Advertisement

ಹೆದ್ದಾರಿ ಸಂಚಾರಕ್ಕೆ ಮುಕ್ತವಾದರೂ ವಾಹನ ದಟ್ಟಣೆ

03:45 PM Feb 01, 2023 | Team Udayavani |

ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ 275ರ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಂಡಿದೆ. ನಗ ರದ ಹೊರವಲಯದ ಬೈಪಾಸ್‌ ಕೂಡ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ, ವೀಕೆಂಡ್‌ನ‌ಲ್ಲೂ ಸಂಚಾರ ದಟ್ಟಣೆ ಹೆಚ್ಚಾಗಿದೆ.

Advertisement

ಭಾನುವಾರ ಮಧ್ಯಾಹ್ನದಿಂದಲೇ ಬೆಂಗಳೂರು- ಮೈಸೂರು ಹೆದ್ದಾರಿಯ ಶ್ರೀರಂಗಪಟ್ಟಣ ಹಾಗೂ ಮಂಡ್ಯ ಬಳಿಯ ಬೈಪಾಸ್‌ ರಸ್ತೆಯು ಸಂಪೂರ್ಣ ವಾಹನ ದಟ್ಟಣೆ ಹೆಚ್ಚಾಗಿತ್ತು. ಕಾರಣ ಅಲ್ಲಲ್ಲಿ ಕಾಮ ಗಾರಿ ಇನ್ನೂ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ವಾಹನ ಸವಾ ರರು, ಪ್ರಯಾಣಿಕರು ಪರದಾಡುವಂತಾಗಿತ್ತು. ತಾಲೂಕಿನ ಇಂಡುವಾಳು ಹಾಗೂ ಹಳೇ ಬೂದ ನೂರು ಬಳಿ ಕಾಮಗಾರಿ ಶೇ.70ರಷ್ಟು ಪೂರ್ಣ ಗೊಂಡಿಲ್ಲ. ಅದಾಗಲೇ ಬೈಪಾಸ್‌ ಸಂಚಾರ ಮುಕ್ತಗೊಳಿಸಲಾಗಿದೆ. ಅಲ್ಲದೆ, ಬೆಂಗಳೂರು- ಮೈಸೂರು ಹೆದ್ದಾರಿ ವಾಹನ ದಟ್ಟಣೆ ಎಷ್ಟೆಂದರೆ ರಸ್ತೆಯ ಎರಡು ಭಾಗದ ತಲಾ ಮೂರು ಪಥದ ರಸ್ತೆಗಳಲ್ಲೂ ವಾಹನಗಳ ಸಂಚಾರ ಹೆಚ್ಚಿದೆ. ಅದ ರಲ್ಲೂ ಮೈಸೂರಿನಿಂದ ಬೆಂಗಳೂರಿಗೆ ತೆರಳುವ ಹೆದ್ದಾರಿಯಲ್ಲಿ ವಾರದ ದಿನಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ.

ನಗರದ ಹೆದ್ದಾರಿ ಖಾಲಿ: ಬೈಪಾಸ್‌ ಸಂಚಾರಕ್ಕೆ ಮುಕ್ತಗೊಂಡಿದ್ದರಿಂದ ನಗರದ ಹೆದ್ದಾರಿ ಸಂಪೂರ್ಣ ಖಾಲಿ ಖಾಲಿಯಾಗಿದೆ. ವಾಹನಗಳು ಬೈಪಾಸ್‌ನಲ್ಲಿ ಸಂಚರಿಸುತ್ತಿರುವುದರಿಂದ ವಾರದ ರಜಾ ದಿನಗಳು ಸೇರಿದಂತೆ ಸಾಮಾನ್ಯ ದಿನಗಳಲ್ಲೂ ಬಂದ್‌ ವಾತಾವರಣ ನಿರ್ಮಾಣವಾಗಿದೆ. ಪ್ರತಿನಿತ್ಯ ಹೆದ್ದಾರಿ ವಾಹನಗಳಿಂದ ಕೂಡಿರುತ್ತಿತ್ತು. ಆದರೆ, ಕಳೆದ ನಾಲ್ಕು ದಿನಗಳಿಂದ ನಗರದ ರಸ್ತೆಗಳು ವಾಹನಗಳಿಲ್ಲದೆ ಬಿಕೋ ಎನ್ನುತ್ತಿವೆ.

