Advertisement

ಚಾರ್ಮಾಡಿ ಘಾಟ್ ನಲ್ಲಿ ರಸ್ತೆ ಮಧ್ಯೆಯೇ ಪ್ರವಾಸಿಗರ ಸೆಲ್ಪಿ : ವಾಹನ ಸವಾರಿಗೆ ತೊಂದರೆ

09:00 PM Jun 26, 2022 | Team Udayavani |

ಕೊಟ್ಟಿಗೆಹಾರ: ಚಾರ್ಮಾಡಿ ಘಾಟ್ ಮೂಲಕ ವಿಲ್ಲುಪುರಂ ಮಂಗಳೂರು ರಾಷ್ಟ್ರೀಯ ಹೆದ್ದಾರಿ‌ ಹಾದು ಹೋಗಿದ್ದು ಪ್ರವಾಸಿಗರು ರಸ್ತೆ ಮಧ್ಯೆ ನಿಂತು ಸೆಲ್ಫಿ ಪೋಟೊ ತೆಗೆಯುತ್ತಿರುವುದು ಮಾಮೂಲಾಗಿದ್ದು ವಾಹನ ಸವಾರರಿಗೆ ತೊಂದರೆಯಾಗಿದೆ.

Advertisement

ರಸ್ತೆ ಮಧ್ಯೆಯೆ ಟಿಕ್ ಟಾಕ್ ವೀಡಿಯೋ, ಸೆಲ್ಪಿ ತೆಗೆಯುವ ಪ್ರವಾಸಿಗರಿಂದಾಗಿ ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗಿ ವಾಹನಗಳು ಸಾಲುಗಟ್ಟಿ ಕೊಂಡು ಸಾಗುವಂತಾಗಿದೆ.

ಕೆಲ ಪ್ರವಾಸಿಗರು ರಸ್ತೆಯ ಮೇಲೆಯೇ ವಾಹನ ನಿಲ್ಲಿಸಿ ಜೋರಾಗಿ ಹಾಡು ಹಾಕಿಕೊಂಡು ನೃತ್ಯ ಮಾಡುತ್ತಿದ್ದು ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

ಚಾರ್ಮಾಡಿ ಘಾಟ್ ಮಾರ್ಗವಾಗಿ ಪೊಲೀಸ್ ಗಸ್ತುವಾಹನ ಸಂಚರಿಸುತ್ತಿದ್ದರೂ‌ ಕೂಡ ಪ್ರವಾಸಿಗರ ಪೋಟೊ ಕ್ರೇಜ್ ಗೆ ಕಡಿವಾಣ ಇಲ್ಲದಂತಾಗಿದೆ. ಪೋಟೊ ತೆಗೆಯುವುದನ್ನು ನಿಷೇಧಿಸಿ ಸೂಚನಾ ಫಲಕ ಅಳವಡಿಸಿದ್ದರೂ ಕೂಡ ರಸ್ತೆಯಲ್ಲಿ ನಿಂತು ಪೋಟೊ ತೆಗೆಯುವುದು ಮುಂದುವರಿದಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next