Advertisement

ಕಣ್ಣಿಗೆ ಬಟ್ಟೆ ಕಟ್ಟಿ ಮಾತಾಡಿ

03:33 PM Mar 18, 2017 | |

ಮನುಷ್ಯ ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿವೆ ಎನ್ನುವ ಆಪಾದನೆ ಇಂದು ನೆನ್ನೆಯದಲ್ಲ. ದಿನ ಕಳೆದಂತೆ ಮನುಷ್ಯ ಪ್ರಕೃತಿ ಸೇರಿದಂತೆ ಸುತ್ತಮುತ್ತಲಿನವರಿಂದ ದೂರವಾಗಿ ದ್ವೀಪವಾಗುತ್ತಿದ್ದಾನೆ ಎನ್ನುವೂ ಕೂಡ ಹಳೆಯ ಆಪಾದನೆಯೇ. ಕಣ್ಣೋಟದಿಂದ ಎಲ್ಲವನ್ನೂ ಎಲ್ಲರನ್ನೂ ಅಳೆಯುವ ಪ್ರವೃತ್ತಿ ಎಲ್ಲರಲ್ಲೂ ಇದೆ. ಅದೇ ಕಣ್ಣಿಗೆ ಬಟ್ಟೆ ಕಟ್ಟಿದರೆ? ಈ ರೀತಿಯ ಕಾರ್ಯಕ್ರಮವೊಂದನ್ನು ಇಂಕ್‌ ವೀವರ್‌ ಸಂಸ್ಥೆ ನಡೆಸುತ್ತದೆ. ಹೆಸರು ಬ್ಲೆ„ಂಡ್‌ ಫೋಲ್ಡೆಡ್‌ ಕನ್‌ವರ್ಶೇಷನ್ಸ್‌ ಅಂಡರ್‌ ದಿ ಟ್ರೀಸ್‌, ಅಂದರೆ ಮರದ ಕೆಳಗಡೆ ಕಣ್ಣಿಗೆ ಬಟ್ಟೆ ಕಟ್ಟಿ ಮಾತಾಡುವುದು. ಜಾನೆಟ್‌ ಆರ್ಲೀನ್‌ ಇದರ ಸಂಚಾಲಕಿ. ಈ ಕಾರ್ಯಕ್ರಮ ಇತ್ತಿಚಿಗಷ್ಟೆ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸುವ ಇಚ್ಛೆಯುಳ್ಳವರು ಒಂದು ದಿನ ನಿಸರ್ಗದತ್ತವಾದ, ಪ್ರಶಾಂತ ಸ್ಥಳದಲ್ಲಿ ಸೇರುತ್ತಾರೆ. ನಂತರ ಎಲ್ಲರೂ ತಮ್ಮ ತಮ್ಮ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುತ್ತಾರೆ. ನಂತರ ಇಬ್ಬಿಬ್ಬರನ್ನು ಒಂದು ಮರದಡಿ ಕೂರಿಸಲಾಗುತ್ತದೆ. ಈ ಇಬ್ಬರಿಗೆ ಪರಸ್ಪರ ಗುರುತು ಪರಿಚಯವಿರುವುದಿಲ್ಲ. ಇಬ್ಬರೂ ಮಾತುಕತೆಯಲ್ಲಿ ತೊಡಗುತ್ತಾರೆ. 

Advertisement

ನೋಟದಿಂದ ಮನಸ್ಸು ತನ್ನಿಂದ ತಾನೇ ನಾನಾ ತರಹದ ಲೆಕ್ಕಾಚಾರ ಮತ್ತು ತೀರ್ಮಾನಗಳಿಗೆ ಬಂದುಬಿಡುತ್ತದೆ. ಅದಕ್ಕೇ ಇಲ್ಲಿ ಕಣ್ಣುಗಳಿಗೆ ಬಟ್ಟೆಕಟ್ಟಲಾಗುವುದರಿಂದ ಆತ್ಮೀಯ ಸಂಭಾಷಣೆ ಸಾಧ್ಯ ಎನ್ನುವುದು ಸಂಘಟಕರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next