ಪ್ರಯಾಣಿಕರಿಗೆ ತೊಂದರೆ: ಮೊದಲು ಸಾರಿಗೆ ಇಲಾಖೆ ತಡೆರಹಿತ ಬಸ್‌ಗಳಾದ ಐರಾವತ, ರಾಜ ಹಂಸ ಬಸ್‌ಗಳು ನಗರದಲ್ಲಿಯೇ ಸಂಚರಿಸುತ್ತಿ ದ್ದವು. ಇದರಿಂದ ಇಲ್ಲಿನ ಪ್ರಯಾಣಿಕರಿಗೆ ಅನು ಕೂಲವಾಗುತ್ತಿತ್ತು. ತಡೆರಹಿತ ಇದ್ದರೂ ಕೆಲವು ಬಸ್‌ ಗಳು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದವು. ಆದರೆ, ಈಗ ಕೇವಲ ಸಾರಿಗೆ ಇಲಾಖೆಯ ಕೆಂಪು ಬಸ್‌ಗಳು, ಖಾಸಗಿ ಬಸ್‌ಗಳು ಮಾತ್ರ ಸಂಚರಿಸು ತ್ತಿವೆ. ಬೆಂಗಳೂರು, ಮೈಸೂರು, ಮಡಿಕೇರಿ, ಚಾಮರಾಜನಗರ ಹೋಗುವ ಬಸ್‌ಗಳು ಮಾತ್ರ ನಗರಕ್ಕೆ ಆಗಮಿಸುತ್ತಿವೆ. ಶೇ.70ರಷ್ಟು ವಾಹನಗಳು ಬೈಪಾಸ್‌ನಲ್ಲಿಯೇ ಸಂಚರಿಸುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ.

ಆರ್ಥಿಕ ಹೊಡೆತ: ಬೈಪಾಸ್‌ ರಸ್ತೆ ಸಂಚಾರ ಮುಕ್ತ ಗೊಂಡಿದ್ದರಿಂದ ನಗರದ ಆರ್ಥಿಕ ಚಟುವಟಿಕೆಗಳ ಮೇಲೆ ಹೊಡೆತ ಬಿದ್ದಿದೆ. ಪೆಟ್ರೋಲ್‌ ಬಂಕ್‌ಗಳು, ಹೋಟೆಲ್‌ಗ‌ಳು, ಬೀದಿಬದಿ ವ್ಯಾಪಾರಸ್ಥರು, ವಾಣಿಜ್ಯ ಮಳಿಗೆಗಳು, ಮದ್ಯದಂಗಡಿಗಳು ನಷ್ಟ ಅನುಭವಿಸುವಂತಾಗಿದೆ.

Advertisement

ಬೆಂಗಳೂರು- ಮೈಸೂರು ಸಂಚರಿಸುತ್ತಿದ್ದ ಪ್ರಯಾಣಿಕರು, ಪ್ರವಾ ಸಿಗರು ಮಂಡ್ಯ ನಗರಕ್ಕೆ ಭೇಟಿ ನೀಡಿ ನಂತರ ಪ್ರಯಾಣಿಸುತ್ತಿದ್ದರು. ಸೊಪ್ಪು, ತರಕಾರಿ ಮಾರುವ ರೈತರು ಕಂಗಾಲಾಗುವಂತೆ ಮಾಡಿದೆ. ಅಲ್ಲದೆ, ರಾತ್ರಿ ವೇಳೆ ಬೀದಿಬದಿ ಹೋಟೆಲ್‌ನವರು ವ್ಯಾಪಾರ ಮಾಡಿಕೊಂಡು ಜೀವನ ಕಂಡುಕೊಂಡಿದ್ದರು. ರಾತ್ರಿ ವೇಳೆ ಸಂಚರಿಸುವವರು ಇಲ್ಲಿಯೇ ತಿಂಡಿ ತಿಂದು, ಪಾರ್ಸೆಲ್‌ ತೆಗೆದುಕೊಂಡು ಹೋಗುತ್ತಿದ್ದರು. ಆದರೆ, ಇಂದು ಅವರು ಬೀದಿಗೆ ಬೀಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next