Advertisement

ಧರ್ಮ ಜನರ ಹೊಟ್ಟೆ ತುಂಬಿಸಲ್ಲ, ಶ್ರೀಲಂಕಾದ ದುರಂತ ಭಾರತದಲ್ಲೂ ಆಗಬಹುದು: ದಿನೇಶ್ ಗುಂಡೂರಾವ್

01:13 PM May 13, 2022 | Team Udayavani |

ಬೆಂಗಳೂರು: ಆರ್ಥಿಕ ಶಿಸ್ತಿಲ್ಲದ ನರೇಂದ್ರ ಮೋದಿಯವರ ಆಡಳಿತದಿಂದ‌ ದೇಶದ ಸಾಮಾನ್ಯ ವರ್ಗ ಬದುಕಲು ಹೋರಾಟ ನಡೆಸಬೇಕಾಗಿದೆ. ಮೋದಿಯವರು ದೇಶದ ನೈಜ ಸಮಸ್ಯೆಗಳನ್ನು ಮರೆಮಾಚಲು ಧರ್ಮ‌ ದೇವರು ಎಂಬ ಅಸ್ತ್ರ ಪ್ರಯೋಗಿಸುತ್ತಿದ್ದಾರೆ.‌ ಆದರೆ ಧರ್ಮ ಜನರ ಹೊಟ್ಟೆ ತುಂಬಿಸುವುದಿಲ್ಲ.‌ ಜನರ ಹೊಟ್ಟೆಗೆ‌ ಗತಿಯಿಲ್ಲದ ಸ್ಥಿತಿ ಬಂದರೆ‌ ಶ್ರೀಲಂಕಾದ ದುರಂತ ಭಾರತದಲ್ಲೂ ಆಗಬಹುದು ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೋದಿಯವರ ಆಡಳಿತದಲ್ಲಿ ಹಣದುಬ್ಬರ 7.79 ಕ್ಕೆ ಏರಿ ಎಂಟು ವರ್ಷದಲ್ಲಿ ಗರಿಷ್ಠ ಸಾಧನೆ ಮಾಡಿದೆ. ಹಸಿವಿನ ಸೂಚ್ಯಂಕದಲ್ಲಿ ಭಾರತಕ್ಕೆ 101ನೇ ಸ್ಥಾನ, ಬಡತನ ಸೂಚ್ಯಂಕದಲ್ಲಿ 66 ನೇ ಸ್ಥಾನ. ನಿರುದ್ಯೋಗದ ದರ 7.83% ಏರಿಕೆ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ.‌ ಪೆಟ್ರೋಲ್ 113, ಡೀಸೆಲ್ 96. ಅಡುಗೆ ಎಣ್ಣೆ 85 ರೂ ನಿಂದ 205 ರೂಪಾಯಿಗೆ ಏರಿಕೆ. ಇದಪ್ಪಾ ಅಚ್ಛೆದಿನ್ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ:ವಿಧಾನ ಪರಿಷತ್- ರಾಜ್ಯಸಭೆ ಚುನಾವಣೆ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ; ಸಿಎಂ ಬೊಮ್ಮಾಯಿ

ಎಂಟು ವರ್ಷಗಳ ಹಿಂದೆ ಸಿಲಿಂಡರ್ ಬೆಲೆ 400 ಇದ್ದಾಗ ‘ದುಬಾರಿ ಕಾಂಗ್ರೆಸ್ ಸಾಕು-ಜನಪರ ಬಿಜೆಪಿ ಬೇಕು’ ಎಂದು ಬಿಜೆಪಿಯವರು ಬೀದಿ ಬೀದಿಯಲ್ಲಿ ಬ್ಯಾನರ್ ಹಾಕಿದ್ದರು. ಈಗ ಸಿಲಿಂಡರ್ 1000 ರೂ. ದಾಟಿದೆ. ಅಕ್ಕಿ, ಗೋದಿ ಹಿಟ್ಟು, ಸಾಬೂನು, ಟೂಥ್‌ ಪೇಸ್ಟ್ ಜನರ ಕೈಗೆಟುಕದಂತಾಗಿದೆ. ಈಗ ಬಿಜೆಪಿಯವರಿಗೆ ‘ದುಬಾರಿ ಬಿಜೆಪಿ ಸಾಕು’ ಎಂದು ಬ್ಯಾನರ್ ಹಾಕಿಸುವ ಧಮ್ ಇದೆಯೆ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next