Advertisement

ಜೀವ ಉಳಿವಿಗೆ ಟ್ರಾಫಿಕ್‌ ಶಿಕ್ಷಣ ಅವಶ್ಯ; ಲಕ್ಷ್ಮಣ್‌ ನಾಯಕ್‌

05:22 PM Jul 01, 2022 | Team Udayavani |

ದೇವನಹಳ್ಳಿ: ಜೀವ ಉಳಿವಿಗೆ ಟ್ರಾಫಿಕ್‌ ಶಿಕ್ಷಣ ಅವಶ್ಯಯವಾಗಿದ್ದು, ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸಿದರೆ ಸುರಕ್ಷಿತ ಪ್ರಯಾಣ ಸಾಧ್ಯ ಎಂದು ದೇವನಹಳ್ಳಿ ಸಂಚಾರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಲಕ್ಷ್ಮಣ್‌ ನಾಯಕ್‌ ತಿಳಿಸಿದರು.

Advertisement

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸೆಮಿನಾರ್‌ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಯುವಕರಲ್ಲಿ ಸಂಚಾರ ನಿಯಮ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 18ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರು ವಾಹನ ಚಾಲನೆ ಮಾಡುವುದು, ರಸ್ತೆಯಲ್ಲಿ  ಉದ್ದೇಶಪೂರ್ವಕವಾಗಿ ಅಪಘಾತ ಮಾಡುವುದು ಶಿಕ್ಷಾರ್ಹ ಅಪರಾಧ, ಇದರಿಂದ ಭವಿಷ್ಯದಲ್ಲಿ ಯಾವುದೇ ಸರ್ಕಾರಿ ಉದ್ಯೋಗ ಸೇರಿದಂತೆ ಜೀವನದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ ಎಂದು ಎಚ್ಚರಿಕೆ ನೀಡಿದರು.

ಮೊಬೈಲ್‌ ಬಳಕೆ ಬೇಡ: ಹೆದ್ದಾರಿಯಲ್ಲಿ ದೊಡ್ಡ ಲಾರಿಗಳ ಹಿಂದೆ ಮುಂದೆ ಸಾಗುವಾಗ ಎಚ್ಚರಿಕೆಯಿಂದ ಇರಬೇಕು. ಪ್ರತಿ ವಾಹನಕ್ಕೂ ಕನಿಷ್ಠ ಅಂತರದಲ್ಲಿ ಚಾಲನೆ ಮಾಡಿದಾಗ ಸಾಕಷ್ಟು ಅಪಘಾತಗಳನ್ನು ತಡೆಯಬಹುದು. ನಗರ ಜೀವನ ಶೈಲಿಯಲ್ಲಿ ವಾಹನ ಸಂಖ್ಯೆಗಳು ಹೆಚ್ಚಾಗುತ್ತದೆ. ಅದಕ್ಕೆ ತಕ್ಕಂತೆ ರಸ್ತೆ ಸಂಚಾರ ನಿಯಮಗಳು ಕುರಿತು ಅರಿವು ಕ್ಷೀಣಿಸುತ್ತಿರುವುದು ವಿಷಾದಕರ ಸಂಗತಿ. ಬೈಕ್‌ ವೀಲಿಂಗ್‌, ಕಾರು ಚಾಲನೆ ವೇಳೆ ಮೊಬೈಲ್‌ ಬಳಕೆಯಿಂದ ಸಾಕಷ್ಟು ಅಪಘಾತಗಳು ಘಟಿಸುತ್ತಿವೆ ಎಂದರು.

ಜಾಗೃತಿ ಮೂಡಿಸಿ: ಸಬ್‌ಇನ್ಸ್‌ಪೆಕ್ಟರ್‌ ಹರೀಶ್‌ ಮಾತನಾಡಿ, ಯುವಕರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ ಬೈಕ್‌ ಚಾಲನೆ ಮಾಡಬೇಕು. ನಿಮ್ಮ ನೆರೆಹೊರೆಯವರಿಗೂ ಜಾಗೃತಿ ಮೂಡಿಸುವಲ್ಲಿ ಭಾಗಿಯಾಗಿ ಪಾದಚಾರಿಗಳಿಗೆ ರಸ್ತೆ ದಾಟಲು ಅವಕಾಶ ಕಲ್ಪಿಸಿ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ ಎಂದು ಮನವಿ ಮಾಡಿದರು.

