Advertisement
ಆದರೆ ಸಿಗ್ನಲ್ ಇದ್ದರೆ ಒಂದೆರಡು ನಿಮಿಷ ನಿಂತು ನಂತರ ಮುಂದೆ ಸಾಗಬಹುದು. ಆದರೆ ಸಿಗ್ನಲ್ ಇಲ್ಲದೆ, ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಜಾಮ್ ಆದರೆ ಗಂಟೆಗಟ್ಟಲೆ ಕಾಯಬೇಕು. ಹೀಗಾಗಿ ಟ್ರಾಫಿಕ್ ಸಿಗ್ನಲ್ ಇದ್ದರೆ ಉತ್ತಮ ಎಂದು ಬಹುತೇಕ ಚಾಲಕರು ಅಭಿಪ್ರಾಯಪಟಡುತ್ತಾರೆ. ಈ ವಿಷಯದ ಪ್ರಸ್ತಾಪ ಈಗೇಕೆ ಎಂದರೆ, ಲಾಲ್‌ಬಾಗ್ ಎರಡನೇ ದ್ವಾರದ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ “ಟ್ರಾಫಿಕ್ ಸಿಗ್ನಲ್’ ಇಲ್ಲದ ಕಾರಣ ವಾಹನ ಸವಾರರು ಪ್ರತಿ ನಿತ್ಯ ಪರದಾಡುತ್ತಿದ್ದಾರೆ.
Related Articles
Advertisement
ಜತೆಗೆ ಲಾಲ್‌ಬಾಗ್‌ಗೆ ಬರುವ ಪ್ರವಾಸಿಗರ ವಾಹನಗಳ ನಿಲುಗಡೆ ತಾಣದ ಮುಖ್ಯ ದ್ವಾರವೂ ಇಲ್ಲೇ ಇದ್ದು, ಆ ವಾಹನಗಳು ಪ್ರವೇಶ ಟಿಕೆಟ್ ಪಡೆದು ಉದ್ಯಾನವನ ಪ್ರವೇಶಿಸುವವರಗೂ ಇತರ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ.
ರೋಟರಿ ವ್ಯವಸ್ಥೆ: ಈ ವೃತ್ತದಲ್ಲಿ ವಾಹನ ದಟ್ಟಣೆ ಉಂಟಾದಾಗ ಸಾರ್ವಜನಿಕರೇ ಕೆಲವೊಮ್ಮೆ ಸಂಚಾರ ಪೊಲೀಸರ ಕೆಲಸ ನಿರ್ವಹಿಸುತ್ತಾರೆ. ಪೊಲೀಸರು ವಾರದಲ್ಲಿ ಮೂರ್‍ನಾಲ್ಕು ಬಾರಿ ಇದೇ ವೃತ್ತದಲ್ಲಿ ವಾಹನಗಳ ತಪಾಸಣೆ ಮಾಡುತ್ತಾರೆ. ಆದರೆ, ಟ್ರಾಫಿಕ್ ಸಿಗ್ನಲ್ ಇಲ್ಲದ ಬಗ್ಗೆ ಮಾತ್ರ ತಲೆಕಡಿಸಿಕೊಂಡಿಲ್ಲ. ವೃತ್ತದ ತಿರುವಿನಲ್ಲಿ ವಾಹನಗಳು ವೇಗವಾಗಿ ಸಂಚರಿಸುವುದರಿಂದ ಚಿಕ್ಕಪುಟ್ಟ ಅಪಘಾತಗಳೂ ಸಂಭವಿಸುತ್ತಿವೆ. ದಿನದ ಯಾವುದೇ ಅವಧಿಯಲ್ಲೂ ಇಲ್ಲಿ ಟ್ರಾಫಿಕ್ ಜಾಮ್ ಆಗುವುದು ಮಾಮೂಲು ಎಂದು ಆಟೋ ಚಾಲಕರು ದೂರುತ್ತಾರೆ.
ನಿರಂತರವಾಗಿ ವಾಹನಗಳು ಸಂಚರಿಸುವುದರಿಂದ ರಸ್ತೆ ದಾಟಲು ಭಯವಾಗುತ್ತದೆ. ಅನೇಕ ಬಾರಿ ವಾಹನಗಳು ಡಿಕ್ಕಿಗಾಗಿ ಅಪಘಾತಗಳು ಸಂಭವಿಸುತ್ತಿವೆ. ವಾಹನ ದಟ್ಟಣೆ ನಿವಾರಣೆಗೆ ಸಂಚಾರ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು.-ಸೋಮಶೇಖರ್, ಲಾಲ್‌ಬಾಗ್ ವಾಯುವಿಹಾರಿ ಎರಡನೇ ದ್ವಾರದ ಬಳಿಯ ವೃತ್ತದಲ್ಲಿ ರೋಟರಿ ಸಂಚಾರ ವ್ಯವಸ್ಥೆಯನ್ನು ಅಳವಡಿಸಿಲಾಗಿದೆ. ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಕಾರಣ ಟ್ರಾಫಿಕ್ ಜಾಮ್ ಸಮಸ್ಯೆಯಾಗುತ್ತಿರಬಹುದು. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಅನುಪಮ್ ಅಗರ್‌ವಾಲ್, ಡಿಸಿಪಿ, ಪೂರ್ವ ಸಂಚಾರ ವಿಭಾಗ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಇಲ್ಲದೇ ವಾಹನ ದಟ್ಟಣೆ ಹೆಚ್ಚುವುದು, ಸಂಚಾರ ಸ್ಥಗಿತಗೊಳ್ಳುವ ಜತೆಗೆ ಚಿಕ್ಕಪುಟ್ಟ ಅಪಘಾತಗಳೂ ಸಂಭವಿತ್ತವೆ. ವೃತ್ತದ ಬಳಿ ಕನಿಷ್ಠ ಒಬ್ಬ ಸಂಚಾರ ಪೊಲೀಸ್ ಸಿಬ್ಬಂದಿಯನ್ನಾದರೂ ನಿಯೋಜಿಸಬೇಕು.
-ಲಾಲ್‌ಬಾಗ್ ಕಾವಲು ಸಿಬ್ಬಂದಿ * ಜಯಪ್ರಕಾಶ್ ಬಿರಾದಾರ್