Advertisement

ಪ್ರಮುಖ ವೃತ್ತಗಳಲ್ಲಿ ಸಂಚಾರ ಅವ್ಯವಸ್ಥೆ

03:50 PM Sep 17, 2021 | Team Udayavani |

ದೊಡ್ಡಬಳ್ಳಾಪುರ: ನಗರದ ಡಿ.ಕ್ರಾಸ್‌ ವೃತ್ತದಲ್ಲಿ ಹಾಗೂ ಟಿ.ಬಿ ವೃತ್ತದಲ್ಲಿ ಇತ್ತೀಚಿನ ದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದು, ಅಪಘಾತಗಳು ಸಾಮಾನ್ಯವಾಗಿವೆ. ಈ ನಿಟ್ಟಿನಲ್ಲಿ ಇಲ್ಲಿ ಸಂಚಾರ ದಟ್ಟಣೆ ನಿಯಂತ್ರಣದ ಜತೆಗೆ ವೈಜ್ಞಾನಿಕವಾಗಿ ರಸ್ತೆ ತಿರುವು ನಿರ್ಮಿಸಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

Advertisement

ಅವೈಜ್ಞಾನಿಕ ವೃತ್ತ: ನಗರದ ಡಿ.ಕ್ರಾಸ್‌ ಬಳಿ ಇದೀಗ ರೇಲ್ವೆ ಮೇಲ್ಸೇತುವೆ ನಿರ್ಮಾಣವಾಗಿದ್ದು, ಬೆಂಗಳೂರು ಹಿಂದೂ ಪುರ ಹೆದ್ದಾರಿ ಮೂಲಕ ತೆರಳುವ ನೂರಾರು ವಾಹನಗಳು ಯಾವುದೇ ಅಡೆತಡೆ ಇಲ್ಲದೇ, ಡಿ.ಕ್ರಾಸ್‌ ವೃತ್ತದ ಮಾರ್ಗವಾಗಿ ಚಲಿಸುತ್ತವೆ. ಇಲ್ಲಿನ ವೃತ್ತ ಸಹ
ಅವೈಜ್ಞಾನಿಕವಾಗಿದ್ದು, ಹೆದ್ದಾರಿ ಬದಿಯಲ್ಲಿ ಇರಬೇಕಾದ ರಸ್ತೆ ವ್ಯವಸ್ಥೆ ಇಲ್ಲಿಲ್ಲ. ಇನ್ನು ರಸ್ತೆ ಬದಿಯಲ್ಲಿನ ಅಂಗಡಿಗಳಿಗೆ ಬರುವ ಗ್ರಾಹಕರು ರಸ್ತೆ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸುವುದರಿಂದ, ಭಾರೀ ವಾಹನಗಳು ರಸ್ತೆಯಲ್ಲಿ ಸಂಚರಿಸಲು ತೊಂದರೆಯಾಗುತ್ತಿದೆ.

ಇತ್ತೀಚೆಗಷ್ಟೇ ಇದೇ ಜಾಗದಲ್ಲಿ ವಾಹನವೊಂದು ವೃದ್ಧರೊಬ್ಬರ ಮೇಲೆ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದ ಘಟನೆ ನಡೆದಿತ್ತು. ಹೊರಗಡೆ ಯಿಂದ ಬರುವ ವಾಹನ ಗಳಿಗೆ ಇಲ್ಲಿನ ರಸ್ತೆಯ ಬಗ್ಗೆ ಅರಿವಿಲ್ಲದೇ ಅಪಘಾತಗಳು ಸಂಭವಿಸುತ್ತಿರುತ್ತವೆ. ಇಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಿ, ಡಿ.ಕ್ರಾಸ್‌ ವೃತ್ತದ ಬಳಿ ಸಿಗ್ನಲ್‌ ದೀಪಗಳನ್ನು ಅಳವಡಿಕೆ ಮಾಡಬೇಕಿದೆ ಎನ್ನುತ್ತಾರೆ ಸಾರ್ವಜನಿಕರು.

ಇದನ್ನೂ ಓದಿ:ಗುಲಾಬಿ ಪ್ರೀತಿಯ ಸಂಕೇತ, ಮಲ್ಲಿಗೆ ಅದೃಷ್ಟದ ಸಂಕೇತ; ಜಡೆಗೆ ಹೂವು ಮುಡಿಯುವುದೇಕೆ?

