ್ಣಪ್ಪ ಸಾವನ್ನಪ್ಪಿದ್ದಾರೆ.
ಅಪಘಾತದ ದೃಶ್ಯ ಕಾಲೇಜಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಳಗಿನ ವಾಕಿಂಗ್‌ಗೆ ಹೋದಾಗ ಇಹಲೋಕ ತ್ಯಜಿಸಿದ ದೇವಸ್ಥಾನದ ಆನೆ ಲಕ್ಷ್ಮಿ
Related Articles