ಮೂಡುಬಿದಿರೆ: ಬಾಳೆಹೊನ್ನೂರಿನಲ್ಲಿ ಗತಿಸಿದ ತನ್ನ ಅಜ್ಜಿಯ ಅಂತ್ಯ ಸಂಸ್ಕಾರ ಮುಗಿಸಿ ಮೂಡುಬಿದಿರೆಗೆ ಬೈಕ್‌ನಲ್ಲಿ ಮರಳುತ್ತಿದ್ದ ವೇಳೆ ಬೆಳುವಾಯಿ ಕಾಂತಾವಾರ ಕ್ರಾಸ್ ಬಳಿ ಬೈಕ್ ಸ್ಕಿಡ್ ಆಗಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ರಾತ್ರಿ ಸಂಭವಿಸಿದೆ.
Advertisement
ಮೂಲತ: ಚಿಕ್ಕಮಗಳೂರಿನವರಾಗಿದ್ದು, ಮೂಡುಬಿದಿರೆಯ ಪ್ರಾಂತ್ಯ ಗ್ರಾಮದ ರಾಣಿಕೇರಿ ನಿವಾಸಿಯಾಗಿರುವ ರಾಜೇಶ್ (28) ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ.
ರಾಜೇಶ್ ಅವರಿಗೆ ಒಂದುವರೆ ವರ್ಷಗಳ ಹಿಂದೆ ಮದುವೆಯಾಗಿದ್ದು, ಪತ್ನಿ, 5 ತಿಂಗಳ ಮಗು ಇದೆ ಎಂದು ತಿಳಿದುಬಂದಿದೆ.