ಕೊಪ್ಪಳ: ಸಾಯುವ ಮುನ್ನಾ ದಿನ ತನ್ನ ಸಹಪಾಠಿಗಳ ಜೊತೆ ಫ್ರೆಂಡ್ ಶಿಪ್ ಬೆಲ್ಟ್ ಕಟ್ಟಿಸಿಕೊಂಡಿದ್ದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕನು ಭಾನುವಾರ ಇಹಲೋಕ ತ್ಯಜಿಸಿದ ಕರುಣಾಜನಕ ಘಟನೆ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಡೆದಿದೆ.
ಮೃತ ಬಾಲಕನ್ನು ಸುಹಾಸ್ ಎಂದು ತಿಳಿದು ಬಂದಿದೆ. ಕಾರಟಗಿಯ ಖಾಸಗಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ. ಈತನು ಓದಿನಲ್ಲೂ ತುಂಬ ಜಾಣನಿದ್ದ. ತರಗತಿಯಲ್ಲಿ ಎಲ್ಲರಿಗಿಂತಲೂ ಟಾಪರ್ ಆಗಿದ್ದನು. ಆದರೆ ಕೆಲವು ತಿಂಗಳಿಂದ ಈತನಿಗೆ ಕಿಡ್ನಿ ಸಮಸ್ಯೆ ತುಂಬಾ ಕಾಡಿತ್ತು. ಇದರಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಸುಹಾಸ್ ಹಾಸಿಗೆಯನ್ನಡಿದಿದ್ದನು.
ಇದನ್ನೂ ಓದಿ: ಜಿಲ್ಲಾಡಳಿತದಿಂದ ದಕ್ಷಿಣ ಕನ್ನಡದಲ್ಲಿ ಇನ್ನೂ 2 ದಿನ ನಿರ್ಬಂಧ ವಿಸ್ತರಣೆ
ಶನಿವಾರವಷ್ಟೇ ತನ್ನ ಶಾಲೆ, ಶಿಕ್ಷಕರನ್ನು ನೋಡಬೇಕು. ಸ್ನೇಹಿತರನ್ನು ಕಾಣಬೇಕು ಎಂದು ಪಾಲಕರಿಗೆ ಇಚ್ಛೆ ವ್ಯಕ್ತಪಡಿಸಿದ್ದ. ಮಗನ ಇಚ್ಚೆಯಂತೆ ಆತನ ಹೆತ್ತವರು ಮಗನು ಓದಿದ ಶಾಲೆಗೆ ಕಾರಿನಲ್ಲಿ ಕರೆ ತಂದಿದ್ದರು. ಶಾಲೆಯ ಆತನ ಸ್ನೇಹಿತರು ಸುಹಾಸನ ಸ್ಥಿತಿ ನೋಡಿ ಕಣ್ಣೀರಿಟ್ಟಿದ್ದರು. ಅಲ್ಲದೇ, ಸ್ನೇಹದ ಸಂಕೇತವಾದ ಫ್ರೆಂಡ್ ಶಿಪ್ ಬೆಲ್ಟ್‌ನ್ನು ಕಣ್ಣೀರಿಡುತ್ತಲೇ ಕಟ್ಟಿ ನಮ್ಮ ಸ್ನೇಹ ಸಂಬಂಧ ಗಟ್ಟಿಯಾಗಿರಲಿ ಎಂದು ಹಾರೈಸಿದ್ದರು. ಆತನೂ ಅರೆಪ್ರಜ್ಞಾ ಸ್ಥಿತಿಯ ಮಧ್ಯೆ ಸ್ನೇಹಿತರೊಂದಿಗೆ ಪ್ರೆಂಡ್‌ಶಿಪ್ ಬೆಲ್ಟ್ ಕಟ್ಟಿಸಿಕೊಂಡಿದ್ದನು. ಆದರೆ ವಿಧಿ ಬರಹವೆಂಬಂತೆ ಭಾನುವಾರ ಆತನು ಇಹಲೋಕ ತ್ಯಜಿಸಿದ್ದಾನೆ. ಆತನ ಸ್ನೇಹಿತರು ಸ್ನೇಹದ ಬೆಲ್ಟ್ ಕಟ್ಟುವ ಮೂಲಕ ಕೊನೆಯ ವಿದಾಯ ಹೇಳಿ ಕಣ್ಣೀರಿಟ್ಟಿದ್ದಾರೆ.
ಆ ದೇವರಿಗೆ ಕರುಣೆಯೇ ಇಲ್ಲವೇನೋ ಎಂದೆನಿಸಿತು. ಜಗತ್ತಿನಲ್ಲಿ ಬಾಳಿ ಬೆಳಗಬೇಕಾದ ಪುಟಾಣಿ ಕಂದಮ್ಮ ಈ ಜಗವನ್ನೇ ಬಿಟ್ಟು ಹೋಗಿದ್ದಾನೆ. ಪಾಲಕರು ಆತನ ಇಚ್ಛೆಯಂತೆ ಶಾಲೆಯ ಶಿಕ್ಷಕರನ್ನು, ಸ್ನೇಹಿತರನ್ನು ಭೇಟಿ ಮಾಡಿಸಿದ್ದಾರೆ. ಶಿಕ್ಷಕರು, ಸ್ನೇಹಿತರು ಕಣ್ಣೀರಿಡುತ್ತಲೇ ಆತನ ಸ್ಥಿತಿ ನೋಡಿ ಮರುಗಿದ್ದಾರೆ.