Advertisement

ಹಳ್ಳದಲ್ಲಿ ಬೈಕ್‌ ಸಮೇತ ಕೊಚ್ಚಿ ಹೋದ ಯುವಕ

02:22 PM Dec 06, 2021 | Team Udayavani |

ಕೆ.ಆರ್‌.ಪೇಟೆ : ಧಾರಾಕಾರ ಮಳೆಗೆ ಹಳ್ಳದಲ್ಲಿ ನೀರು ಉಕ್ಕಿ ಹರಿದ ಪರಿಣಾಮ ಯುವಕನೊಬ್ಬನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ತಾಲೂಕಿನ ಸಾರಂಗಿ ಮತ್ತು ಶ್ಯಾರಹಳ್ಳಿ ಮಧ್ಯೆ ಇರುವ ಹೇಮಾವತಿ ಮೇಲ್ಗಾಲುವೆ ಸೇತುವೆ ಬಳಿ ಶನಿವಾರ ರಾತ್ರಿ ನಡೆದಿದೆ.

Advertisement

ಕೈಗೋನಹಳ್ಳಿಯ ಶಿವಲಿಂಗೇಗೌಡ ಅವರ ಮಗ ಉದಯ್‌ (30) ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿರುವ ನತದೃಷ್ಟ.

ಬೈಕ್‌ ಸಮೇತ ಕೊಚ್ಚಿಹೋದ: ಮೃತ ಉದಯ್‌ ಮಲ್ಲೇನಹಳ್ಳಿಯ ತನ್ನ ಸಹೋದರಿಯ ಮನೆಗೆ ಹೋಗಿ ವಾಪಸ್‌ ಬರುತ್ತಿದ್ದಾಗ ಜೋರಾಗಿ ಮಳೆ ಬಂದಿದೆ. ಮಳೆ ಸ್ವಲ್ಪ ಕಡಿಮೆಯಾದಾಗ ಊರಿಗೆ ಹೋಗಿ ಬಿಡೋಣ ಎಂದು ಬೈಕ್‌ನಲ್ಲಿ ಬರುತ್ತಿದ್ದಾಗಸಾರಂಗಿ ಹೇಮಾವತಿ ಮೇಲ್ಗಾಲುವೆಯ ಕೆಳ ಭಾಗಇರುವ ಹಳ್ಳದಲ್ಲಿ ಪ್ರವಾಹದ ಮಾದರಿಯಲ್ಲಿನೀರು ಉಕ್ಕಿ ಹರಿದ ಪರಿಣಾಮ ಉದಯ್‌ ಬೈಕ್‌ಸಮೇತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ವಿಷಯ ತಿಳಿದ ತಕ್ಷಣ ಕೆ.ಆರ್‌.ಪೇಟೆ ಅಗ್ನಿಶಾಮಕ ಠಾಣೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದಾಗ ಬೈಕ್‌ ಪತ್ತೆಯಾಗಿದೆ. ಆದರೆ ಉದಯ್‌ ಶವ ಪತ್ತೆಯಾಗಿರುವುದಿಲ್ಲ. ರಾತ್ರಿಯಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿ ಭಾನುವಾರಸಂಜೆಯವರೆಗೂ ಕಾರ್ಯಾಚರಣೆ ನಡೆಸಿದರೂ ಶವ ಪತ್ತೆಯಾಗಿರಲಿಲ್ಲ. ಕತ್ತಲಾದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಸೋಮವಾರ ಶವ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಯಲಿದೆ.

ಸೇತುವೆ ನಿರ್ಮಿಸಲು ಬೇಡಿಕೆ: ಸದರಿ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಶ್ಯಾರಹಳ್ಳಿ, ಗೊರವಿ, ಹೆತ್ತಗೋನಹಳ್ಳಿಗ್ರಾಮಗಳಿಗೆ ಹೋಗುವಸಾರಿಗೆ ಬಸ್‌ಗಳು ಇದೇಮಾರ್ಗವಾಗಿ ಓಡಾಡುತ್ತವೆ. ಹಾಗಾಗಿ ಕೂಡಲೇ ಈ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸಬೇಕು ಎಂಬುದುಈ ಮಾರ್ಗದ ಪ್ರಯಾಣಿಕರ ಹತ್ತಾರು ವರ್ಷಗಳ ಒತ್ತಾಯವಾಗಿದೆ.

ಇದೇ ಕೈಗೋನಹಳ್ಳಿ ಗ್ರಾಮದವರಾದ ಸಚಿವ ನಾರಾಯಣಗೌಡ ಅವರು ಕೂಡಲೇ ಇಲ್ಲಿ ಸೇತುವೆನಿರ್ಮಿಸಿಕೊಡಲು ಸೂಕ್ತ ಕ್ರಮ ವಹಿಸಬೇಕು. ಈ ಮೂಲಕ ಮಳೆಗಾಲದಲ್ಲಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ವಾಹನಗಳು ಓಡಾಡಲುಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಸದರಿಮಾರ್ಗದ ಪ್ರಯಾಣಿಕರು ಸಚಿವರನ್ನು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next