Advertisement

ದಂಡ ತಪ್ಪಿಸಲು ಎರಡೆರಡು ನಂಬರ್‌ ಪ್ಲೇಟ್‌

02:01 PM Jul 31, 2022 | Team Udayavani |

ಬೆಂಗಳೂರು: ಸಂಚಾರಿ ಪೊಲೀಸರಿಂದ ದಂಡ ತಪ್ಪಿಸಲು ಒಂದೇ ಬುಲೆಟ್‌ಗೆ ಎರಡೆರಡು ನಂಬರ್‌ ಪ್ಲೇಟ್‌ ಅಳವಡಿಸಿದ್ದ ಸವಾರನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಅಲ್ಲದೆ, ಆರೋಪಿ 29 ಸಾವಿರ ರೂ. ದಂಡ ಪಾವತಿಸಿದ್ದಾನೆ.

Advertisement

ನಂದಿನಿಲೇಔಟ್‌ ನಿವಾಸಿ ಮರಿಗೌಡ (31) ಬಂಧಿತ. ಆರೋಪಿ ಹೊಂದಿದ್ದ ಬುಲೆಟ್‌ನ ದಾಖಲೆಗಳ ಪ್ರಕಾರ ನಂಬರ್‌ ಕೆಎ05 ಜೆಎಸ್‌ 7536. ಆದರೆ, ಸಂಚಾರ ಪೊಲೀಸರ ದಿಕ್ಕು ತಪ್ಪಿಸಲು ಹಿಂಬದಿ ಕೆಎ05 ಜೆಎಸ್‌ 7538 ಎಂಬ ನಂಬರ್‌ ಪ್ಲೇಟ್‌ ಅಳವಡಿಸಿದ್ದಾನೆ. ಇದೇ ತಿಂಗಳ 29ರಂದು ನಂದಿನಿ ಲೇಔಟ್‌ ಠಾಣಾ ವ್ಯಾಪ್ತಿಯ ಕೂಲಿನಗರ ಸೇತುವೆ ಬಳಿ ಕರ್ತವ್ಯದಲ್ಲಿದ್ದ ರಾಜಾಜಿ ನಗರ ಸಂಚಾರಿ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ಸೈಯ್ಯದ್‌ ನವಾಜ್‌ ಅನುಮಾನದ ಮೇರೆಗೆ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.

ಆರೋಪಿಯ ಬುಲೆಟ್‌ನ ಮುಂದಿನ ನಂಬರ್‌ ಪ್ಲೇಟ್‌ ಮೇಲೆ 19,500 ರೂ. ದಂಡವಿದ್ದು, ಹಿಂದಿನ ನಂಬರ್‌ ಪ್ಲೇಟ್‌ನಲ್ಲಿ 9,500 ರೂ.ದಂಡವಿದೆ. ಸದ್ಯ ಆರೋಪಿಯನ್ನು ಬಂಧಿಸಿ ಆ.12ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮುಂದಿನ ತನಿಖೆಗಾಗಿ ನಂದಿನಿ ಲೇಔಟ್‌ ಪೊಲೀಸ್‌ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next