Advertisement

ಛತ್ರಿ ಹಿಡಿದು ಟೊಯೋಟಾ ಕಾರ್ಮಿಕರ ಧರಣಿ

02:46 PM Dec 12, 2020 | Suhan S |

ರಾಮನಗರ: ತಾಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿಯ (ಟಿಕೆಎಂ) ಕಾರ್ಮಿಕರ ಮುಷ್ಕರ ಮುಂದುವರಿದಿದೆ. ಮುಷ್ಕರ ಸ್ಥಳದಲ್ಲಿ ಹಾಕಿದ್ದ ಪೆಂಡಾಲ್‌ ಆಡಳಿತ ಮಂಡಳಿಯ ಪಿತೂರಿಯಿಂದ ತೆರವಾಗಿರುವುದರಿಂದ ಛತ್ರ ಚಳವಳಿ ಆರಂಭಿಸಿರುವುದಾಗಿ ಕಾರ್ಮಿಕರು ತಿಳಿಸಿದ್ದಾರೆ.

Advertisement

ಟಿಕೆಎಂ ಮುಂಭಾಗ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದು, ಶುಕ್ರವಾರ 33ನೇ ದಿನಕ್ಕೆ ಕಾಲಿಟ್ಟಿದೆ. ಶಾಂತಿಯುತವಾಗಿ ನಡೆಸುತ್ತಿದ್ದ ಮುಷ್ಕರದ ವಿರುದ್ಧ ಟೊಯೋಟಾ ಆಡಳಿತ ಮಂಡಳಿ ಸಂಬಂಧಿಸಿದವರ ಮೇಲೆ ಒತ್ತಡ ತಂದು ಪೆಂಡಾಲ್‌ ಖಾಲಿ ಮಾಡಿಸಿದೆ. ಷಾಮಿಯಾನವನ್ನು ಕೆಲವು ಪೊಲೀಸರೇ ಲಾರಿಗೆ ತುಂಬಿದ್ದಾರೆ ಎಂದು ಮುಷ್ಕರ ನಿರತರು ದೂರಿದ್ದಾರೆ.

60 ಮಂದಿ ಅಮಾನತು ವಾಪಸ್‌: ಟೊಯೋಟಾ ಆಡಳಿತ ಮಂಡಳಿ ಒತ್ತಡ ಹೇರಿ ಪೆಂಡಾಲ್‌ ತೆರವುಗೊಳಿಸಿದೆ. ಆದರೆ ವಾಹನ ತಯಾರಿಕಾ ಸಂಸ್ಥೆ ಟೊಯೋಟಾ ಸ್ಥಾವರದಲ್ಲಿ ಕಾರ್ಮಿಕರಿಗೆ ಉತ್ಪಾದನೆಯ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ. ಶೌಚಾಲಯಕ್ಕೆ ಹೋಗಲು ಸಹ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸಲಾಗುತ್ತಿದೆ. 40 ವಯಸ್ಸು ಮುಟ್ಟುತ್ತಿದ್ದಂತೆ ಕೆಲಸದಿಂದ ತೆಗೆಯುವ ಎಲ್ಲಾ ಪ್ರಯತ್ನಗಳು ಇಲ್ಲಿ ನಡೆಯುತ್ತಿದೆ ಇದನ್ನು ಪ್ರಶ್ನಿಸಿದವರನ್ನು ಸೇವೆಯಿಂದ ಅಮಾನತ್ತಿನಲ್ಲಿರಸಲಾಗುತ್ತಿದೆ. ಹೀಗೆ 60 ಮಂದಿಯನ್ನು ಅಮಾನತ್ತಿನಲ್ಲಿರಿಸಲಾಗಿದೆ. ತಕ್ಷಣ ಇವರ ಅಮಾನತ್ತು ರದ್ದುಪಡಿಸಬೇಕು. ಅಕ್ರಮವಾಗಿ ಘೋಷಿಸಿರುವ ಲಾಕೌಟ್‌ ತೆರವುಗೊಳಿಸ ಬೇಕು. ಕಾರ್ಮಿಕರು ನೆಮ್ಮದಿಯಾಗಿ ಕೆಲಸ ಮಾಡುವ ವಾತಾವರಣ ಸೃಷ್ಠಿಸಬೇಕು ಎಂದು ಮುಷ್ಕರ ನಿರತಕಾರ್ಮಿಕರು ಒತ್ತಾಯಿಸಿದರು.

ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾ ಯಿಸಿ ಹಲವಾರು ಹೋರಾಟಗಳನ್ನುನಡಸಿರುವುದಾಗಿ, ಆದರೆ ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಪಟ್ಟಿಲ್ಲ ಎಂದು ಕಾರ್ಮಿಕರು ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next