ನಗರದಲ್ಲಿ 1995 ರಿಂದ ಟ್ರಾಫಿಕ್ ವಾರ್ಡನ್ ವ್ಯವಸ್ಥೆ ಇತ್ತು. ಆದರೆ ಕಳೆದ 5-6 ವರ್ಷಗಳಿಂದ ವಿವಿಧ ಕಾರಣಗಳಿಗೆ ಅದಕ್ಕೆ ಸರಕಾರದ ಮಾನ್ಯತೆ ದೊರೆತಿರಲಿಲ್ಲ. ಆದಾಗ್ಯೂ ಸೇವೆ ಮುಂದುವರಿದಿತ್ತು. ಕಳೆದೆರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಟ್ರಾಫಿಕ್ ವಾರ್ಡನ್ ವ್ಯವಸ್ಥೆ ಭಾಗಶಃ ಲಭ್ಯವಾಗುತ್ತಿದೆ.
Advertisement
ಏನಿದು ಟ್ರಾಫಿಕ್ ವಾರ್ಡನ್?ಸಂಚಾರ ನಿರ್ವಹಣೆಯಲ್ಲಿ ಸ್ವಯಂಸೇವಕರಾಗಿ ತೊಡಗಿಸಿ ಕೊಂಡು ಸಾರ್ವಜನಿಕರು, ಪೊಲೀಸರಿಗೆ ನೆರವಾಗುವವರು ಟ್ರಾಫಿಕ್ ವಾರ್ಡನ್‌ಗಳು. ದಿನದಲ್ಲಿ ಹೆಚ್ಚು ಸಂಚಾರ ದಟ್ಟಣೆ ಇರುವ ಸಮಯ, ಸ್ಥಳಗಳಲ್ಲಿ ಇವರ ಸೇವೆ ಪಡೆದುಕೊಳ್ಳಲಾಗುತ್ತದೆ. ಮಂಗಳೂರಿನಲ್ಲಿ ಜೋಸೆಫ್ ಗೊನ್ಸಾಲ್ವಿಸ್ ಅವರು ಈ ವ್ಯವಸ್ಥೆ ಆರಂಭಿಸಿದ್ದರು.
ಬೆಂಗಳೂರಿನಲ್ಲಿ ಮಾದರಿ ಯಲ್ಲಿ ಯೇ ನಗರದಲ್ಲಿಯೂ ಟ್ರಾಫಿಕ್ ವಾರ್ಡನ್ ವ್ಯವಸ್ಥೆ ರೂಪಿ ಸುವ ಉದ್ದೇಶ ಹೊಂದಲಾಗಿದೆ. ನಗರಕ್ಕೆ ಸುಮಾರು ಸದ್ಯ ಕನಿಷ್ಠ 100 ಮಂದಿ ಟ್ರಾಫಿಕ್ ವಾರ್ಡನ್‌ಗಳ ಅಗತ್ಯ ಇರುವುದನ್ನು ಕಂಡುಕೊಳ್ಳಲಾಗಿದ್ದು, ವಾರ್ಡನ್ ಸೇವೆಗೆ ಆಹ್ವಾನ, ಆಯ್ಕೆ ಪ್ರಕ್ರಿಯೆ ಶೀಘ್ರ ನಡೆಯಲಿದೆ. ನಿವೃತ್ತ ಉಪನ್ಯಾಸಕ, ಎನ್‌ಸಿಸಿ ಹಿರಿಯ ಅಧಿಕಾರಿ ಸುರೇಶ್‌ನಾಥ್ ಅವರನ್ನು ಈಗಾಗಲೇ ಚೀಫ್ ಟ್ರಾಫಿಕ್ ವಾರ್ಡನ್ ಆಗಿ ಆಯ್ಕೆ ಮಾಡಲಾಗಿದೆ. ಟ್ರಾಫಿಕ್ ವಾರ್ಡನ್ ಆರ್ಗನೈಜೇಷನ್
ಸರಕಾರದ ನಿಯಮದಂತೆ ಟ್ರಾಫಿಕ್ ವಾರ್ಡನ್ ಆರ್ಗನೈಜೇಶನ್(ಟಿಡಬ್ಲ್ಯುಒ) ಇರಬೇಕು. ಆದರೆ ಮಂಗಳೂರಿನಲ್ಲಿ ಇದುವರೆಗೆ ಟ್ರಾಫಿಕ್ ವಾರ್ಡನ್ ಸ್ಕ್ವಾ$Âಡ್(ಟಿಡಬ್ಲ್ಯು ಎಸ್) ಇತ್ತು. ಮುಂದೆ ಟಿಡಬ್ಲ್ಯುಒ ಜಾರಿಗೆ ಬರಲಿದೆ. ಎಲ್ಲ ಟ್ರಾಫಿಕ್ ವಾರ್ಡನ್‌ಗಳು ಬಿಳಿ ಅಂಗಿ ಮತ್ತು ನೀಲಿ ಪ್ಯಾಂಟ್ ಸಮವಸ್ತ್ರ ಧರಿಸಿ ಸೇವೆ ನೀಡಲಿದ್ದಾರೆ.
Related Articles
ನಗರದ ಟ್ರಾಫಿಕ್ ವಾರ್ಡನ್ ವ್ಯವಸ್ಥೆ ಯನ್ನು ಪುನಃ ರಚಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಇದರಿಂದ ಸಂಚಾರ ವ್ಯವಸ್ಥೆಯನ್ನು ಇನ್ನಷ್ಟು ಸುಗಮವಾಗಲಿದೆ. ಸರಕಾರದ ಎಲ್ಲ ನಿಯಮ ಗಳಂತೆಯೇ ಪುನಃ ರಚನೆಯಾಗಲಿದೆ.
– ನಟರಾಜ್ ಎಂ.ಎ., ಎಸಿಪಿ, ಸಂಚಾರಿ ಪೊಲೀಸ್ ವಿಭಾಗ, ಮಂಗಳೂರು
Advertisement
ಮುಂದಿನ ತಿಂಗಳು ಆರಂಭಹೊಸ ಟ್ರಾಫಿಕ್ ವಾರ್ಡನ್ ವ್ಯವಸ್ಥೆಗೆ ಈಗಾಗಲೇ ನಗರ ಪೊಲೀಸರ ಅನುಮತಿ ದೊರೆತಿದ್ದು, ಸರಕಾರ ಮಟ್ಟದಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಒಂದು ತಿಂಗಳಲ್ಲಿ ಹೊಸ ವ್ಯವಸ್ಥೆ ಅನುಷ್ಠಾನಕ್ಕೆ ಬರುವ ನಿರೀಕ್ಷೆ ಇದೆ. ಪಾಂಡೇಶ್ವರದಲ್ಲಿರುವ ಪೊಲೀಸ್ ಇಲಾಖೆಯ ಒಂದು ಹಳೆಯ ಕಟ್ಟಡವಿರುವ ಜಾಗವನ್ನು ಟ್ರಾಫಿಕ್ ವಾರ್ಡನ್ ಆರ್ಗನೈಜೇಶನ್‌ನ ಕಚೇರಿಗೆ ಒದಗಿಸಿಕೊಡುವುದಾಗಿಯೂ ಇಲಾಖೆ »ರವಸೆ ನೀಡಿದೆ.
-ಎಂ.ಎಲ್. ಸುರೇಶನಾಥ್, ನಿಯೋಜಿತ ಚೀಫ್ ಟ್ರಾಫಿಕ್ ವಾರ್ಡನ್