ಡ್ಡಾಯವಾಗಿ ಹೆಲ್ಮೆಟ್‌ ಧರಿಸಿ: ದೇವನಹಳ್ಳಿ ಜೇಸಿಐ ಅಧ್ಯಕ್ಷ ವೈ.ಪಿ. ಪ್ರವೀಣ್‌ ಕುಮಾರ್‌ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ಸಂಚಾರ ನಿಯಮಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಮತ್ತೂಬ್ಬರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕು. ಪ್ರತಿಯೊಬ್ಬರೂ ವಾಹನ ಓಡಿಸುವಾಗ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು.

Advertisement

ಯುವಕ ಯುವತಿಯರಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಆಗಬೇಕು ಎಂದು ಹೇಳಿದರು. ಕಿರುಪುಸ್ತಕ ವಿತರಣೆ: ವಿದ್ಯಾರ್ಥಿಗಳಿಗೆ ಟ್ರಾದ್ದಾಕ್‌ ನಿಯಮಗಳ ಕಿರುಪುಸ್ತಕ ವಿತರಣೆ ಮಾಡಲಾಯಿತು. ಸಂಚಾರ ಠಾಣೆಯ ಸಿಬ್ಬಂದಿ ಪೂಜಾರ, ಪ್ರಾಂಶುಪಾಲ ಶಿವಶಂಕರ್‌ ಕೆ.ಎಸ್‌, ನಿಕಟಪೂರ್ವ ಅಧ್ಯಕ್ಷ ಆನಂದ್‌.ಎಸ್‌.ವಿ, ಕಾರ್ಯದರ್ಶಿ ವಾಸುದೇವ್‌, ಉಪಾಧ್ಯಕ್ಷ ವೇಣುಗೋಪಾಲ್ ,ಯೋಜನಾ ನಿರ್ದೇಶಕ ಗೋಪಾಲ್ , ಸದಸ್ಯರಾದ ಗಿರೀಶ್‌, ಎಚ್‌. ಪಿ.ಪ್ರಕಾಶ್ , ಮಂಜುನಾಥ್‌, ಎಸ್‌.ವಿ.ಅರವಿಂದ್‌, ಬಾಬು ಹಾಗೂ ವಿದ್ಯಾರ್ಥಿಗಳು ಇದ್ದರು.

ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸಿ: ಲಕ್ಷ್ಮಣ್‌ ನಾಯಕ್‌ ಸಂಚಾರ ಕಾನೂನುಗಳು ಕ್ರಿಮಿನಲ್‌ ಕಾನೂನುಗಳಷ್ಟೇ ಬಲಿಷ್ಠವಾಗಿದೆ. ಸಂಚಾರ ಕಾನೂನುಗಳ ಉಲ್ಲಂಘನೆ ಶಿಕ್ಷಾರ್ಹ ಅಪರಾಧ. ವಾಹನಗಳನ್ನು ಸಂಚಾರ ಮಾಡುವಾಗ ಅನಾಹುತ ಸಂಭವಿಸದಂತೆ ವಹಿಸುವ ಮುನ್ನೆಚ್ಚರಿಕೆ ಕ್ರಮಗಳು ನಿಯಮಗಳಾಗಿವೆ. ಪ್ರತಿಯೊಬ್ಬರೂ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಪಘಾತಗಳು ನಡೆಯದಂತೆ ಸಂಚಾರ ನಡೆಸಿ ಜನರ ಜೀವಗಳನ್ನು ಉಳಿಸಬೇಕು ಎಂದು ದೇವನಹಳ್ಳಿ ಸಂಚಾರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಲಕ್ಷ್ಮಣ್‌ ನಾಯಕ್‌ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next