Advertisement

ಭಾರತದಲ್ಲಿ ಸಾಂಪ್ರದಾಯಿಕ ಔಷಧ ಕೇಂದ್ರ

12:59 AM Nov 14, 2020 | mahesh |

ಹೊಸದಿಲ್ಲಿ: ಭಾರತದಲ್ಲಿ ಸಾಂಪ್ರದಾಯಿಕ ಔಷಧಕ್ಕೆ ಸಂಬಂಧಿಸಿದ ಜಾಗತಿಕ ಕೇಂದ್ರವನ್ನು ಸ್ಥಾಪಿಸುವುದಾಗಿ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಶುಕ್ರವಾರ ಘೋಷಿಸಿದೆ.

Advertisement

5ನೇ ಆಯುರ್ವೇದ ದಿನದ ಹಿನ್ನೆಲೆಯಲ್ಲಿ ಶುಕ್ರವಾರ ಜೈಪುರ ಮತ್ತು ಜಾಮ್‌ನಗರದಲ್ಲಿ ಎರಡು ಆಯುರ್ವೇದ ಸಂಸ್ಥೆಗಳನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಲೋಕಾರ್ಪಣೆ ಮಾಡಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಬ್ಲ್ಯುಎಚ್‌ಒ ಪ್ರಧಾನ ನಿರ್ದೇಶಕ ಟೆಡ್ರೋಸ್‌ ಅಧನಮ್‌ ಘೆಬ್ರೆಯೇಸಸ್‌ ಈ ಘೋಷಣೆ ಮಾಡಿದ್ದಾರೆ.

“ಸಾಂಪ್ರದಾಯಿಕ ಮತ್ತು ಪೂರಕ ಔಷಧಕ್ಕೆ ಸಂಬಂಧಿಸಿದ ಸಂಶೋಧನೆ, ತರಬೇತಿ ಹಾಗೂ ಜಾಗೃತಿಯ ಉದ್ದೇಶದಿಂದ ಭಾರತದಲ್ಲಿ ಸಾಂಪ್ರದಾಯಿಕ ಔಷಧ ಕುರಿತ ಜಾಗತಿಕ ಕೇಂದ್ರ ಸ್ಥಾಪಿಸಲು ನಾವು ಒಪ್ಪಿದ್ದೇವೆ. ಆಯುರ್ವೇದದಂತಹ ಸಾಂಪ್ರದಾಯಿಕ ಔಷಧವು ಜನಕೇಂದ್ರಿತ ಆರೋಗ್ಯ ಸೇವೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಇಂಥ ಔಷಧಗಳ ಬಗ್ಗೆ ಯಾರೂ ಹೆಚ್ಚಿನ ಗಮನ ಹರಿಸಿಲ್ಲ’ ಎಂದೂ ಘೆಬ್ರೆಯೇಸಸ್‌ ಹೇಳಿದ್ದಾರೆ.

ಹೆಮ್ಮೆಯ ಸಂಗತಿ: ಭಾರತದಲ್ಲಿ ಸಾಂಪ್ರದಾಯಿಕ ಔಷಧ ಕೇಂದ್ರ ಸ್ಥಾಪಿಸುವ ಕುರಿತ ವಿಶ್ವ ಆರೋಗ್ಯ ಸಂಸ್ಥೆಯ ಘೋಷಣೆಯು ಹೆಮ್ಮೆ ಮೂಡಿಸುವಂಥದ್ದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಮ್ಮ ದೇಶವು ಹೇಗೆ “ಜಗತ್ತಿನ ಫಾರ್ಮಸಿ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆಯೋ, ಅದೇ ರೀತಿ ಡಬ್ಲ್ಯುಎಚ್‌ಒ ಕೂಡ “ಜಾಗತಿಕ ಕ್ಷೇಮಾಭಿವೃದ್ಧಿ’ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next