Advertisement

ಯಾರಿಸ್‌ ಮಾರಾಟ ನಿಲ್ಲಿಸಿದ ಟೊಯೊಟೊ

07:06 PM Sep 27, 2021 | Team Udayavani |

ನವದೆಹಲಿ: ಟೊಯೊಟೊ ಸಂಸ್ಥೆಯು ಭಾರತದಲ್ಲಿ ಯಾರಿಸ್‌ ಕಾರಿನ ಉತ್ಪಾದನೆ ಮತ್ತು ಮಾರಾಟವನ್ನು ಸೆ.27ರಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.

Advertisement

ಮಾರುಕಟ್ಟೆಯಲ್ಲಿ ಈ ಕಾರಿಗೆ ನಿರೀಕ್ಷಿತ ಬೇಡಿಕೆ ಸಿಗದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಕಾರನ್ನು ಖರೀದಿಸಿರುವ ಗ್ರಾಹಕರಿಗಾಗಿ ಮುಂದಿನ 10 ವರ್ಷಗಳವರೆಗೆ ಅದರ ಬಿಡಿ ಭಾಗಗಳ ಮಾರಾಟವನ್ನು ಮುಂದುವರಿಸಲಾಗುವುದು ಎಂದು ಟೊಯೋಟ ತಿಳಿಸಿದೆ.

2018ರಲ್ಲಿ ಬಿಡುಗಡೆಗೊಂಡ ಯಾರಿಸ್‌ ಅನ್ನು 2019ರಲ್ಲಿ ಮತ್ತೂಮ್ಮೆ ಅಪ್‌ಡೇಟ್‌ ಮಾಡಲಾಗಿತ್ತು. ಟೊಯೊಟೊ ಮತ್ತು ಸುಜುಕಿ ಸಂಸ್ಥೆ ಮಾಡಿಕೊಂಡಿರುವ ಒಪ್ಪಂದದ ಅನುಸಾರ ಟೊಯೊಟೊದ ಯಾರಿಸ್‌ ಕಾರಿನ ಮಾಡೆಲ್‌ ಸುಜುಕಿ ಕೈ ಸೇರಲಿದ್ದು, ಶೀಘ್ರದಲ್ಲಿಯೇ ಬೆಲ್ಟಾ ಹೆಸರಿನಲ್ಲಿ ಬಿಡುಗಡೆ ಮಾಡುವ ಉದ್ದೇಶ ಹೊಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next