ಟೋಕಿಯೋ: ಜಪಾನ್‌ನ ಪ್ರತಿಷ್ಠಿತ ವಾಹನ ತಯಾರಕ ಸಂಸ್ಥೆ ಟೊಯೋಟಾ ಮೋಟಾರ್‌ನ ಅಧ್ಯಕ್ಷರಾಗಿ ಅಕಿಯೋ ಟೊಯೋಡಾ ನೇಮಕಗೊಂಡಿದ್ದಾರೆ. ಜತೆಗೆ ಸಿಇಒ ಸ್ಥಾನಕ್ಕೆ ಸದ್ಯ ಬ್ರ್ಯಾಂಡ್ ಆಫೀಸರ್ ಆಗಿರುವ ಕೊಜಿ ಸ್ಯಾಟೋ ಅವರನ್ನು ನೇಮಿಸಲಾಗಿದೆ. ಈ ಮೂಲಕ ಕಂಪನಿಯ ಆಡಳಿತ ಮಂಡಳಿಯನ್ನು ಏಕಾಏಕಿ ಪುನಾರಚನೆ ಮಾಡಿದೆ.
ಅಕಿಯೊ ಮತ್ತು ಕೊಜಿ ಅವರಿಗೆ ಸಂಸ್ಥೆಯ ವಾಹನಗಳ ಮೇಲಿರುವ ಪ್ರೀತಿಯನ್ನು ತೋರ್ಪಡಿಸುವ ವಿಡಿಯೋ ಒಂದನ್ನು ರಚಿಸಿ, ಅದನ್ನು ಬಿಡುಗಡೆ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಅಧಿಕಾರ ಬದಲಾವಣೆಯನ್ನು ಪ್ರಕಟಿಸಿದೆ. ಇದಕ್ಕೂ ಮೊದಲು ಸಂಸ್ಥೆಯ ಅಧ್ಯಕ್ಷಸ್ಥಾನವನ್ನು ಟಕೇಶಿ ಉಚಿಯಾಮಾಡ ವಹಿಸಿಕೊಂಡಿದ್ದರು. ಅವರು ನಿವೃತ್ತಿ ಹೊಂದಿದ ಹಿನ್ನೆಲೆ ಅಕಿಯೋ, ಸಂಸ್ಥೆಯ ಅಧ್ಯಕ್ಷಗಾದಿಯನ್ನೇರಿದ್ದಾರೆ ಎಂದು ಸಂಸ್ಥೆ ಪ್ರಕಟಿಸಿದೆ.
ಇದನ್ನೂ ಓದಿ: ಗೂಗಲ್ ಡೂಡಲ್‌ನಲ್ಲೂ ಗಣರಾಜ್ಯೋತ್ಸವ ಸಂಭ್ರಮ