ದೇವನಹಳ್ಳಿ: ಗ್ರಾಮೀಣ ಭಾಗದಲ್ಲಿರುವ ರಸ್ತೆಗಳು ಒಂದು ಕಡೆ ಅಭಿವೃದ್ಧಿಯಾಗದೆ ಉಳಿದುಕೊಂಡಿದ್ದು, ಮತ್ತೂಂದೆಡೆ ರಸ್ತೆಗಳಲ್ಲಿ ಓವರ್‌ಲೋಡ್ ವಾಹನ ಸಂಚಾರದಿಂದ ಹದಗೆಡುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ರಸ್ತೆಗಳು ಹದ ಗೆಟ್ಟು ಜನರು ಆ ರಸ್ತೆಯಲ್ಲಿಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗಣಿಗಾರಿಕೆ ಯಥೇತ್ಛವಾಗಿ ನಡೆಯುವ ತೈಲಗೆರೆ, ಸೊಣ್ಣೇನಹಳ್ಳಿ, ಮುದ್ದನಾಯಕನ ಹಳ್ಳಿ, ಚಿಕ್ಕಗೊಲ್ಲಹಳ್ಳಿಗಳಲ್ಲಿ ಹೆಚ್ಚು ಕಲ್ಲುದಿಂಬೆ ಗಳ ಲಾರಿಹೆಚ್ಚು ಸಂಚರಿಸುತ್ತದೆ. ಹೆವಿ ಲೋಡ್ ಹಾಕುವುದರಿಂದ ರಸ್ತೆಗಳು ಬಾಳಿಕೆ ಬರುವುದಿಲ್ಲ. ಇತ್ತೀಚೆಗೆ ಬೀಳುತ್ತಿರುವ ಮಳೆ ಹಾಗೂ ಲಾರಿಗಳ ಸಂಚಾರದಿಂದ ರಸ್ತೆಗಳಲ್ಲಿ ಗುಂಡಿ ಬೀಳುತ್ತಿದೆ ಎಂದುಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೇಳಿ ಕೇಳಿ ಜಿಲ್ಲಾಡಳಿತ ಭವನವಿರುವ ಕೇವಲ2-3 ಕಿ.ಮೀ. ದೂರದಲ್ಲಿರುವ ಗ್ರಾಮದ ರಸ್ತೆಯಲ್ಲಿಯಾವಾಗವೆಂದರೆ ಆವಾಗ ಬೃಹತ್ ಗಾತ್ರದವಾಹನ ಸಂಚರಿ ಸುತ್ತಲೇ ಇರುವುದರು ಗ್ರಾಮಸ್ಥರ ಮತ್ತು ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿದೆ. ಆದಷ್ಟು ಬೇಗನೇ ಸಂಬಂಧಪಟ್ಟ ಇಲಾಖೆ
ಸೂಕ್ತ ಕಾನೂನು ಕ್ರಮ ಕೈಗೊಂಡು ಸಾರ್ವ ಜನಿಕರ ಸುಗಮ ಸಂಚಾರಕ್ಕೆ ಅನು ಕೂಲ ಮಾಡಿಕೊಡಬೇಕೆಂದು ಬ್ಯಾಡರಹಳ್ಳಿ, ಚಿಕ್ಕೋಬದೇನಹಳ್ಳಿಮತ್ತು ಸೋಲೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Related Articles
ಸಾರ್ವಜನಿಕರ ಓಡಾಟಕ್ಕೆ ತೊಂದರೆ: ತಾಲೂಕಿನ ಮೀಸಗಾನಹಳ್ಳಿ, ತೈಲಗೆರೆ, ಮುದ್ದನಾಯಕನಹಳ್ಳಿ ಮತ್ತು ಚಿಕ್ಕೋ ಬದೇ ನಹಳ್ಳಿ ಗ್ರಾಮಗಳ ಸುತ್ತಮುತ್ತಲು ನಡೆಯುತ್ತಿ ರುವ ಕಲ್ಲು ಗಣಿಗಾರಿಕೆಯಿಂದ ಸಾಕಷ್ಟು ಪ್ರಮಾಣದಲ್ಲಿ ಲಾರಿಗಳು ದಿನನಿತ್ಯ ಸಂಚರಿಸುತ್ತಲೇ ಇರುತ್ತದೆ. ಇದರಿಂದ ರಸ್ತೆಗಳಲ್ಲಿ ಗುಂಡಿಗಳು ಬಿದ್ದು, ಸಾರ್ವಜನಿಕರ ಓಡಾ ಟಕ್ಕೆ ಹೆಚ್ಚಿನ ತೊಂದರೆಯಾಗುತ್ತಿದೆ.
ಮಾರ್ಗಸೂಚಿ ಪಾಲಿಸಲ್ಲ: ಲಾರಿಗಳಲ್ಲಿ ತುಂಬುವ ಕಲ್ಲುಗಳು ಯಾವುದೇ ಮಾರ್ಗ ಸೂಚಿಗಳನ್ನು ಪಾಲಿಸದೆ, ರಾಷ್ಟ್ರೀಯ ಹೆದ್ದಾರಿ ಯನ್ನು ಸಂಪರ್ಕಿಸಿ, ಅಲ್ಲಿಂದ ಸಾದಹಳ್ಳಿ, ಬೆಂಗಳೂರುಮಾರ್ಗವಾಗಿ ಸಂಚರಿಸುವ ರಸ್ತೆಗಳಿಗೆ ದಿನನಿತ್ಯ ನೂರಾರು ಸಂಖ್ಯೆ ಯಲ್ಲಿ ಬೃಹತ್ ಲಾರಿಗಳುಕಲ್ಲುದಿಬ್ಬಗಳನ್ನು ತುಂಬಿ ಕೊಂಡು ಸಂಚರಿಸುತ್ತಿರುವುದರಿಂದ ರಸ್ತೆಯ ಡಾಂಬರೀಕರಣ ಕಿತ್ತು ಹೋಗಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದು, ಮಳೆ ನೀರು ನಿಲ್ಲುವಂತೆ ಆಗಿದೆ.
ಯಾವುದೇ ಕ್ರಮ ಜರುಗಿಸುತ್ತಿಲ್ಲ: ಗ್ರಾಮಸ್ಥರಿಗೆ ಮತ್ತು ರೈತರಿಗೆ ಹೆಚ್ಚಿನ ಅನನುಕೂಲ ವಾಗುತ್ತಿದ್ದು,ಗುಂಡಿಗಳಲ್ಲಿ ಬಿದ್ದು ಎದ್ದು ಹೋಗುವ ಪರಿಸ್ಥಿತಿಇದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳ ಗಮನ ಕ್ಕಿದ್ದರೂ, ಯಾವುದೇ ಕ್ರಮ ಜರುಗಿ ಸುತ್ತಿಲ್ಲವೆಂದು ಆರೋಪ ಹೆಚ್ಚಾಗಿ ಕೇಳಿಬರುತ್ತಿದೆ.
ಕೊಯಿರ ಭಾಗದಲ್ಲಿಯೂ ಇದೇ ರೀತಿ ರಸ್ತೆಯಲ್ಲಿಬೃಹತ್ ಲಾರಿಗಳು ಸಂಚರಿಸುತ್ತಿರುವುದರಿಂದಸಂಬಂಧ ಪಟ್ಟ ಅಧಿಕಾರಿಗಳು ಮಾತ್ರಮೌನವಾಗಿರುವುದಾ ದರೂ ಏಕೆ ಎಂಬುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ.