Advertisement

ಯಾರಿಸ್‌ ಮರು ಆವೃತ್ತಿಗೆ ಮಾರುತಿ “ಸಿಯಾಝ್’ಕಾರಿನ ಕೆಲವು ಫೀಚರ್‌ ಅಳವಡಿಕೆ

08:01 AM Apr 20, 2021 | Team Udayavani |

ಹೊಸದಿಲ್ಲಿ: ಮಾರುತಿ ಸುಝುಕಿ- ಟೊಯೊಟಾ ಸಹಭಾಗಿತ್ವದ ಕಾರುಗಳು ಭಾರತೀಯ ಮಾರುಕಟ್ಟೆಗೆ ಹೊಸತೇನೂ ಅಲ್ಲ.

Advertisement

ಟೊಯೊಟಾ ಗ್ಲ್ಯಾಂಝಾ ಮತ್ತು ಟೊಯೊಟಾ ಅರ್ಬನ್‌ ಕ್ರೂಸರ್‌ ಗಳು ಈ ಹಿಂದೆ ಬಂದಿದ್ದವು. ಪ್ರಸ್ತುತ ಟೊಯೊಟಾ ಸಂಸ್ಥೆ ಭಾರತದಲ್ಲಿ ತನ್ನ “ಯಾರಿಸ್‌’ ಕಾರಿನ ಉತ್ಪಾದನೆ ಸ್ಥಗಿತಗೊಳಿಸಲು ನಿರ್ಧರಿಸಿದೆ. ಅಲ್ಲದೆ, “ಯಾರಿಸ್‌’ ಗೆ ಮಾರುತಿ ಸುಝುಕಿಯ “ಸಿಯಾಝ್’ ಕಾರಿನ ಕೆಲವು ಫೀಚರ್‌ ಅಳವಡಿಸಿ, ಮರು ಅವತರಣಿಕೆಯಲ್ಲಿ ಬಿಡಲು ಟೊಯೊಟಾ ನಿರ್ಧರಿಸಿದೆ. 1.5 ಲೀ. ಮೈಲ್ಡ್‌- ಹೈಬ್ರಿಡ್‌ ಪೆಟ್ರೋಲ್‌ ಎಂಜಿನ್‌, ಗೇರ್‌ಬಾಕ್ಸ್‌ನಲ್ಲಿನ ಬದಲಾವಣೆ ಸೇರಿದಂತೆ ಕೆಲವು ಸಣ್ಣಪುಟ್ಟ ಮಾರ್ಪಾಡುಗಳನ್ನು ಈ ಸೆಡಾನ್‌ ಕಾಣಲಿದೆ.

ಅಲ್ಲದೆ, ಹೊಸ ಹೆಸರಿನೊಂದಿಗೆ ಮರಳಿ ಮಾರುಕಟ್ಟೆ ಪ್ರವೇಶಿಸಲಿದೆ. 9.16- 14.60 ಲಕ್ಷ ರೂ. ನಡುವೆ ಇದ್ದ ಯಾರಿಸ್‌, 2018ರ ಮೇ ತಿಂಗಳಿನಲ್ಲಿ ಭಾರತದ ಮಾರುಕಟ್ಟೆಗಿಳಿದಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next