Advertisement

ಆಮ್ರಕಲ್ಲು-ಸೂರ್ಗೋಳಿ ರಸ್ತೆ ಜರ್ಜರಿತ: ಸಂಚಾರ ದುಸ್ತರ

11:30 AM Jul 26, 2022 | Team Udayavani |

ಗೋಳಿಯಂಗಡಿ: ಆಮ್ರಕಲ್ಲು – ಸೂರ್ಗೋಳಿ ಕ್ರಾಸ್‌ ರಸ್ತೆ ಹಾಗೂ ಬೆಳ್ವೆಯಿಂದ ಸೂರ್ಗೋಳಿಗೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ ಬಹಳಷ್ಟು ಹೊಂಡಗಳು ಉಂಟಾಗಿದ್ದು ಸಂಚಾರ ದುಸ್ತರಗೊಂಡಿದೆ. ಒಟ್ಟು 6 ಕಿ.ಮೀ. ದೂರದವರೆಗೆ ವಾಹನ ಸವಾರರು ಪರದಾಡುವಂತಾಗಿದೆ.

Advertisement

ಬೆಳ್ವೆ, ಹಿಲಿಯಾಣ, ನಾಲ್ಕೂರು ಈ 3 ಗ್ರಾಮಗಳನ್ನು ಬೆಸೆಯುವ ಆಮ್ರಕಲ್ಲು – ಸೂರ್ಗೋಳಿ 4 ಕಿ.ಮೀ. ದೂರದ ರಸ್ತೆಯಲ್ಲಿ ಅಲ್ಲಲ್ಲಿ ಬೃಹತ್‌ ಹೊಂಡ ಬಿದ್ದಿದ್ದು, ಈ ರಸ್ತೆಯಲ್ಲಿ ಸಂಚಾರ ಪ್ರಯಾಸ ತರುವಂತಿದೆ. ಬೇರೆ ಬೇರೆ ಕಡೆಗಳಿಗೆ ಸಂಚರಿಸಲು ಹಲವರು ಇದೇ ಮಾರ್ಗ ಆಶ್ರಯಿಸಿದ್ದಾರೆ.

ಬೆಳ್ವೆ – ಸೂರ್ಗೋಳಿ ರಸ್ತೆ

ಈ ಆಮ್ರಕಲ್ಲು – ಸೂರ್ಗೋಳಿ ರಸ್ತೆ ಸಂಪರ್ಕಿಸುವ ಬೆಳ್ವೆಯಿಂದ ಸೂರ್ಗೋಳಿ ಕಡೆಗೆ ತೆರಳುವ ಸುಮಾರು 2 ಕಿ.ಮೀ. ದೂರದ ರಸ್ತೆಯು ಸಂಪೂರ್ಣ ಹೊಂಡಮಯವಾಗಿದೆ.

ಈ ಮಾರ್ಗದಲ್ಲಿ ನಿತ್ಯ ನೂರಾರು ಮಂದಿ ಸಂಚರಿಸುತ್ತಾರೆ. ಆಮ್ರಕಲ್ಲು – ಸೂರ್ಗೋಳಿ ರಸ್ತೆಯು ಆಮ್ರಕಲ್ಲು, ತಾರಿಕಟ್ಟೆ ಹಾಗೂ ಸೂರ್ಗೋಳಿ ಭಾಗದ ಜನರಿಗೆ ಬೇರೆ ಬೇರೆ ಕಡೆಗಳಿಗೆ ಸಂಚರಿಸಲು ಮುಖ್ಯ ರಸ್ತೆಯಾಗಿದೆ. ಇನ್ನು ಬೆಳ್ವೆ – ಸೂರ್ಗೋಳಿ ಹಾಗೂ ಸೂರ್ಗೋಳಿ – ಆಮ್ರಕಲ್ಲು ರಸ್ತೆಯು ಬೆಳ್ವೆ, ಆರ್ಡಿ- ಅಲಾºಡಿ, ಮಡಾಮಕ್ಕಿ, ಮಾಂಡಿ ಮೂರುಕೈ ಭಾಗದ ಜನರಿಗೆ ಮಂದಾರ್ತಿ ದೇವಸ್ಥಾನಕ್ಕೆ ತೆರಳಲು ಹತ್ತಿರದ ಮಾರ್ಗವಾಗಿದೆ. ಬೆಳ್ವೆಯಿಂದ ಮಂದಾರ್ತಿಗೆ ಬೇರೆ ರಸ್ತೆಯಿದ್ದರೂ ಈ ಮಾರ್ಗವಾಗಿ ಸುಮಾರು 2 ಕಿ.ಮೀ.ನಷ್ಟು ಹತ್ತಿರವಾಗಲಿದೆ.

