Advertisement
ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬರುವ ಅಭಿಯಾನದ ರೂವಾರಿಯೂ ಆಗಿರುವ ಕಮಿಂಗ್ಸ್ ಅವರು ಕಳೆದ ಮಾರ್ಚ್‌ನಲ್ಲಿ ಡುರ್ಹಾಮ್ ಹಾಗೂ ಉತ್ತರ ಇಂಗ್ಲಂಡ್ ನಡುವೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಲಾಕ್ ಡೌನ್‌ನ ಕಠಿನ ನಿಯಮಾವಳಿಗಳು ಜಾರಿಯಲ್ಲಿದ್ದವು. ಔಷಧ ಹಾಗೂ ಆಹಾರದಂತಹ ಅಗತ್ಯ ವಸ್ತುಗಳ ಪೂರೈಕೆಯ ಉದ್ದೇಶವಿಲ್ಲದಿದ್ದರೆ ಜನರು ಕುಟುಂಬಸ್ಥರ ಭೇಟಿಗೆ ತೆರಳದೆ ಮನೆಗಳಲ್ಲೇ ಇರುವಂತೆ ನಿರ್ದೇಶನ ನೀಡಲಾಗಿತ್ತು. ಆದರೆ, ಕಾಯಿಲೆ ಬಿದ್ದಿರುವ ಮಗುವನ್ನು ನೋಡಿಕೊಳ್ಳಲು ಹೆತ್ತವರ ಸಹಾಯ ಪಡೆಯುವುದಕ್ಕಾಗಿ ಅವರು ಪ್ರಯಾಣಿಸಿದ್ದರೆಂದು ನಿಕಟವರ್ತಿಗಳು ತಿಳಿಸಿದ್ದಾರೆ.
ಈ ನಡುವೆ, ಕಮಿಂಗ್ಸ್ ಯಾವುದೇ ಲಾಕ್‌ಡೌನ್ ನಿಯಮಗಳನ್ನು ಮುರಿದಿಲ್ಲ ಎಂದು ಡೌನಿಂಗ್ ಸ್ಟ್ರೀಟ್ ಸ್ಪಷ್ಟಪಡಿಸಿದೆ.ಕಮಿಂಗ್ಸ್ ಅವರ ಪತ್ನಿ ಕೋವಿಡ್ ಪೀಡಿತರಾಗಿದ್ದರು. ಸ್ವತಃ ಅವರಿಗೂ ಕೋವಿಡ್ ಸೋಂಕು ತಗಲುವ ಅಪಾಯವಿತ್ತು. ಮಗುವಿಗೆ ಸೂಕ್ತ ಉಪಚಾರ ಲಭಿಸಲೆಂಬ ಉದ್ದೇಶದಿಂದ ಅವರು ತಮ್ಮ ಹೆತ್ತವರ ಬಳಿಗೆ ಬಿಟ್ಟು ಬರಲು ತೆರಳಿದ್ದರು ಎಂದು ತಿಳಿಸಲಾಗಿದೆ. ಕಮಿಂಗ್ಸ್ ಅವರು ಕಾನೂನುಬದ್ಧವಾಗಿ ಹಾಗೂ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ. ಅವರ ಪದತ್ಯಾಗದ ಪ್ರಶ್ನೆಯೇ ಇಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.
Related Articles
Advertisement