Advertisement

ಕಾರ್ಕಳ: ಬಟ್ಟೆ ಒಣಗಿಸುವಾಗ ಆಯತಪ್ಪಿ ಬಿದ್ದ ಮಹಿಳೆ; ಚಿಕಿತ್ಸೆ ಫಲಕಾರಿಯಾಗದೆ ಸಾವು

03:22 PM Nov 27, 2021 | Team Udayavani |

ಕಾರ್ಕಳ: ಬಟ್ಟೆ ಒಣಗಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಆಯತಪ್ಪಿ ಮಹಿಳೆಯೊಬ್ಬರು ಬಿದ್ದು ಮೃತ ಪಟ್ಟಿರುವ ಘಟನೆ ನಿಟ್ಟೆಯಲ್ಲಿ ನಡೆದಿದೆ.

Advertisement

ಕಮಲ ಪ್ರಿಯಾ ಬಿ (48) ಮೃತ ಮಹಿಳೆ.  ನವೆಂಬರ್ 24 ರಂದು ನಿಟ್ಟೆಯ ವಸತಿಗೃಹದ ಬಾಡಿಗೆ ಮನೆಯಲ್ಲಿ ವಾಸವಿದ್ದ ಬಾಲಸುಬ್ರಹ್ಮಣಿ ಎಂಬವರ ಪತ್ನಿ ಕಮಲ ಪ್ರಿಯಾ ಬಿ ಅವರು ಬಾಲ್ಕನಿಯಲ್ಲಿ ಬಟ್ಟೆ ಒಣಗಿಸುತ್ತಿದ್ದಾಗ ಆಯತಪ್ಪಿ ಕಾಲು ಜಾರಿ ಬಿದ್ದಿದ್ದರು.

ಆಕಸ್ಮಿಕವಾಗಿ ಆಯ ತಪ್ಪಿ ಕೆಳಕ್ಕೆ ಬಿದ್ದು, ಗಾಯಗೊಂಡ ಅವರನ್ನು ಕೂಡಲೇ  ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ  ಚಿಕಿತ್ಸೆಗೆ ಸ್ಪಂದಿಸದೆ ಅವರು  ಶುಕ್ರವಾರ (ನ.26) ರಂದು ಮೃತಪಟ್ಟಿದ್ದಾರೆ.

ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next