ಸಿಗ್ನಲ್‌ ದೀಪ ಕಾರ್ಯ ನಿರ್ವಹಿಸಲ್ಲ: ನಗರದ ಟಿ.ಬಿ ವೃತ್ತದ ಬಳಿ ಬೆಂಗಳೂರು-ಹಿಂದೂಪುರ ಹೆದ್ದಾರಿ ಸಹ ಹಾದುಹೋಗುವುದರಿಂದ ಇಲ್ಲಿಯೂ ಸಹ ವಾಹನಗಳ ಸಂಚಾರ ಹೆಚ್ಚಾಗಿದೆ. ಇದರೊಂದಿಗೆ ನಗರದಿಂದ ಚಲಿಸುವ ವಾಹನಗಳು ಸಹ ಇದೇ ವೃತ್ತದಲ್ಲಿ ಸೇರುತ್ತವೆ. ಇದರಿಂದ
ವಾಹನ ದಟ್ಟಣೆ ಹೆಚ್ಚಾಗಿ ಹಲವಾರು ಬಾರಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುತ್ತದೆ. ಈ ಹಿನ್ನೆಲೆ ಇಲ್ಲಿ ಸಿಗ್ನಲ್‌ ದೀಪಗಳನ್ನು ಸಹ ಅಳವಡಿಸ ಲಾಗಿದೆ. ಸಿಗ್ನಲ್‌ ದೀಪಗಳನ್ನು ಅಳವಡಿಸಿ 5 ವರ್ಷಗಳಾಗಿವೆ. ಆದರೆ ಸಿಗ್ನಲ್‌ ದೀಪಗಳು ಕಾರ್ಯ ನಿರ್ವಹಿಸದೇ ನೆಪ ಮಾತ್ರಕ್ಕೆ ಮಾತ್ರಕ್ಕೆ ಇವೆ ಎನ್ನುವಂತಾಗಿದೆ. ಸಿಗ್ನಲ್‌ ದೀಪವಿಲ್ಲದ ಕಾರಣ, ವೇಗವಾಗಿ ಆಗಮಿಸಿ ವೃತ್ತದಲ್ಲಿ ಸಂಧಿಸುವ ವಾಹನಗಳು ಡಿಕ್ಕಿ ಹೊಡಿಸಿಕೊಂಡು.

Advertisement

ಸಣ್ಣ ಅಪಘಾತಗಳಾಗಿ ಜಗಳ ಕಾಯುವ ದೃಶ್ಯಗಳು ನಿತ್ಯ ಸಾಮಾನ್ಯವಾಗಿವೆ. ಶೀಘ್ರವೇ ಸಂಬಂಧಪಟ್ಟವರು ಇಲ್ಲಿ ವಾಹನಗಳ ನಿಯಂತ್ರಣಕ್ಕೆ ಪೊಲೀಸ್‌ ಸಿಬ್ಬಂದಿ ನೇಮಿಸುವುದರೊಂದಿಗೆ ಟಿ.ಬಿ ವೃತ್ತದ ಬಳಿ ಸಿಗ್ನಲ್‌ ದೀಪಗಳು ಕಾರ್ಯ ನಿರ್ವಹಿಸುವಂತೆ ಮಾಡಬೇಕಿದೆ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಸರ್ವಿಸ್‌ ರಸ್ತೆ ಇಲ್ಲ
ಪೊಲೀಸರು ಕೆಲಕಾಲ ಬಂದು ನಿಯಂತ್ರಿಸುವುದು ಬಿಟ್ಟರೆ ಸದಾಕಾಲ ಇಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ವಾಣಿಜ್ಯ ಮಳಿಗೆಗಳಿಗೆ ಹಾಗೂಸ್ಥಳೀಯರು ಸಂಚರಿಸಲು ಹೆದ್ದಾರಿಯಲ್ಲಿ ಸರ್ವಿಸ್‌ ರಸ್ತೆಇಲ್ಲದಂತಾಗಿದೆ. ರಸ್ತೆ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರಕ್ಕೆ ತೊಂದರೆ ಯಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸ ಬೇಕಿದೆ ಎನ್ನುತ್ತಾರೆ ಸ್ಥಳೀಯರಾದ ಬಸವರಾಜ್‌.

ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರು ವಾಗ ಹಾಗೂ ಕೆಲವು ಸಮಯದಲ್ಲಿ ವಾಹನದಟ್ಟಣೆ ಹೆಚ್ಚಾಗುತ್ತಿದ್ದು, ಈ ವೇಳೆ ಡಿ.ಕ್ರಾಸ್‌ ರಸ್ತೆ ಮೂಲಕ ಹಾದು ಹೋಗುವ ವಾಹನಗಳನ್ನು ಈ ರಸ್ತೆಗೆ ಸಂಪರ್ಕಿಸುವ ಪ್ರಮುಖ ವೃತ್ತಗಳಿಂದ ನಿಯಂತ್ರಿಸಲಾಗುತ್ತಿದೆ. ಡಿ.ಕ್ರಾಸ್‌ ವೃತ್ತದಲ್ಲಿ ಸಂಚಾರ ನಿಯಂತ್ರಣಕ್ಕೆ ಪೊಲೀಸ್‌ ವ್ಯವಸ್ಥೆ ಮಾಡಲಾಗುವುದು. ರಸ್ತೆ ಬದಿ ಅನಗತ್ಯ ವಾಹನ ನಿಲುಗಡೆ ತೆರವು ಮಾಡಲು ಕ್ರಮ ವಹಿಸಲಾಗುವುದು.
-ಎಂ.ಬಿ.ನವೀನ್‌ ಕುಮಾರ್‌, ಸರ್ಕಲ್‌ ಇನ್ಸ್‌ಪೆಕ್ಟರ್‌

-ಡಿ.ಶ್ರೀಕಾಂತ

Advertisement

Udayavani is now on Telegram. Click here to join our channel and stay updated with the latest news.

Next