Advertisement

ಮಗನ ಶಿವಗಣಾರಾಧನೆ ವೇಳೆ ಹೃದಯಘಾತದಿಂದ ತಾಯಿ ಸಾವು: 9 ದಿನ ಅಂತರದಲ್ಲಿ ಎರಡು ಸಾವು ಕಂಡ ಮನೆ

06:47 PM Aug 17, 2022 | Team Udayavani |

ಕುಷ್ಟಗಿ: ಮಗನ ಶಿವಗಣಾರಾಧನೆ ಸಂದರ್ಭದಲ್ಲಿ ತಾಯಿಗೆ ಹೃದಯಘಾತವಾಗಿದ್ದು, 9 ದಿನಗಳ ಅಂತರದಲ್ಲಿ ತಾಯಿ ಮಗ ಸಾವಿನಲ್ಲಿ ಒಂದಾದ ಮನಕಲಕುವ ಘಟನೆ ನಡೆದಿದೆ.

Advertisement

ಕುಷ್ಟಗಿ ಪಟ್ಟಣದ 14ನೇ ವಾರ್ಡ್ ನ ಅಂಬೇಡ್ಕರ್ ನಗರದಲ್ಲಿ ರವಿಕುಮಾರ ದುರಗಪ್ಪ ಕೆಂಗಾರಿ ಲೋ ಬಿಪಿಯಿಂದ ಕಳೆದ ಆ.9ರಂದು ಅಕಾಲಿಕವಾಗಿ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಬುಧವಾರ ಶಿವಗಣಾರಾಧನೆ ಕಾರ್ಯಕ್ರಮ ಕ್ಕಾಗಿ ಬಂಧು ಬಾಂಧವರನ್ನು ಅಹ್ವಾನಿಸಿದ್ದರು.

ದಿವಂಗತ ರವಿಕುಮಾರ ಕೆಂಗಾರಿ ಶಿವಗಣಾರಾಧನೆಯ ಪೂಜೆಯ ಸಿದ್ದತೆಯ ಸಂಧರ್ಭದಲ್ಲಿ ಮಗನ ಅಗಲಿಕೆಯ ಕೊರಗಿನಲ್ಲಿದ್ದ ತಾಯಿಗೆ ಹೃದಯಘಾತವಾಗಿ ಕೊನೆಯುಸಿರೆಳದೆರು. ಕೆಂಗಾರಿ ಮನೆಯಲ್ಲಿ 9  ದಿನಗಳಲ್ಲಿ ಮಗ, ತಾಯಿಯ ಸಾವು ಸಂಭವಿಸಿದೆ.

ಈ ದುರ್ಘಟನೆಯಿಂದ ಇನ್ನೋರ್ವ ಹಿರಿಯ ಪುತ್ರ ಗಜೇಂದ್ರಗಡ ತಹಶೀಲ್ದಾರ ಆಗಿರುವ ರಜನೀಕಾಂತ ಕೆಂಗಾರಿಗೆ ಬಿಪಿ ಏರಿಳಿತವಾಗಿ ಆಸ್ಪತ್ರೆ  ಸೇರಿದ ಬೆನ್ನಲ್ಲೇ ಅವರ ಸಹೋದರ ನಾಗರಾಜ ಕೆಂಗಾರಿ ಸಹ ಆಸ್ಪತ್ರೆಗೆ ದಾಖಲಾಗಿದ್ದು, ಸಕಾಲಿಕ ಚಿಕಿತ್ಸೆ ಹಿನ್ನೆಲೆಯಲ್ಲಿ ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next