Advertisement
ದೇವಲ ಗಾಣಗಾಪುರದ ದತ್ತ ಕ್ಷೇತ್ರಕ್ಕೆ ಹುಣ್ಣಿಮೆ ಸಂದರ್ಭಗಳಲ್ಲಿ ಕಿಕ್ಕಿರಿದು ಜನರು ಸೇರುತ್ತಾರೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲದ್ದರಿಂದ ಗ್ರಾಮದ ಮುಖ್ಯ ರಸ್ತೆಗಳ ಮೇಲೆಲ್ಲ ಖಾಸಗಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.
ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಹೊಲಗಳಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಅಲ್ಲದೆ ನೂರಾರು ವಾಹನಗಳು ಬಂದು ಅಲ್ಲಲ್ಲಿ ನಿಲ್ಲುವುದರಿಂದ ಪೊಲೀಸರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಹಾರಾಷ್ಟ್ರ, ಸೀಮಾಂಧ್ರ, ತೆಲಂಗಾಣ ರಾಜ್ಯಗಳ ಜನರು ಘತ್ತರಗಿ ಭಾಗ್ಯವಂತಿ ದರ್ಶನಕ್ಕೆ ಬರುತ್ತಾರೆ. ಇಲ್ಲಿಯೂ ದೇವಲ ಗಾಣಗಾಪುರದ ರೀತಿಯಲ್ಲಿ ಸಂಚಾರ ಸಮಸ್ಯೆ ಇದೆ. ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದ್ದರಿಂದ ರಸ್ತೆಗಳ ಮೇಲೆ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
Related Articles
Advertisement
ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದ್ದರಿಂದ ಮುಖ್ಯ ರಸ್ತೆಗಳ ಮೇಲೆ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ನೂರಾರು ವಾಹನಗಳು ಓಡಾಡುವುದರಿಂದ ಧೂಳಿನ ಸಮಸ್ಯೆ ವಿಪರಿತವಾಗಿ ಕಾಡುತ್ತಿದೆ. ಅಲ್ಲದೆ ವೃದ್ದರು, ಮಕ್ಕಳು ರಸ್ತೆ ದಾಟುವುದು ದುಸ್ತರವಾಗಿದೆ ಎಂದು ಗ್ರಾಮಸ್ಥರು ಮತ್ತು ವ್ಯಾಪಾರಸ್ಥರು ತಿಳಿಸಿದ್ದಾರೆ.
ದೇವಲ ಗಾಣಗಾಪುರ ರಾಜ್ಯದ ಪ್ರಸಿದ್ಧಯಾತ್ರಾ ಸ್ಥಳವಾಗಿದೆ. ಆದರೆ ಇಲ್ಲಿನ ಸಂಚಾರ ಮತ್ತು ನಿಲುಗಡೆ ಸಮಸ್ಯೆಯಿಂದ ಗ್ರಾಮದ ಹೆಸರು ಹಾಳಾಗುತ್ತಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿ ತಕ್ಷಣ ಗ್ರಾಮದಲ್ಲಿನ ಸಂಚಾರ ಕಿರಿಕಿರಿಗೆ ಶಾಶ್ವತ ಮುಕ್ತಿ ಕೊಡಿಸುವ ಕೆಲಸ ಮಾಡಬೇಕು ಎಂದು ದೇವಲ ಗಾಣಗಾಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವಾಹನ ಸವಾರಿ ಸವಾಲುಘತ್ತರಗಿ ಗ್ರಾಮದ ರಸ್ತೆ ಕಿರಿದಾಗಿದ್ದು, ವಾಹನ ಸವಾರಿ ಮಾಡುವುದು ಸವಾಲಿನ ಕೆಲಸವಾಗಿದೆ. ಅಲ್ಲದೆ ಕಬ್ಬಿನ ಕಾರ್ಖಾನೆಗೆ ಹೋಗುವ ವಾಹನಗಳಿಗಾಗಿ ಬೈಪಾಸ್ ರಸ್ತೆ ನಿರ್ಮಿಸಬೇಕು. ಇಲ್ಲದಿದ್ದರೆ ಬೇಕಂತಲೇ ಅನಾಹುತಗಳಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ.
ರಾಜೇಂದ್ರ ಪಾಟೀಲ, ಬಿಜೆಪಿ ಮುಖಂಡರು ಅಫಜಲಪುರ ಮಲ್ಲಿಕಾರ್ಜುನ ಹಿರೇಮಠ