Advertisement

ದಶಕದ ಹಿಂದೆ ಡಾಮರು

ಈ ಮಾರ್ಗಕ್ಕೆ ಶಾಸಕರ ಮುತು ವರ್ಜಿಯಲ್ಲಿ 10 ವರ್ಷಗಳಿಗೂ ಹಿಂದೆ ಡಾಮರು ಆಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಈ ಮಾರ್ಗದ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಕೆಲವೊಮ್ಮೆ ಹೊಂಡಗಳಿಗೆ ತೇಪೆ ಹಾಕುವ ಕಾರ್ಯ ಆಗಿದ್ದು, ಬಿಟ್ಟರೆ, ರಸ್ತೆ ಮರು ಡಾಮರು ಕಾಮಗಾರಿ ಈವರೆಗೆ ನಡೆದಿಲ್ಲ. ಕಳೆದ ಬಾರಿಯೂ ತೇಪೆ ಹಾಕದೇ, ಈಗ ಸಂಚರಿಸಲು ಸಾಧ್ಯವಿಲ್ಲದಷ್ಟು ಹೊಂಡ ಬಿದ್ದಿದೆ.

ಅಭಿವೃದ್ಧಿಗೆ ಬೇಡಿಕೆ

ಆಮ್ರಕಲ್ಲು – ತಾರಿಕಟ್ಟೆ- ಸೂರ್ಗೋಳಿ ಕ್ರಾಸ್‌ ರಸ್ತೆ ಹಾಗೂ ಬೆಳ್ವೆ – ಸೂಗೋಳಿ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯ ಅಲ್ಲಲ್ಲಿ ದೊಡ್ಡ ಹೊಂಡ ಬಿದ್ದಿರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಯೂ ಇದೆ. ಶೀಘ್ರ ಈ ರಸ್ತೆಯ ಮರು ಡಾಮರು ಕಾಮಗಾರಿ ಆಗಲಿ ಎಂದು ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.

50 ಲ.ರೂ. ಅನುದಾನ: ಬೆಳ್ವೆ – ಸೂರ್ಗೋಳಿ ರಸ್ತೆಯ ಅಭಿವೃದ್ಧಿಗೆ ಕುಂದಾಪುರ ಶಾಸಕರ ಮುತುವರ್ಜಿಯಲ್ಲಿ 50 ಲಕ್ಷ ರೂ. ಮಂಜೂರಾಗಿದ್ದು, ಟೆಂಡರ್‌ ಪ್ರಕ್ರಿಯೆಯಲ್ಲಿದೆ. ಇನ್ನು ಆಮ್ರಕಲ್ಲು – ಸೂರ್ಗೋಳಿ ರಸ್ತೆಯು ಕುಂದಾಪುರ ಹಾಗೂ ಉಡುಪಿ ಎರಡು ಕ್ಷೇತ್ರಗಳ ವ್ಯಾಪ್ತಿಯಾಗಿದ್ದು, ಇಬ್ಬರು ಶಾಸಕರಿಗೂ ಮನವಿ ಸಲ್ಲಿಸಿದ್ದೇವೆ. 3-4 ಕಿ.ಮೀ. ಆಗಿರುವುದರಿಂದ ದೊಡ್ಡ ಅನುದಾನದ ಅಗತ್ಯವಿದೆ. – ಸೂರ್ಗೋಳಿ ಚಂದ್ರಶೇಖರ ಶೆಟ್ಟಿ, ಬೆಳ್ವೆ ಗ್ರಾ.ಪಂ. ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next