ಕಪುರ್ತಲಾ: ಪಂಜಾಬ್ನಲ್ಲೊಂದು ಭೀಕರ ದುರ್ಘಟನೆ ನಡೆದಿದೆ. ಟ್ರಕ್ ಚಾಲಕನೊಬ್ಬನ ಕ್ರೌರ್ಯಕ್ಕೆ ಸಿಲುಕಿದ ಸಂಚಾರಿ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ಸಾವಿಗೀಡಾಗಿದ್ದಾರೆ.
ಸಬ್ ಇನ್ಸ್ಪೆಕ್ಟರ್ ಮಲ್ಕಿಯತ್ ಸಿಂಗ್ ಮಂಗಳವಾರ ಇಲ್ಲಿನ ಡಿಸಿ ಚೌಕ್ನಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ಅದೇ ವೇಳೆ ಆ ಮಾರ್ಗದಲ್ಲಿ ಬರುತ್ತಿದ್ದ ಸಣ್ಣ ಟ್ರಕ್ವೊಂದಕ್ಕೆ ತಪಾಸಣಾ ದೃಷ್ಟಿಯಿಂದ ನಿಲ್ಲಿಸಲು ಸಂಕೇತ ಮಾಡಿದರು. ಅದನ್ನು ಕಡೆಗಣಿಸಿದ ಚಾಲಕ ನೇರವಾಗಿ ಟ್ರಕ್ ಅನ್ನು ಅಧಿಕಾರಿಯ ಮೇಲೆಯೇ ಹಾಯಿಸಿದ್ದಾರೆ.
ಈ ವೇಳೆ ಅಧಿಕಾರಿಯ ವಸ್ತ್ರ ಟ್ರಕ್ಗೆ ಸಿಕ್ಕಿಕೊಂಡಿದೆ. ಅಧಿಕಾರಿಯನ್ನು ಟ್ರಕ್ ಸ್ವಲ್ಪ ದೂರ ಎಳೆದೊಯ್ದಿದೆ. ವಿಪರೀತ ಗಾಯಗೊಂಡ ಮಲ್ಕಿಯತ್ರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಪ್ರಯೋಜನವಾಗಿಲ್ಲ. ಅವರು ಅಲ್ಲೇ ಸಾವನ್ನಪ್ಪಿದ್ದಾರೆ.
ಈ ಭೀಕರ ದುರ್ಘಟನೆಗೆ ಕಾರಣವಾದ ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ, ಇಡೀ ರಾಜ್ಯದಲ್ಲಿ ಆತನನ್ನು ವಶಕ್ಕೆ ಪಡೆಯಲು ಜಾಲ ಬೀಸಲಾಗಿದೆ.