ಮಂಗಳೂರು : ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಇ-ಚಲನ್ ಮೂಲಕ ವಿಧಿಸಿದ ದಂಡವನ್ನು ಫೆ. 11ರೊಳಗೆ ಪಾವತಿಸಿ ಇತ್ಯರ್ಥ ಪಡಿಸಿಕೊಳ್ಳುವವರಿಗೆ ಸಾರಿಗೆ ಇಲಾಖೆ ಶೇ. 50ರಷ್ಟು ರಿಯಾಯಿತಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ವಾಹನ ಸವಾರರು/ಚಾಲಕರು ದಂಡ ಪಾವತಿಸಲು ಮುಂದಾಗಿದ್ದಾರೆ.
Advertisement
ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಶನಿವಾರ ಮತ್ತು ರವಿವಾರ ಒಟ್ಟು 5.25 ಲ.ರೂ. ದಂಡ ಪಾವತಿಯಾಗಿದೆ. ರವಿವಾರ ಒಟ್ಟು 513 ಪ್ರಕರಣಗಳಲ್ಲಿ 1,42,850 ರೂ. ದಂಡ ಪಾವತಿಯಾಗಿದೆ. ಶನಿವಾರದಂದು 1,522 ಪ್ರಕರಣಗಳಲ್ಲಿ 3.83 ಲ.ರೂ. ದಂಡ ಪಾವತಿಯಾಗಿತ್ತು.