Advertisement

ರಸ್ತೆ ಗುಂಡಿ ಮುಚ್ಚಿಸಿದ ಹೆದ್ದಾರಿ ಗಸ್ತು ಸಿಬ್ಬಂದಿ

03:03 PM Sep 13, 2022 | Team Udayavani |

ಶಹಾಬಾದ: ರಾಷ್ಟ್ರೀಯ ಹೆದ್ದಾರಿ 150 ದೇವನತೆಗನೂರ ಸಮೀಪದಲ್ಲಿ ರಸ್ತೆಯ ಮೇಲೆ ದೊಡ್ಡದಾದ ಗುಂಡಿಯಲ್ಲಿ ಸಾಗುತ್ತಿರುವ ವಾಹನಗಳ ಅಪಘಾತಗಳಾಗುವ ಸಾಧ್ಯತೆ ಇರುವುದನ್ನು ಕಂಡು ಶಹಾಬಾದ ಉಪವಿಭಾಗದ ಹೈವೆ ಪೆಟ್ರೋಲಿಂಗ್‌ ಎಎಸ್‌ಐ ಅಶೋಕ ಕಟ್ಟಿ ಹಾಗೂ ಸಿಬ್ಬಂದಿ ವಿಠ್ಠಲ್‌ ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ತಿಳಿಸಿ ರಸ್ತೆ ದುರಸ್ತಿ ಮಾಡಿಸಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

Advertisement

ಪೆಟ್ರೋಲಿಂಗ್‌ ಎಎಸ್‌ಐ ಅಶೋಕ ಕಟ್ಟಿ ಹಾಗೂಸಿಬ್ಬಂದಿ ವಿಠ್ಠಲ್‌ ಹೋಗುವಾಗ ಲಾರಿ, ಕಾರು ಹಾಗೂ ಬೈಕ್‌ ಸವಾರರಿಗೆ ರಸ್ತೆಯಲ್ಲಿ ನೀರು ನಿಂತು ಕೊಂಡಿರಬಹುದೆಂದು ಹಾಗೇ ವಾಹನ ಚಲಾಯಿಸಿದ್ದರಿಂದ ಗುಂಡಿಯಲ್ಲಿ ಟೈರ್‌ ಸಿಗಿಬಿದ್ದು ಆಯಾ ತಪ್ಪಿ ಅಪಘಾತವಾಗುವುದು ಅದೃಷ್ಟವಶ ತಪ್ಪಿದನ್ನು ಕಂಡಿದ್ದಾರೆ. ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ಗುರುರಾಜ ಜೋಶಿ ಅವರನ್ನು ಸಂಪರ್ಕಿಸಿದ್ದಾರೆ. ದೊಡ್ಡದಾದ ಗುಂಡಿ ಬಿದ್ದಿದೆ. ಗುಂಡಿಯಲ್ಲಿ ನೀರು ತುಂಬಿಕೊಂಡಿದ್ದರಿಂದ ಗುಂಡಿ ಕಾಣದೇ ಅಪಘಾತಕ್ಕೊಳಗಾಗುತ್ತಾರೆ. ಕೂಡಲೇ ದುರಸ್ತಿಗೊಳಿಸಿ ಎಂದು ಮನವಿ ಮಾಡಿದ್ದಾರೆ.

ತಕ್ಷಣವೇ ಸ್ಪಂದಿಸಿದ ಎಇಇ ಗುರುರಾಜ ಜೋಶಿ ಅರ್ಧ ಗಂಟೆಯಲ್ಲಿಯೇ ಸಿಬ್ಬಂದಿಗೆ ಕಳುಹಿಸಿ ದುರಸ್ತಿಗೊಳಿಸಿ ಗುಂಡಿಯನ್ನು ಮುಚ್ಚುವಂತ ಕೆಲಸ ಮಾಡಿದ್ದಾರೆ. ಇದರಿಂದ ಸಾರ್ವಜನಿಕರ ಅಪಘಾತಗಳನ್ನು ತಡೆಗಟ್ಟುವಲ್ಲಿ ಹೈವೆ ಪೆಟ್ರೋಲಿಂಗ್‌ನ ಸಿಬ್ಬಂದಿ ಉತ್ತಮ ಕೆಲಸ ಮಾಡಿರುವುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next